ಕಾರ್ಯಾಗಾರ - ತರಬೇತಿ - ಶಿಬಿರ

7

ಕಾರ್ಯಾಗಾರ - ತರಬೇತಿ - ಶಿಬಿರ

Published:
Updated:

ಲ್ಯಾಂಡ್‌ಮಾರ್ಕ್ ಕ್ವಿಜ್

ಸಂಗೀತ ಮತ್ತು ಪುಸ್ತಕ ಮಾರಾಟ ಮಳಿಗೆ ಲ್ಯಾಂಡ್ ಮಾರ್ಕ್ ಮತ್ತು ಟಾಟಾ ಫೋಟಾನ್ ಸಹಯೋಗದ ಲ್ಯಾಂಡ್‌ಮಾರ್ಕ್ ಕ್ವಿಜ್‌ನ 8ನೇ ಆವೃತ್ತಿ ನವೆಂಬರ್ 1ರಂದು ನಡೆಯಲಿದೆ. ಖ್ಯಾತ ಕ್ವಿಜ್ ಮಾಸ್ಟರ್ ಡಾ. ನವೀನ್ ಜಯಕುಮಾರ್ ಇದನ್ನು ನಡೆಸಿಕೊಡಲಿದ್ದಾರೆ. ಉತ್ಸಾಹವಿರುವವರೆಲ್ಲರೂ ಇದರಲ್ಲಿ ಪಾಲ್ಗೊಳ್ಳಬಹುದು. ಪ್ರತಿ ತಂಡದಲ್ಲಿ ಮೂರು ಜನ ಸದಸ್ಯರಿರಬೇಕು ಎಂಬುದಷ್ಟೇ ಷರತ್ತು. ವಯೋಮಿತಿ ಇಲ್ಲ.ವಿಜೇತರಿಗೆ ರೂ.30 ಸಾವಿರ (ಪ್ರಥಮ), ರೂ 15 ಸಾವಿರ (ದ್ವಿತೀಯ), ರೂ. 9 ಸಾವಿರ (ತೃತೀಯ) ಬಹುಮಾನ ದೊರೆಯಲಿದೆ. ಅಲ್ಲದೆ ಉತ್ತಮ ಶಾಲಾ ತಂಡಕ್ಕೆ ರೂ.6 ಸಾವಿರ, ರನ್ನರ್‌ಅಪ್‌ಗೆ ರೂ.3 ಸಾವಿರ, ಉತ್ತಮ ಕಾಲೇಜು ತಂಡಕ್ಕೆ ರೂ.6 ಸಾವಿರ, ಉತ್ತಮ ಕಾರ್ಪೋರೆಟ್ ತಂಡಕ್ಕೆ ರೂ.6 ಸಾವಿರ ವಿಶೇಷ ಬಹುಮಾನ ಸಹ ನೀಡಲಾಗುವುದು. ಸ್ಪರ್ಧೆ ನೋಡಲು ಬರುವಪ್ರೇಕ್ಷಕರು ಸಹ ಆಕರ್ಷಕ ಚಬಹುಮಾನ ಗೆಲ್ಲುವ ಅವಕಾಶ ಇಲ್ಲಿ ಲಭ್ಯ. ಕೋರಮಂಗಲ ಫೋರಂ ಮಾಲ್ ಹಾಗೂ ಗರುಡಾ ಮಾಲ್‌ನಲ್ಲಿರುವ ಲ್ಯಾಂಡ್‌ಮಾರ್ಕ್ ಮಳಿಗೆಯಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಬಹುದು. www.landmarkontheenet.com  ಇಲ್ಲಿಂದಲೂ ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

ಸ್ಥಳ: ಗುಡ್‌ಶೆಫರ್ಡ್ ಆಡಿಟೋರಿಯಂ, ರೆಸಿಡೆನ್ಸಿ ರಸ್ತೆ, ಸೆಂಟ್ ಜೋಸೆಫ್ ಪಿಯು ಕಾಲೇಜು ಎದುರು. ಮಾಹಿತಿಗೆ: 6577 1227.  4240 4240.ಟೈಂಔಟ್ ಬರಹ ಸ್ಪರ್ಧೆ

ರಿಲಯನ್ಸ್ ಟೈಂಔಟ್ ಮಕ್ಕಳಿಗಾಗಿ ಆಯೋಜಿಸಿದ್ದ ಬರವಣಿಗೆ ಸ್ಪರ್ಧೆಯ ಸಮಾರೋಪ ಶನಿವಾರ ನಡೆಯಲಿದೆ.

ಈ ಸಂದರ್ಭದಲ್ಲಿ 2010ರ ಸ್ಪರ್ಧೆ ವಿಜೇತ ಮಕ್ಕಳ ಕಥೆಯನ್ನು ಒಳಗೊಂಡ ಪುಸ್ತಕವನ್ನು ನಿವೃತ್ತ ಐಎಎಸ್ ಅಧಿಕಾರಿಗಳಾದ ತೆರೆಸಾ ಭಟ್ಟಾಚಾರ್ಯ ಹಾಗೂ ಡಿ.ಕೆ.ಭಟ್ಟಾಚಾರ್ಯ ಲೋಕಾರ್ಪಣೆ ಮಾಡಲಿದ್ದಾರೆ.ತೀರ್ಪುಗಾರರಾಗಿ ಭಾಗವಹಿಸಿದ್ದ ಶಶಿ ದೇಶಪಾಂಡೆ, ವೀಣಾ ಶೇಷಾದ್ರಿ, ಅಂಬಿಕಾ ಆನಂದ್ ಮತ್ತು ಡಾ. ಮಾಳವಿಕಾ ಕಪೂರ್ ಅವರು 2011ನೇ ಸಾಲಿನ ಸ್ಪರ್ಧೆವಿಜೇತ ಮಕ್ಕಳ ಹೆಸರು ಪ್ರಕಟಿಸಲಿದ್ದಾರೆ.

ಸ್ಥಳ: ರಿಲಯನ್ಸ್ ಟೈಂಔಟ್, ಕನ್ನಿಂಗ್‌ಹ್ಯಾಮ್ ರಸ್ತೆ. ಮಧ್ಯಾಹ್ನ 3.30. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry