ಕಾರ್ಯಾಗಾರ - ತರಬೇತಿ - ಶಿಬಿರ

7

ಕಾರ್ಯಾಗಾರ - ತರಬೇತಿ - ಶಿಬಿರ

Published:
Updated:

ನಾಯಕತ್ವ ಸಾಮರ್ಥ್ಯ

ಬ್ರಿಟಿಶ್ ಲೈಬ್ರರಿಯು `ನಾಯಕತ್ವ ಸಾಮರ್ಥ್ಯ~ ವಿಷಯದ ಕುರಿತು ಇದೇ 12ರಂದು (ಭಾನುವಾರ) ಕಾರ್ಯಾಗಾರವನ್ನು ಹಮ್ಮಿಕೊಂಡಿದೆ.ಯಾವುದೇ ಸಂಸ್ಥೆ ನಿರ್ದೇಶಕರು, ಪ್ರಾಂಶುಪಾಲರು, ಮೇಲ್ವಿಚಾರಕರು, ಉದ್ಯೋಗಿಗಳು ಈ ಕಾರ್ಯಾಗಾರದಿಂದ ಉಪಯೋಗ ಪಡೆದುಕೊಳ್ಳಬಹುದು.

ನಾಯಕತ್ವ ಎಂದರೇನು? ನಾಯಕತ್ವದ ವಿಧಗಳು, ನಾಯಕತ್ವದ ಸಾಮರ್ಥ್ಯ, ಬದಲಾಗುತ್ತಿರುವ ನಾಯಕತ್ವದ ಕಲ್ಪನೆ ಇವುಗಳನ್ನು ಕಾರ್ಯಾಗಾರದಲ್ಲಿ ವಿವರಿಸಲಾಗುವುದು.ಲಿಂಕ್‌ಕಮ್ಯುನಿಕೇಶನ್ಸ್ ಸಂಸ್ಥೆಯ  ರಾಣಿ ಇನ್ನಸ್ ಕಾರ್ಯಾಗಾರವನ್ನು ನಡೆಸಿಕೊಡಲಿದ್ದಾರೆ. ಫೆಬ್ರುವರಿ 12ರ ಭಾನುವಾರ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಕಾರ್ಯಾಗಾರ ನಡೆಯಲಿದೆ. ಸ್ಥಳ: ಬ್ರಿಟಿಷ್ ಲೈಬ್ರರಿ, 23,ಕಸ್ತೂರ್‌ಬಾ ರಸ್ತೆ. ಮಾಹಿತಿಗೆ: 22489220.ಉಚಿತ ನೇತ್ರ ತಪಾಸಣೆ

ಹೈಪರ್‌ಸಿಟಿಯು ಅಗರ್‌ವಾಲ್ ಕಣ್ಣಿನ ಆಸ್ಪತ್ರೆ ಸಹಯೋಗದೊಂದಿಗೆ ಶನಿವಾರ (ಫೆ.) `ವಿಷನ್ ಫಾರ್ ಆಲ್~ ಹೆಸರಿನಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ಆಯೋಜಿಸಿದೆ.  ಶಿಬಿರದಲ್ಲಿ ವೈದ್ಯಕೀಯ ಸಲಹೆಯನ್ನು ಪಡೆಯಬಹುದು.

ಸ್ಥಳ: ಹೈಪರ್‌ಸಿಟಿ ಮಳಿಗೆ, ರಾಯಲ್ ಮೀನಾಕ್ಷಿ ಮಾಲ್, ಬನ್ನೇರುಘಟ್ಟ ರಸ್ತೆ.  ಬೆಳಿಗ್ಗೆ 10.30ರಿಂದ ಮಧ್ಯಾಹ್ನ 4.

ಮಾಹಿತಿಗೆ: 89714 98865ಆರೋಗ್ಯ ತಪಾಸಣಾ ಶಿಬಿರ

ವಿಕಾಸ ಡಯಾಗ್ನೋಸ್ಟಿಕ್ಸ್: ಶನಿವಾರದಿಂದ (ಫೆ.11ರಿಂದ 14) ಮಂಗಳವಾರದವರೆಗೆ ಮಧುಮೇಹ , ರಕ್ತದೊತ್ತಡ, ಕಣ್ಣು ಹಾಗೂ ಹಲ್ಲುಗಳ ಉಚಿತ ತಪಾಸಣಾ ಶಿಬಿರ ಆಯೋಜಿಸಿದೆ.

ಸ್ಥಳ: ನಂ 24, ಹೊಂಗಸಂದ್ರ ಬಸ್ ನಿಲ್ದಾಣ, ಆಂಜನೇಯ ದೇವಸ್ಥಾನ ಸಮೀಪ, ಹೊಂಗಸಂದ್ರ. ಬೆಳಿಗ್ಗೆ 6.30ರಿಂದ ರಾತ್ರಿ10. ಮಾಹಿತಿಗೆ: 91413 37171.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry