ಬುಧವಾರ, ಮೇ 12, 2021
17 °C

ಕಾರ್ಯಾಗಾರ ತರಬೇತಿ ಶಿಬಿರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೀತಿ ಕಥೆಗಳಿಗೆ ಆಹ್ವಾನ

ರಂಗಪ್ರಿಯ ಸಾಂಸ್ಕೃತಿಕ ವೇದಿಕೆಯು ಪ್ರತಿ ವರ್ಷದಂತೆ ಈ ಬಾರಿಯೂ ನೀತಿ ಕಥೆಗಳನ್ನು ಆಹ್ವಾನಿಸಿದೆ.1ರಿಂದ 7ನೇ ತರಗತಿ ಮಕ್ಕಳ ಮಟ್ಟಕ್ಕೆ ಪೂರಕವಾಗಿರುವ ಕಥೆಗಳನ್ನು ಡಿ.ಟಿ.ಪಿ ಮಾಡಿ ಕಳುಹಿಸಬೇಕು. ಕಥೆಗಳನ್ನು ಕಳುಹಿಸಲು ಭಾನುವಾರ (ಏ.15) ಕಡೆಯ ದಿನ. ಸ್ಥಳ: ರಂಗಪ್ರಿಯ ಸಾಂಸ್ಕೃತಿಕ ವೇದಿಕೆ, ನಂ153, ಅಭಯರಂಗ, 1ನೇ ಮುಖ್ಯರಸ್ತೆ, ಗೋವಿನಾಯಕನ ಹಳ್ಳಿ, ಕುಮಾರಸ್ವಾಮಿ ಬಡಾವಣೆ 2ನೇ ಹಂತ.

ಮಾಹಿತಿಗೆ: 95356 73550, 26667889ಉಚಿತ ವೈದ್ಯಕೀಯ ಸಲಹೆ

ಹೀಂಜ್‌ ನ್ಯೂಟ್ರಿಷನ್ ಫೌಂಡೇಷನ್ ಆಫ್ ಇಂಡಿಯಾ (ಎಚ್‌ಎನ್‌ಎಫ್‌ಐ)  ಮಂಗಳವಾರ (ಏ.10) ಪೌಷ್ಟಿಕತೆ ಮತ್ತು ಪಥ್ಯ ಕುರಿತು ತಜ್ಞ ವೈದ್ಯರಿಂದ ಉಚಿತ ಸಮಾಲೋಚನಾ ಶಿಬಿರ ಹಮ್ಮಿಕೊಂಡಿದೆ.`ನ್ಯೂಟ್ರಿ ಲೈಫ್ ಕ್ಲಿನಿಕ್  ಪ್ರಾರಂಭಿಸಿರುವ ಎಚ್‌ಎನ್‌ಎಫ್‌ಐ ಮಂಗಳವಾರ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಉಚಿತ ಭೇಟಿಗೆ ಅವಕಾಶ ಕಲ್ಪಿಸಿದೆ.

ಶೀಲಾ ಕೃಷ್ಣಸ್ವಾಮಿ ಮಾಹಿತಿ ನೀಡಿ ಸಮಾಲೋಚಿಸಲಿದ್ದಾರೆ.ಪ್ರತಿಯೊಬ್ಬರೂ ತಮ್ಮ ದೈನಂದಿನ ಪಥ್ಯಕ್ಕೆ ಗಮನ ನೀಡಬೇಕು ಮತ್ತು  ಆಹಾರ ಪದ್ಧತಿಯಲ್ಲಿ ಕೊಂಚ ಬದಲಾವಣೆ ಮಾಡಿಕೊಳ್ಳುವುದರಿಂದ ಗಮನಾರ್ಹ ಬದಲಾವಣೆ ಮಾಡಿಕೊಳ್ಳಬಹುದು ಎನ್ನುತ್ತಾರೆ ಶೀಲಾ ಕೃಷ್ಣಸ್ವಾಮಿ.ಸಲಹೆ ಪಡೆಯಲು ಇಚ್ಚಿಸುವವರು ಮುಂಚಿತವಾಗಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು.

ನೋಂದಣಿ ಮತ್ತು ಮಾಹಿತಿಗೆ: 9538064545

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.