ಬುಧವಾರ, ಮೇ 12, 2021
27 °C

ಕಾರ್ಯಾಗಾರ ತರಬೇತಿ ಶಿಬಿರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಂಜೆತನ: ಉಚಿತ ತಪಾಸಣಾ ಶಿಬಿರ

ಬಸವನಗುಡಿಯ ದಿವಾನ್ ಮಾಧವ ರಾವ್ ರಸ್ತೆಯಲ್ಲಿರುವ `ಗುಣಶೀಲ ಆಸ್ಪತ್ರೆ'ಯಲ್ಲಿ ಜೂನ್ 15 ರಂದು ಬಂಜೆತನ ಮತ್ತು ಪದೇ ಪದೇ ಸಂತಾನ ವೈಫಲ್ಯದಿಂದ ಬಳಲುತ್ತಿರುವ ದಂಪತಿಗಳಿಗೆ ಉಚಿತ ತಪಾಸಣಾ ಶಿಬಿರ ಹಮ್ಮಿಕೊಂಡಿದೆ.ಶಿಬಿರ ಬೆಳಿಗ್ಗೆ 8.30 ರಿಂದ ಮಧ್ಯಾಹ್ನ 2.30 ರವರೆಗೆ ನಡೆಯುತ್ತದೆ. ಗುಣಶೀಲ ಆಸ್ಪತ್ರೆಯ ಸಂತಾನ ಚಿಕಿತ್ಸೆ ತಜ್ಞೆ ಮತ್ತು ನಿರ್ದೇಶಕಿ ಡಾ. ದೇವಿಕಾ ಗುಣಶೀಲ ಮತ್ತು ವೈದ್ಯರ ತಂಡ ಮಕ್ಕಳಿಲ್ಲದ ದಂಪತಿಗಳಿಗೆ ಉಚಿತ ತಪಾಸಣೆ ಮತ್ತು ಸಲಹೆಗಳನ್ನು ನೀಡಲಿದ್ದಾರೆ.ಇದಲ್ಲದೇ, ತಪಾಸಣೆಗೊಳಗಾಗುವ ದಂಪತಿಗಳಿಗೆ ಉಚಿತ ಸಾಮಾನ್ಯ ಪರೀಕ್ಷೆ, ರಕ್ತ ತಪಾಸಣೆ, ಸ್ಕ್ಯಾನಿಂಗ್ ನಡೆಸಲಿದೆ. ಮಾಹಿತಿಗಾಗಿ: 080-41312600, 26673585.ಗ್ರೀನಿಝೆನ್‌ನಿಂದ ವಿಜ್ಞಾನ ಉತ್ಸವ

ವಿಶ್ವ ಪರಿಸರ ದಿನದ ಅಂಗವಾಗಿ ಜೂನ್ 16ರಂದು  ಗ್ರೀನಿಝೆನ್ ನಗರದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಮಕ್ಕಳಿಂದ ಪ್ರಾತ್ಯಕ್ಷಿಕೆಗಳು, ಬೀದಿ ನಾಟಕ ಪ್ರದರ್ಶನ ನಡೆಯಲಿದೆ. ವಸ್ತುಗಳ ಮರುಬಳಕೆ, ಸೀಮಿತ ಸಂಪತ್ತನ್ನು ಸಮರ್ಪಕವಾಗಿ ಬಳಸುವ ಬಗ್ಗೆ ಮಾಹಿತಿ ನೀಡಲಿದ್ದಾರೆ.ಬೆಳಗ್ಗೆ 7.30ರಿಂದ ಫ್ರೀಡಂಪಾರ್ಕ್ ನಿಂದ ಕಬ್ಬನ್ ಪಾರ್ಕ್‌ವರೆಗೆ ಹಸಿರು ಜಾಥಾ ನಡೆಯಲಿದೆ. ಇದರಲ್ಲಿ ಮಕ್ಕಳು, ಯುವಕರು ಭಾಗವಹಿಸಲಿದ್ದಾರೆ. 9.30ಕ್ಕೆ ಫ್ರೀಡಂಪಾರ್ಕ್‌ನಲ್ಲಿ ವನಮಹೋತ್ಸವಕ್ಕೆ ಚಾಲನೆ ನೀಡುವ ಕಾರ್ಯಕ್ರಮವಿದೆ.10.30ಕ್ಕೆ 4ರಿಂದ 13 ವಯಸಿನ ಮಕ್ಕಳಿಗೆ ವಿವಿಧ ಸ್ಪರ್ಧೆಗಳಿವೆ. 11.30ಕ್ಕೆ ವಿಜ್ಞಾನ ಪ್ರದರ್ಶನವಿದೆ.ನೋಂದಣಿಗಾಗಿ: scienceutsav@gmail.com

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.