ಶುಕ್ರವಾರ, ಮೇ 27, 2022
21 °C

ಕಾರ್ಯಾಗಾರ ತರಬೇತಿ ಶೀಬಿರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಸಗ್ರಹಣ

ರಂಗಶಂಕರ ನಾಟಕೋತ್ಸವದ ಅಂಗವಾಗಿ ಶುಕ್ರವಾರ, ಶನಿವಾರ ಮತ್ತು ಭಾನುವಾರ ರಂಗ ಮತ್ತು ಕಲಾ ರಸಗ್ರಹಣ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿದೆ.ಇದು ನಾಟಕಗಳ ವೀಕ್ಷಣೆ ಜತೆಗೆ ಸಂವಾದವನ್ನು ಸಹ ಒಳಗೊಂಡಿದೆ. ಸಂವಾದದಲ್ಲಿ ರಂಗ ತಜ್ಞರು, ಕಲಾವಿದರು, ನಿರ್ದೇಶಕರು, ಸಂಭಾಷಣೆಕಾರರು ಹಾಗೂ ಸಂಗೀತ ನಿರ್ದೇಶಕರು ಪಾಲ್ಗೊಂಡು ಕಲಾ ರಸಗ್ರಹಣದಲ್ಲಿ ಹೊಂದಿರಬೇಕಾದ ಸೂಕ್ಷ್ಮ ವ್ಯತ್ಯಾಸ ಕುರಿತು ಚರ್ಚಿಸಲಿದ್ದಾರೆ.ಈ ಶಿಬಿರದಲ್ಲಿ ದ್ರುಪದ್ ಗಾಯಕ ರಮಾಕಾಂತ ಗುಂಡೇಚಾ, ಮಾರ್ಗಿ ಮಧು, ಕಲಾವಿದ ಬಾಲನ್ ನಂಬಿಯಾರ್, ಸುನಿಲ್ ಕೊಠಾರಿ ತಮ್ಮ ಅನುಭವ ಹಂಚಿಕೊಳ್ಳಲಿದ್ದಾರೆ.

ಪ್ರತಿದಿನ 8 ರಿಂದ 10 ತಾಸು ತರಗತಿ ನಡೆಯಲಿದೆ. ಸ್ಥಳ: ಜೆಪಿ ನಗರ 2ನೇ ಹಂತ.ಆರೋಗ್ಯ ಶಿಬಿರ

ಪಿ.ಡಿ.ಹಿಂದೂಜಾ ಸಿಂಧಿ ಆಸ್ಪತ್ರೆ ತನ್ನ ಸುವರ್ಣ ಮಹೋತ್ಸವದ ಅಂಗವಾಗಿ  ಗುರುವಾರ, ಶುಕ್ರವಾರ ಮತ್ತು ಶನಿವಾರ ಹರ್ನಿಯಾ, ಮೂಲವ್ಯಾಧಿ ಮತ್ತು ಮೂತ್ರಕೋಶ ತಪಾಸಣಾ ಶಿಬಿರ ಏರ್ಪಡಿಸಿದೆ. ಸ್ಥಳ: ಹಿಂದೂಜಾ ಆಸ್ಪತ್ರೆ, ಸಂಪಂಗಿರಾಮನಗರ. ಬೆಳಿಗ್ಗೆ 9ರಿಂದ 11. ಮಾಹಿತಿಗೆ: 4903 0303.ತಲಸೇಮಿಯಾ ಜಾಗೃತಿ

ಸಂಕಲ್ಪ ಇಂಡಿಯಾ ಫೌಂಡೇಷನ್ ಶನಿವಾರ ರಕ್ತಕ್ಕೆ ಸಂಬಂಧಿಸಿದ ಅನುವಂಶಿಕ ಕಾಯಿಲೆ ತಲಸೇಮಿಯಾ ಬಗ್ಗೆ ಜಾಗೃತಿ ಮೂಡಿಸಲು ಕಬ್ಬನ್ ಪಾರ್ಕ್‌ನಿಂದ ಸ್ವಾತಂತ್ರ್ಯ ಉದ್ಯಾನದ ವರೆಗೆ ರ‌್ಯಾಲಿ ಏರ್ಪಡಿಸಿದೆ. ಇದೇ ಸಂದರ್ಭದಲ್ಲಿ ತಲಸೇಮಿಯಾ ಕಾಯಿಲೆ ಪೀಡಿತರಿಗೆ ಹಗಲು ಚಿಕಿತ್ಸಾಲಯವನ್ನೂ ಆರಂಭಿಸಲಾಗುತ್ತದೆ.ಐಜಿಐಎಚ್‌ಸಿ ನಿರ್ದೇಶಕ ಡಾ. ಶಿವಾನಂದ, ಅಪ್ಲೈಡ್ ಮೆಟೀರಿಯಲ್ಸ್ ಅಧ್ಯಕ್ಷ ಅನಿಂದಾ ಮೈತ್ರಾ, ಸಂಕಲ್ಪ ಅಧ್ಯಕ್ಷ ಲಲಿತ್ ಪರ್ಮಾರ್ ಮತ್ತಿತರರು ಭಾಗವಹಿಸಲಿದ್ದಾರೆ. ಮಾಹಿತಿಗೆ: 99001 61551.ಇಂಟರ್ನೆಟ್‌ನಲ್ಲಿ ಹರಿಕಥಾಮೃತಸಾರ

ಪೂರ್ಣಪ್ರಜ್ಞ ಸಂಶೋಧನ ಮಂದಿರದ ನಿರ್ದೇಶಕ ನಾಗಸಂಪಿಗೆ ಆಚಾರ್ ಅವರು ನೀಡುತ್ತಿರುವ `ಶ್ರೀಮದ್ ಹರಿಕಥಾಮೃತಸಾರ~ ತರಗತಿಗಳ ವಿಡಿಯೊ ಪ್ರವಚನವನ್ನು ಇಂಟರ್‌ನೆಟ್‌ನಲ್ಲೂ ನೇರವಾಗಿ ನೋಡುವ ಅವಕಾಶ ಕಲ್ಪಿಸಲಾಗಿದೆ.ಆಸಕ್ತರು ಇದಕ್ಕಾಗಿ ಶನಿವಾರ, ಭಾನುವಾರ ಸಂಜೆ 7.30 ರಿಂದ 8.30ರ ವರೆಗೆ www.poornaprajna.com  ನಲ್ಲಿ ಬ್ರೌಸ್ ಮಾಡಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.