ಗುರುವಾರ , ಮೇ 26, 2022
23 °C

ಕಾರ್ಯಾಚರಣೆಗೆ ತಡೆ : ವಾರ ಕಾಲಾವಕಾಶ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೇಡಂ: ಸೋಮವಾರ ಸಹಾಯಕ ಆಯುಕ್ತರ ಕಾರ್ಯಾಲದಲ್ಲಿ ಅಧಿಕ ಸಂಖ್ಯೆಯಲ್ಲಿ ನೆರೆದಿದ್ದ ವ್ಯಾಪಾರಸ್ಥರು, ರಾಜಕೀಯ ಮುಖಂಡರು, ಕಟ್ಟಡಗಳ ಮಾಲೀಕರು ಸಭೆ ಸೇರಿ ಅಧಿಕಾರಿಗಳ ಸಮ್ಮುಖದಲ್ಲಿ ನಿಖರವಾದ ಮಾಹಿತಿ ಪಡೆದರು.ಗುಲ್ಬರ್ಗ-ಕೊಡಂಗಲ್ ರಾಜ್ಯ ರಸ್ತೆ ಹೆದ್ದಾರಿಗೆ ಹೊಂದಿಕೊಂಡಂತೆ 100 ಅಡಿಗಳ ಅಂತರ. ಗುಲ್ಬರ್ಗ ಕ್ರಾಸ್ ದಿಂದ ಬಸ್ ನಿಲ್ದಾಣವರೆಗೆ 100 ಅಡಿ. ಪ್ರವಾಸಿ ಮಂದಿರದಿಂದ ಶ್ರೀ ಕರಡೋಗಿರಿ ಹನುಮಾನ ಮಂದಿರ (ರೈಲ್ವೆ ನಿಲ್ದಾಣ) ವರೆಗೆ 60 ಅಡಿ. ಶ್ರೀ ಹನುಮಾನ ಮಂದಿರದಿಂದ ಕಿರಾಣಿ ಬಜಾರ್ ಮಾರ್ಗವಾಗಿ ಚೌರಸ್ತಾವರೆಗೆ 52 ಅಡಿ ಮತ್ತು ವೆಂಕಟೇಶ ನಗರ-ಸಾದೇಸಾಬ್ ದರ್ಗಾ-ಸಿನೇಮಾ ರಸ್ತೆ, ಶ್ರೀ ಕೊತ್ತಲ ಬಸವೇಶ್ವರ ದೇವಾಲಯ ಮಾರ್ಗವಾಗಿ ಚಿಂಚೋಳಿ ಕೂಡು ರಸ್ತೆಗೆ ಸೇರುವ ವರ್ತುಲ ರಸ್ತೆ 72 ಅಡಿ ಎಂದು ಗುರುತಿಸಿರುವುದಾಗಿ ಅಧಿಕಾರಿಗಳು ನೆರೆದಿದ್ದ ಸಾರ್ವಜನಿಕರಿಗೆ, ವ್ಯಾಪಾರಸ್ಥರಿಗೆ ಮತ್ತು ಈ ಮಾರ್ಗಗಳಲ್ಲಿ ಬರುವ ಕಟ್ಟಡಗಳ ಮಾಲೀಕರಿಗೆ ತಿಳಿಸಿದರು ಎಂದು ಮುಕ್ರಂಖಾನ ‘ಪ್ರಜಾವಾಣಿ’ ಗೆ ತಿಳಿಸಿದರು.ಅನೇಕರ ಸಲಹೆ, ಮನವಿ ಆಲಿಸಿದ ಸಹಾಯಕ ಆಯುಕ್ತರು ವಿದ್ಯುತ್ ಕಟಿಂಗ್ ಮಶೀನ್ ತರಿಸಿಕೊಂಡು ಕಟ್ಟಡಗಳನ್ನು ಸುರಕ್ಷಿತವಾಗಿ ತೆಗೆಯಲು ವಿದ್ಯುತ್ ಪೂರೈಕೆ ಮತ್ತು 6 ದಿನಗಳ ಕಾಲಾವಕಾಶಕ್ಕೆ ಸಮ್ಮತಿಸಿದ್ದಾರೆ ಎಂದು ಗೋಪಿಕಿಶನ್ ಲಡ್ಡಾ ಹೇಳಿದರು. ಸಭೆಯಲ್ಲಿ ಮಜಿ ಉಪ ಸಭಾಪತಿ ಚಂದ್ರಶೇಖರರೆಡ್ಡಿ ದೇಶಮುಖ ಮದನಾ, ನಿವೃತ್ತ ಜಿಲ್ಲಾ ನ್ಯಾಯಾಧೀಶ ಶ್ರೀನಿವಾಸರಾವ ಕುಲಕರ್ಣಿ, ಪುರಸಭೆ ಹಾಲಿ ಸದಸ್ಯ ಮತ್ತು ಮಾಜಿ ಅಧ್ಯಕ್ಷ ಎಕ್ಬಾಲ್ ಖಾನ, ಅಧ್ಯಕ್ಷ ಶಿವರುದ್ರಪ್ಪ ಕೋಳಕೂರ, ಉದ್ಯಮಿ ತಾಪಡಿಯಾ, ಕಾಬರಾ, ಬಜಾಜ್ ಮತ್ತು ಅಧಿಕ ಸಂಖ್ಯೆಯಲ್ಲಿ ವ್ಯಾಪಾರಸ್ಥರು, ವಿವಿಧ ಪಕ್ಷಗಳ ಮುಖಂಡರು ಇದ್ದರು.ಶನಿವಾರ 12ರ ಬೆಳಿಗ್ಗೆಯಿಂದ ಪಟ್ಟಣದಲ್ಲಿ ಮಿಂಚಿನಂತೆ ಕಾರ್ಯಾಚರಣೆ ಮೂಲಕ ವ್ಯಾಪಾರ ಮತ್ತು ಜನಜೀವನ ಅಸ್ತವ್ಯಸ್ಥೆಗೊಂಡಿದೆ. ಶುಕ್ರವಾರ ಮಧ್ಯರಾತ್ರಿಯಿಂದ ಸ್ವಯಂ ಪ್ರೇರಣೆಯಿಂದ ತೆರವುಗೊಳಿಸುವಲ್ಲಿ ಮುಂದಾಗಿದ್ದ ವ್ಯಾಪಾರಸ್ಥರಿಗೆ ಶನಿವಾರ ಬೆಳಿಗ್ಗೆ ನಿಖರ ಅಳತೆ ಪಡೆದು ಮಳಿಗೆಗಳಲ್ಲಿದ್ದ ಸಾಮಗ್ರಿಗಳನ್ನು ಸಾಗಿಸಲು ಎಲ್ಲಿಲ್ಲದ ಪ್ರಯಾಸಪಟ್ಟರು.ಯಾರಿಗೂ ನಿಖರ ಅಳತೆ ತಿಳಿಯದೇ ಭಯದ ನೆರಳಲ್ಲಿ ಸಾಗಿದ್ದ ವ್ಯಾಪಾರಸ್ಥರು ಮತ್ತು ಮಳಗೆಗಳ ಮಾಲೀಕರು ಕಟ್ಟಡಗಳನ್ನು ಧ್ವಂಸಮಾಡುವಲ್ಲಿ ಕಾರ್ಮಿಕರನ್ನು ಕರೆತರುವಲ್ಲಿ ಮತ್ತು ಅವರವರ ಬೇಡಿಕೆಗೆ ಅನುಗುಣವಾಗಿ ನಿರ್ಧರಿಸುವಲ್ಲಿ 48 ಗಂಟೆಗಳು ಮಿಕ್ಕು ಅನ್ನ-ನೀರಿಲ್ಲದೇ ಪರದಾಡುವ ದೃಶ್ಯದ ಕರಿನೆರಳಿನ ಮಧ್ಯೆ 2-3 ಪಟ್ಟು ಹೆಚ್ಚಿನ ಕೂಲಿ ನೀಡುವ ಮೂಲಕ ಕಟ್ಟಡಗಳನ್ನು ಧ್ವಂಸ ಮಾಡಿಕೊಳ್ಳಲು ಮುಂದಾದರು. ಏತನ್ಮಧ್ಯೆ ಕಿರಾಣಿ ಬಜಾರ ಹಿಂದೆ ಮತ್ತು ಮುಂದೆ ಮನೆ ಮಾಡಿಕೊಂಡು ಕುಟುಂಬದೊಂದಿಗೆ ಇರುವ ಅನೇಕರಿಗೆ ವಿದ್ಯುತ್, ಕುಡಿಯುವ ನೀರಿನ ಸರಬರಾಜು ಇಲ್ಲದೇ ಪ್ರಯಾಸಪಟ್ಟರು. ಮೇಲಾಗಿ ಕಟ್ಟಡಗಳ ಧ್ವಂಸದಲ್ಲಿ ಎಲ್ಲಡೆಯೂ ಧೂಳು.ಜೆಸಿಬಿ ಯಂತ್ರ ಬಳಸಿದಲ್ಲಿ ಕಟ್ಟಡಕ್ಕೆ ಎಲ್ಲಿಲ್ಲದ ಧಕ್ಕೆ ಉಂಟಾಗಿ ಸಂಪೂರ್ಣ ಕಟ್ಟಡ ಹಾಳಾಗುತ್ತದೆ ಎಂಬ ಭೀತಿ ಮನೆ ಮಾಡಿರುವ ಹಿನ್ನಲೆಯಲ್ಲಿ ಎಲ್ಲರೂ ತಮ್ಮ ಕಟ್ಟಡಗಳ ಸುರಕ್ಷತೆಗಳ ಮಧ್ಯೆ ಕೆಡುವಲ್ಲಿ ವಿಶೇಷ ಆಸಕ್ತಿ ವಹಿಸಿದ್ದರು. ಪುರಸಭೆ ಪ್ರಸಕ್ತ ಎಲ್ಲಡೆಯೂ ಬಿದ್ದ ಕಟ್ಟಡಗಳ ಅವಶೇಷಗಳನ್ನು ತೆಗೆದು ನಗರ ಸ್ವಚ್ಚ ಮಾಡುವಲ್ಲಿ ನಿರತವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.