ಕಾರ್ಯಾಚರಣೆ ಚುರುಕುಗೊಳಿಸಿ

7

ಕಾರ್ಯಾಚರಣೆ ಚುರುಕುಗೊಳಿಸಿ

Published:
Updated:

ರಾಮನಗರ: ರಾಜ್ಯದಲ್ಲಿ ನಕ್ಸಲರ ಹಾವಳಿ ಹತ್ತಿಕ್ಕಲು ಕಾರ್ಯಾಚರಣೆ ತೀವ್ರಗೊಳಿಸುವಂತೆ ಪೊಲೀಸ್ ಮಹಾ ನಿರ್ದೇಶಕರಿಗೆ ಸೂಚಿಸಿರುವುದಾಗಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ತಿಳಿಸಿದರು.ಮಾಗಡಿಯ ಶ್ರೀರಂಗಸೇವಾ ಟ್ರಸ್ಟ್ ವತಿಯಿಂದ ಭಾನುವಾರ ನಡೆದ ಸಾಮಾಜಿಕ ಸೇವಾ ಕಾರ್ಯಗಳ ಉದ್ಘಾಟನೆ ಹಾಗೂ ರಂಗನಾಥಸ್ವಾಮಿಯ ಉತ್ಸವ ಮೂರ್ತಿಗೆ ನೂತನ ವಜ್ರ ಕಿರೀಟಧಾರಣಾ ಮಹೋತ್ಸವಕ್ಕೆ ಚಾಲನೆ ನೀಡಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.ಬೆಳ್ತಂಗಡಿ ಸಮೀಪ ನಕ್ಸಲರು ನಡೆಸಿರುವ ದಾಳಿಯ ಕುರಿತು ಮಾಹಿತಿ ಪಡೆದಿದ್ದೇನೆ. ಈ ಘಟನೆಗೆ ಕಾರಣಕರ್ತರಾದವರನ್ನು ಮೂರು ದಿನಗಳಲ್ಲಿ ಬಂಧಿಸಿ ವರದಿ ನೀಡುವಂತೆ ಪೊಲೀಸರಿಗೆ ಆದೇಶಿಸಿರುವುದಾಗಿ ಅವರು ಪ್ರತಿಕ್ರಿಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry