ಕಾರ್ಯಾಚರಣೆ ವಿವರ ಪಡೆದ ಪಾಕ್ ಪ್ರಧಾನಿ

ಬುಧವಾರ, ಜೂಲೈ 17, 2019
27 °C

ಕಾರ್ಯಾಚರಣೆ ವಿವರ ಪಡೆದ ಪಾಕ್ ಪ್ರಧಾನಿ

Published:
Updated:

ಇಸ್ಲಾಮಾಬಾದ್ (ಐಎಎನ್‌ಎಸ್): ಬಲೂಚಿಸ್ತಾನ ಪ್ರಾಂತ್ಯದಲ್ಲಿನ ತಮ್ಮ ಕಾರ್ಯಾಚರಣೆಗಳಿಗಾಗಿ ಐಎಸ್‌ಐ ಮತ್ತು ಎಫ್‌ಸಿ (ಗಡಿ ಪೊಲೀಸರು) ಎಂದಿಗೂ ಸರ್ಕಾರದಿಂದ ಪ್ರಶ್ನೆಗಳನ್ನು ಎದುರಿಸದ ಬಗ್ಗೆ ಈಚೆಗೆ ಅರಿತ ಪಾಕ್ ಪ್ರಧಾನಿ ನವಾಜ್ ಷರೀಫ್ ದಿಗ್ಭ್ರಮೆಗೊಂಡಿದ್ದರು.ಕ್ವೆಟ್ಟಾದಲ್ಲಿ ಈಚೆಗೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ವಿಷಯ ಪ್ರಧಾನಿ ಗಮನಕ್ಕೆ ಬಂದಿತು ಎಂದು `ದಿ ನ್ಯೂಸ್' ಪತ್ರಿಕೆ ವರದಿ ಮಾಡಿದೆ.ಬಲೂಚಿಸ್ತಾನದಲ್ಲಿ 16 ವರ್ಷಗಳವರೆಗೆ ಐಎಸ್‌ಐ, ಎಫ್‌ಸಿ ನಡೆಸಿದ ಕಾರ್ಯಾಚರಣೆಗಳ ಬಗ್ಗೆ ಎಂದಿಗೂ ಸರ್ಕಾರ ಪ್ರಶ್ನಿಸಿರಲಿಲ್ಲ ಅಥವಾ ಇವರ ಕಾರ್ಯಾಚರಣೆಗೆ ಯಾವುದೇ ಸರ್ಕಾರ ಹೊಣೆ ವಹಿಸಿಕೊಂಡಿರಲಿಲ್ಲ ಎಂಬುದು ಸಭೆಯಲ್ಲಿ ಷರೀಫ್‌ಗೆ ತಿಳಿದು ಬಂತು.`16 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ನಮ್ಮ ಕಾರ್ಯಾಚರಣೆ ಬಗ್ಗೆ ವಿವರಿಸಲು ನಮ್ಮನ್ನು ಕೇಳಲಾಗಿದ್ದು ರಾಜಕೀಯ ಹೊಣೆಗಾರಿಕೆ ವಹಿಸಿಕೊಳ್ಳಲು ಸರ್ಕಾರ ಸಿದ್ಧವಾಗಿದೆ' ಎಂದು ಬಲೂಚಿಸ್ತಾನ ಎಫ್‌ಸಿ ಮತ್ತು ಐಎಸ್‌ಐ ಮುಖ್ಯಸ್ಥರ ವಕ್ತಾರರಾದ ಇನ್‌ಸ್ಪೆಕ್ಟರ್ ಜನರಲ್‌ರೊಬ್ಬರು ತಿಳಿಸಿರುವುದಾಗಿ ಪತ್ರಿಕೆ ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry