ಶುಕ್ರವಾರ, ಮೇ 14, 2021
21 °C

ಕಾರ್ ಕಂಟೇನರ್‌ಗೆ ಬೆಂಕಿ, ಹತ್ತು ಕಾರುಗಳು ಭಸ್ಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಡಚಣ (ವಿಜಾಪುರ): ಸಮೀಪದ ಹೊರ್ತಿ ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಸಂಭವಿಸಿದ ಅಪಘಾತದಲ್ಲಿ ಕಾರು ಸಾಗಿಸುತ್ತಿದ್ದ ಕಂಟೇನರ್‌ಗೆ ಬೆಂಕಿ ತಗುಲಿ ಅದರಲ್ಲಿದ್ದ 10 ಕಾರುಗಳು ಮತ್ತು ಗೂಡ್ಸ್ ಟ್ರಕ್ಕಿನಲ್ಲಿದ್ದ ವಿದ್ಯುತ್ ತಂತಿ ಸುಟ್ಟುಹೋಗಿದೆ.ಹುಂಡೈ ಐ-10 ಕಾರು ಗಳನ್ನು ಬೆಂಗಳೂರಿನಿಂದ ಪುಣೆಗೆ ಸಾಗುತ್ತಿದ್ದ ಕಂಟೇನರ್ ಹಾಗೂ ಎಲೆಕ್ಟ್ರಿಕ್ ತಂತಿ ಹೊತ್ತ ಗೂಡ್ಸ್ ಟ್ರಕ್ ಸೋಲಾಪೂರದಿಂದ ವಿಜಾಪುರ ಕಡೆಗೆ ಹೊರಟಿತ್ತು.ಘಟನೆ ಸಂಭವಿಸುತ್ತಿದ್ದಂತೆಯೇ ಎರಡೂ ವಾಹನಗಳ ಚಾಲಕರು ಪರಾರಿಯಾಗಿದ್ದಾರೆ. ಈ ಘಟನೆಯಲ್ಲಿ ಸುಮಾರು 1.50 ಕೋಟಿ ರೂ ನಷ್ಟ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ.ಅಗ್ನಿ ಶಾಮಕ ದಳದ ವಾಹನಗಳು ಬೆಂಕಿ ಆರಿಸುವಲ್ಲಿ ಸಫಲವಾಗಿವೆ. ಬೆಂಕಿ ನಂದಿಸಲು ಗ್ರಾಮಸ್ಥರೂ ಸಹಕರಿಸಿದ್ದಾರೆ.ಹೆದ್ದಾರಿಯ್ಲ್ಲಲಿ  ಸುಮಾರು ಒಂದು ಗಂಟೆ ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು. ರಸ್ತೆಯ ಎರಡೂ ಬದಿಗಳಲ್ಲಿ ನಾಲ್ಕಾರು ಕಿಲೋ ಮಿಟರ್‌ಗಳ ವರೆಗೆ ವಾಹನಗಳು ನಿಂತಿರುವುದು ಕಂಡು ಬಂದಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.