ಕಾಲಮಿತಿಯ ಯಕ್ಷಗಾನ ಅನಿವಾರ್ಯ

7

ಕಾಲಮಿತಿಯ ಯಕ್ಷಗಾನ ಅನಿವಾರ್ಯ

Published:
Updated:
ಕಾಲಮಿತಿಯ ಯಕ್ಷಗಾನ ಅನಿವಾರ್ಯ

ಮಂಗಳೂರು: `ಬದಲಾದ ಕಾಲಕ್ಕೆ ಹೊಂದುವಂತೆ ಕಾಲಮಿತಿಯ ಯಕ್ಷಗಾನ ಹಮ್ಮಿಕೊಳ್ಳುವುದು ಅನಿವಾರ್ಯ~ ಎಂದು ಶರವು ಮಹಾಗಣಪತಿ ದೇವಸ್ಥಾನದ ಆಡಳಿತ ಮೊಕ್ತೇಸರ ಶರವು ರಾಘವೇಂದ್ರ ಶಾಸ್ತ್ರಿ ಅಭಿಪ್ರಾಯಪಟ್ಟರು.ಯಕ್ಷಭಾರತಿ ಆಶ್ರಯದಲ್ಲಿ  ಪುರಭವನದಲ್ಲಿ ಹಮ್ಮಿಕೊಂಡಿರುವ ಯಕ್ಷೋತ್ಸವವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.`ಈ ಹಿಂದೆ ಕರಾವಳಿ ಜನರ ಪ್ರಧಾನ ಉದ್ಯೋಗ ಕೃಷಿ ಆಗಿತ್ತು. ಕೃಷಿಕರು ರಾತ್ರಿಯಿಂದ ಬೆಳಿಗ್ಗೆವರೆಗೆ ಯಕ್ಷಗಾನ ವೀಕ್ಷಿಸುತ್ತಿದ್ದರು. ಈಗ ಕಾಲ ಬದಲಾಗಿದ್ದು, ರಾತ್ರಿ ಇಡೀ ನಿದ್ದೆ ಬಿಡುವಷ್ಟು ವ್ಯವಧಾನ ಯಾರಿಗೂ ಇಲ್ಲ. ಹಾಗಾಗಿ ಇಂದಿನ ಅನುಕೂಲತೆಗೆ ತಕ್ಕಂತೆ ಯಕ್ಷಗಾನದ ಅವಧಿಯಲ್ಲೂ ಮಾರ್ಪಾಡು ಮಾಡುವುದು ಒಳಿತು~ ಎಂದರು.ಅಧ್ಯಕ್ಷತೆ ವಹಿಸಿದ್ದ ಕರ್ಣಾಟಕ ಬ್ಯಾಂಕ್ ಉಪ ಮಹಾ ಪ್ರಬಂಧಕ ರಮೇಶ್ ರಾವ್ ಮಾತನಾಡಿ, `ಯಕ್ಷಗಾನದ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಬೆಳೆಸಬೇಕಿದೆ. ಆಟ ನೋಡಲು ಬರುವಾಗ ಮಕ್ಕಳನ್ನೂ ಕರೆತನ್ನಿ~ ಎಂದರು.ಹಿರಿಯ ವಕೀಲ ಸೀತಾರಾಮ ಶೆಟ್ಟಿ, ಯಕ್ಷಭಾರತಿ ಗೌರವಾಧ್ಯಕ್ಷ ಜಿ.ಕೆ.ಭಟ್ ಸೇರಾಜೆ, ಹೊಸನಗರ ಮೇಳದ ವ್ಯವಸ್ಥಾಪಕ ಉಜಿರೆ ಅಶೋಕ ಭಟ್ ಮತ್ತಿತರರಿದ್ದರು.ಹೊಸನಗರ ಮೇಳದವರು ಸೋಮವಾರ ಕನಕಾಂಗಿ ಕಲ್ಯಾಣ ಹಾಗೂ ಕರ್ಣ ಪರ್ವ ಯಕ್ಷಗಾನ ಪ್ರದರ್ಶಿಸಿದರು. ಯಕ್ಷೋತ್ಸವ ಪ್ರಯುಕ್ತ 10 ದಿನ ಪುರಭವನದಲ್ಲಿ ಸಂಜೆ 5ರಿಂದ 10 ಗಂಟೆವರೆಗೆ ಯಕ್ಷಗಾನ ನಡೆಯಲಿದೆ. 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry