ಶನಿವಾರ, ಜನವರಿ 18, 2020
20 °C

ಕಾಲುಬಾಯಿ ರೋಗ: ಪಲ್ಸ್ ಪೋಲಿಯೊ ಮಾದರಿ ಅಭಿಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುವರ್ಣ ಸೌಧ (ಬೆಳಗಾವಿ): ಜಾನುವಾರುಗಳನ್ನು ಕಾಡುತ್ತಿರುವ ಕಾಲು ಬಾಯಿ ರೋಗಕ್ಕೆ  ಪಲ್ಸ್ ಪೋಲಿಯೊ ಮಾದರಿಯಲ್ಲಿ ಅಭಿ­ಯಾನ ನಡೆಸಿ ಲಸಿಕೆ ಹಾಕಲಾಗು­ವುದು ಎಂದು ಪಶು ಸಂಗೋಪನಾ ಸಚಿವ ಟಿ.ಬಿ.ಜಯಚಂದ್ರ ವಿಧಾನ ಪರಿಷತ್ತಿಗೆ ತಿಳಿಸಿದರು.ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ  ಕೇಳಿದ ಪ್ರಶ್ನೆಗೆ ಉತ್ತರಿಸಿ, ‘ಕಾಲು ಬಾಯಿ ರೋಗ ತಡೆಗೆ ಲಸಿಕೆಯೊಂದೇ ಮದ್ದು. ಮೂರು ವರ್ಷಗಳಲ್ಲಿ ಈ ಪ್ರಕ್ರಿಯೆ ಸರಿಯಾಗಿ ನಡೆಯದ ಕಾರಣ ರೋಗ ಹೆಚ್ಚು­ತ್ತಿದೆ. ಈಗ 5ನೇ ಸುತ್ತಿನ ಲಸಿಕೆ ಕಾರ್ಯಕ್ರಮ ನಡೆಯುತ್ತಿದೆ. ಲಸಿಕೆ ಹಾಕುವ ಕಾರ್ಯಕ್ಕೆ ಸಿಬ್ಬಂದಿ ಕೊರತೆ ಕಾಡುತ್ತಿದ್ದು ಬೇರೆ ಇಲಾಖೆಯಿಂದ ಸಿಬ್ಬಂದಿಯನ್ನು ಎರವಲು ಪಡೆಯಲಾಗುವುದು’ ಎಂದರು.

ಪ್ರತಿಕ್ರಿಯಿಸಿ (+)