ಕಾಲುವೆಗೆ ಚಕ್ಕಡಿ: ಮೂವರ ಸಾವು

7

ಕಾಲುವೆಗೆ ಚಕ್ಕಡಿ: ಮೂವರ ಸಾವು

Published:
Updated:

ಬೆಳಗಾವಿ: ಸವದತ್ತಿ ತಾಲ್ಲೂಕಿನ ಮುಗಳಿಹಾಳ ಗ್ರಾಮದ ಬಳಿ ಸೋಮವಾರ ರಾತ್ರಿ ಕಾಲುವೆಗೆ ಚಕ್ಕಡಿ ಗಾಡಿ ಉರುಳಿ ಬಿದ್ದು ಮೂವರು  ಮಹಿಳೆಯರು ಮೃತಪಟ್ಟಿದ್ದಾರೆ.

ಮೃತಪಟ್ಟವರನ್ನು ಮುಗುಳಿಹಾಳ ಗ್ರಾಮದ ಸಂಗೀತಾ ಎಲ್ಲಪ್ಪ ಗಾಣಿಗೇರ (14), ಈಕೆಯ ಅಕ್ಕ ಸರೋಜಿನಿ (18) ಮತ್ತು ಭಾರತಿ ಮುತ್ತೆಪ್ಪ ಗಾಣಿಗೇರ (12) ಗುರುತಿಸಲಾಗಿದೆ.

ಚಕ್ಕಡಿಯಲ್ಲಿ ಒಟ್ಟು 12 ಜನರಿದ್ದರು. ನಾಲ್ವರು ಮಹಿಳೆಯರು ಪ್ರಾಣಾಪಾಯದಿಂದ ಪಾರಾಗಿದ್ದು, ಉಳಿದ ಐವರಿಗಾಗಿ ಶೋಧ ಕಾರ್ಯ ನಡೆದಿದೆ.

ದುರಂತ ಕುರಿತು ಗೊತ್ತಾದ ಕೂಡಲೇ ನೀರಾವರಿ ಇಲಾಖೆಯ ಅಧಿಕಾರಿಗಳ ಜೊತೆಗೆ ಚರ್ಚಿಸಲಾಗಿದೆ.  ನೀರು ಹರಿಯುವುದನ್ನು ತಕ್ಷಣವೇ ನಿಲ್ಲಿಸಿ, ಶೋಧ ಕಾರ್ಯಾಚರಣೆ ಮುಂದುವರಿಸಲಾಗಿದೆ ಎಂದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಂದೀಪ ಪಾಟೀಲ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry