ಸೋಮವಾರ, ಏಪ್ರಿಲ್ 12, 2021
26 °C

ಕಾಲುವೆಗೆ ನೀರು ರೈತರ ಮೊಗದಲ್ಲಿ ಹರ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಣಸಗಿ: ರಾಜ್ಯ ಬಹುಭಾಗದಲ್ಲಿ ಬರದ ಛಾಯೆ ಇದ್ದರೂ ನಾರಾಯಣಪುರ ಎಡದಂಡೆ ಮುಖ್ಯ ಕಾಲುವೆಗೆ ಸೋಮವಾರ ನೀರು ಹರಿದ ಬಂದಿದ್ದರಿಂದ ರೈತರ ಮೊಗದಲಲ್ಲಿ ಸಂತಸದ ನಗೆ ಕಾಣುತಲಿತ್ತು. ಅದಕ್ಕಾಗಿಯೇ  ಸೋಮವಾರ ಮಧ್ಯಾಹ್ನ ಎಡದಂಡೆ ಮುಖ್ಯ ಕಾಲುವೆಯ ವಿತರಣಾ ಕಾಲುವೆ 5 ರಬಳಿ ಕೃಷ್ಣೆಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಲಾಯಿತು.  ಹುಣಸಗಿ ಗುಳಬಾಳ, ಕುಪ್ಪಿ ಸೇರಿದಂತೆ   ಅನೇಕ ಗ್ರಾಮಗಳ ರೈತರು ಸೇರಿ ಕಾಲುವೆಗೆ ಪೂಜೆ ಸಲ್ಲಿಸಿ ಸಿಹಿ ಹಂಚಿ ಸಂಭ್ರಮಿಸಿದರು. ನಂತರ ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷರಾದ ನಾಗಣ್ಣ ಸಾಹು ದಂಡಿನ್ ಮಾತನಾಡಿ, ಸಾವಿರಾರು ರೈತರತ್ಯಾಗದ ಫಲವಾಗಿ ಇಂದು ನಮಗೆ ನೀರು ಹರಿದು ಬರುತ್ತಿದೆ ಹಲವಾರು ರೈತರು ತಮ್ಮ ಜೀವವನ್ನೇ ಅರ್ಪಿಸಿದ್ದಾರೆ. ಆದ್ದರಿಂದ ಈ ಸಂದರ್ಭದಲ್ಲಿ ಅಂತಹ ರೈತರನ್ನು ನೆನೆದು ನೀರನ್ನು ಪಡೆಯುತ್ತದ್ದೇವೆ ಎಂದು ಸ್ಮರಿಸಿದರು. ಪ್ರತಿಯೊಬ್ಬ ರೈತರು ಪ್ರತಿಯೊಂದು ಹನಿಯನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಕಾಲುವೆಯ ಕೊನೆಯಲ್ಲಿರುವ ರೈತರಿಗೆ ನೀರು ತಲುಪಿಸುವ ಜವಾಬ್ದಾರಿ ನಮ್ಮದಾಗಿರುತ್ತದೆ ಆದ್ದರಿಮದ ನೀರ್ನು ವ್ಯರ್ಥ ಪೋಲು ಮಾಡಬೇಡಿ ಎಂದು ರೈತರಿಗೆ ಕರೆ ನೀಡಿದರು. ಬಸವರಾಜಸ್ವಾಮಿ ಸ್ಥಾವರಮಠ ಮಾತನಾಡಿ ನೀರಿನ ಮಹತ್ವ ಎಂತಹದು ಎಂದು ನಮಗೆ ಈಗ ತಿಳಿದಂತಾಯಿತು. ಸುಮಾರು ವರ್ಷಗಳಿಂದ ನಮಗೆ ನೀರಿನ ತೊಂದರೆ ಇರಲಿಲ್ಲ. ಆದರೆ ಈ ಸಲ ಮುಂಗಾರು ಮುನಿಸಿದ್ದರಿಂದ, ಮಳೆ ನಿರೀಕ್ಷಿತ ಮಟ್ಟದಲ್ಲಿ ಆಗದೇ ನೀರಿನ ಚಿಂತೆಯಲ್ಲಿದ್ದೇವು. ಈ ವರ್ಷ ಕಾಲೂವೆಗೆ ನೀರು ಹರಿಯುತ್ತದೆಯೋ ಇಲ್ಲವೋ ಎಂಬ ಚಿಂತೆಯಲ್ಲಿ ರೈತರಿದ್ದರು. ಕೃಷ್ಣೆಯ ಆಶೀರ್ವಾದ ನಮ್ಮ ರೈತರ ಮೇಲೆ ಯಾವಾಗಲೂ ಇರುತ್ತದೆ ಎಂದು ನುಡಿದರು.  ಕಾರ್ಯನಿರ್ವಾಹಕ ಎಂಜಿನಿಯರ್ ಲೋಕೇಶಪ್ಪ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗಳಾದ ಚಂದ್ರಶೇಖರ ಕಕ್ಕೇರಿ, ಎಚ್.ರಹಮಾನ, ಕಿರಿಯ ಎಂಜಿನಿಯರ್ ಚಂದ್ರೇಗೌಡ, ಎಪಿಎಂಸಿ ಅಧ್ಯಕ್ಷ ಚಂದ್ರಶೇಖರ ದಂಡಿನ್, ವೀರೇಶ ಚಿಂಚೋಳಿ, ಬಸವರಾಜ ಮಲಗಲದಿನ್ನಿ, ಸಿದ್ದು ಮುದಗಲ್, ಬಸಣ್ಣ ದೊರಿ, ಸೋಮಶೇಖರ ಸ್ಥಾವರಮಠ, ಗೌಡಪ್ಪ ಬಾಲಗೌಡರ್,  ಬಸಣ್ಣ ದೇಸಾಯಿ, ಚನ್ನಯ್ಯಸ್ವಾಮಿ ಹಿರೇಮಠ, ಸಂಗನಗೌಡ ರಾಮನಗೌಡ್ರ, ಈರಪ್ಪ ದೇಸಾಯಿ, ವಿದ್ಯಾಸಾಗರ ಶೆಟ್ಟಿ, ಆರ್.ವೆಂಕಟರಾವ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.