ಕಾಲುವೆಗೆ ನೀರು: ಸ್ಪಷ್ಟನೆಗೆ ನಂದಕುಮಾರ ಆಗ್ರಹ

7

ಕಾಲುವೆಗೆ ನೀರು: ಸ್ಪಷ್ಟನೆಗೆ ನಂದಕುಮಾರ ಆಗ್ರಹ

Published:
Updated:

ಹುಣಸಗಿ: ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ನಾರಾಯಣಪುರ ಎಡದಂಡೆ ಕಾಲುವೆಗೆ ಎಂದಿನವರೆಗೆ ನೀರು ಹರಿಸಲಾಗುತ್ತದೆ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಬೇಕು. ಇಲ್ಲದಿದ್ದಲ್ಲಿ ಹೋರಾಟ ಮಾಡಲಾಗುದು ಎಂದು ಬಿ.ಎಸ್.ಆರ್ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ನಂದಕುಮಾರ ಮಾಲಿಪಾಟೀಲ ತಿಳಿಸಿದರು.ಭಾನುವಾರ ಸಾಯಂಕಾಲ ಹುಣಸಗಿಯಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದರು. ಈ ಮೊದಲು ಜಿಲ್ಲಾ ಉಸ್ತುವಾರಿ ಸಚಿವರು ಹಿಂಗಾರು ಹಂಗಾಮಿಗೆ ನೀರು ಹರಿಸಲಾಗುವದು ಎಂದು ತಮ್ಮ ಕಾರ್ಯಕ್ರಮದಲ್ಲಿ ಹೇಳಿಕೆಗಳನ್ನು ನೀಡಿದ್ದರು. ನಂತರ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಫೆ. 20 ರವರೆಗೆ ಮಾತ್ರ ಕಾಲುವೆಗೆ ನೀರು ಹರಿಸಲಾಗುತ್ತದೆ ಎಂದು ತಿಳಿಸಲಾಯಿತು. ಇದರಿಂದಾಗಿ ಅಚ್ಚುಕಟ್ಟು ಪ್ರದೇಶದ ರೈತರು ತೀವ್ರ ಗೊಂದಲದಲ್ಲಿದ್ದಾರೆ.ನಂತರ ಮಾಜಿ ಶಾಸಕರು ಪಾದಯಾತ್ರೆಯ ನಂತರ ಮತ್ತೆ ನೀರು ಕಾಲುವೆಗೆ ಬರಲಿದೆ ಎಂಬ ವಿಶ್ವಾಸದರಿಂದ ರೈತರು ತಮ್ಮ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಒಂದು ವೇಳೆ ಫೆ.20ರವಗೆ ಮಾತ್ರ ನೀರು ಹರಿಸಿದಲ್ಲಿ ಈ ಭಾಗದ ರೈತರು ಬದುಕು ತುಂಬಾ ಸಂಕಷ್ಟಕ್ಕೆ ಇಡಾಗಲಿದೆ. ಸಾಲದ ಸುಳಿಯಲ್ಲಿ ಸಿಲುಕಿ ಕೊಟ್ಯಾಂತರ ರೂಪಾಯಿ ನಷ್ಟ ಅನುಭವಿಸಲಿದ್ದಾರೆ ಆದ್ದರಿಂದ ಅಧಿಕಾರಿಗಳು ಸ್ಪಷ್ಟ ಮಾಹಿತಿ ನೀಡಬೇಕೆಂದು ಒತ್ತಾಯಿಸಿದರು. ಸಚಿವರು ಪುನರ್ ಪರಿಶೀಲನೆ ಸಭೆ ಹೆಸರಿನಲ್ಲಿ ಸಭೆ ನಡೆಸಿ ಮಾರ್ಚ 10ರವರೆಗೆ ನೀರು ಹರಿಸಲಾಗುತ್ತದೆ ಎಂದು  ರೈತರನ್ನು ದಿಕ್ಕುತಪ್ಪಿಸಿದ್ದಾರೆ ಇದು ಖಂಡನೀಯ ಎಂದು ಖಂಡಿಸಿದರು.ಒಂದು ವಾರದಲ್ಲಿ ಅಧಿಕಾರಿಗಳು ಸಮರ್ಪಕ ಮಾಹಿತಿ  ನೀಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಶ್ರೀರಾಮಲು ನೇತೃತ್ವದಲ್ಲಿ ತುಂಗಭದ್ರಾ ಮಾದರಿಯಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry