` ಕಾಲುವೆಗೆ ನೀರು ಹರಿಸಿ'

7

` ಕಾಲುವೆಗೆ ನೀರು ಹರಿಸಿ'

Published:
Updated:

ನರಗುಂದ:  ನವಿಲುತೀರ್ಥ ಜಲಾಶ ಯದ ನೀರು ಕೇವಲ ಬೆಳಗಾವಿ ಜಿಲ್ಲೆಗೆ ಸೀಮಿತವಾಗಿಲ್ಲ. ಇದನ್ನು ಗದಗ, ಧಾರ ವಾಡ ಜಿಲ್ಲೆಯಲ್ಲಿಯೂ  ಲಕ್ಷಾಂತರ  ರೈತರು ಆಶ್ರಯಿಸಿದ್ದಾರೆ.  ಆದ್ದರಿಂದ  ಈ ಭಾಗದ ಜನರಿಗೆ ಜನವರಿ 15ರವೆರೆಗೂ ಸಮರ್ಪಕವಾಗಿ ನೀರು ಹರಿಸಿದ ನಂತರ ಅದನ್ನು ಸ್ಥಗಿತಗೊಳಿಸುವಲ್ಲಿ  ನೀರಾವರಿ ಅಧಿಕಾರಿಗಳು ಮುಂದಾಗಬೇಕೆಂದು ಕಳಸಾ ಬಂಡೂರಿ ಹೋರಾಟ ಕೇಂದ್ರ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ಒತ್ತಾಯಿಸಿದರು.ಪಟ್ಟಣದಲ್ಲಿ ಮಾತನಾಡಿದ ಅವರು  ನೀರು ಬಂದ್ ಮಾಡುವಂತೆ ಬೈಲ ಹೊಂಗಲದ ರೈತರು  ಬೆಳಗಾವಿ ಜಿಲ್ಲಾಧಿಕಾರಿಗಳಿಗೆ  ಮನವಿ ಮಾಡಿದ್ದಾರೆ. ಆದರೆ ಅಲ್ಲಿ ನೀರು ಅಶವ್ಯ ವಿಲ್ಲದಿರಬಹುದು. ಆದರೆ ಗದಗ ಹಾಗೂ ಧಾರವಾಡ ಜಿಲ್ಲೆಯ ರೈತರಿಗೆ ಬೆಳೆಗಳಿಗೆ  ಹಾಗೂ ಕೆರೆಗಳಿಗೆ ನೀರು ಅವಶ್ಯವಾಗಿದೆ. ಆದ್ದರಿಂದ ಜನವರಿ 15ರವರೆಗೆ ನೀರು ಹರಿಸಿದರೆ ಮಾತ್ರ ಈ ಭಾಗದ ರೈತರಿಗೆ ಸಮರ್ಪಕವಾಗಿ ನೀರು ಹರಿಯಲು ಸಾಧ್ಯವಿದೆ.

ಆದ್ದರಿಂದ ನೀರಾವರಿ ಅಧಿಕಾರಿಗಳು ನೀರನ್ನು ಸ್ಥಗಿತ ಗೊಳಿಸುವಾಗ ಇದರಡಿ ಬರುವ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿ ನೀರು ಬಂದ್ ಮಾಡುವ ಬಗ್ಗೆ ಆಲೋಚನೆ ಮಾಡಬೇಕೆಂದು ಕುಲಕರ್ಣಿ ಆಗ್ರಹಿಸಿದರು. ನವಿಲುತೀರ್ಥ ಜಲಾಶ ಯ ಮುಖ್ಯವಾಗಿ  ಕುಡಿಯುವ ನೀರಿಗಾಗಿ  ಅಲ್ಲ, ಅದು ನೀರಾವರಿಗಾಗಿ ಇರು ವಂತದ್ದು. 

ಆದ್ದರಿಂದ ಇದನ್ನು ಅರಿತು ಒಂದು ಸಲವಾದರೂ ಈ ಭಾಗದ ಬೆಳೆಗಳಿಗೆ ನೀರು ತಲುಪಿ ಸುವುದು ಅವಶ್ಯವಾಗಿದೆ. ಆದ್ದರಿಂದ ಕೂಡಲೇ ಅಧಿಕಾರಿಗಳು ಇತ್ತ ಗಮನ ಹರಿಸಿ ರೈತರ ಸಂಕಷ್ಟ ಪರಿಹರಿಸ ಬೇಕಾಗಿದೆ.  ಕೂಡಲೇ ಕಳಸಾ ಬಂಡೂರಿ  ಯೋಜನೆ ಜಾರಿಯಾಗಬೇಕಿದೆ ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಚಳ್ಳಪ್ಪ ನಾಯ್ಕರ, ಬಸನಗೌಡ ಚಿಕ್ಕನಗೌಡ್ರ, ಸಿದ್ರಾಮಪ್ಪ ಜಡರಾಮಕುಂಟಿ, ಬಾಪುಗೌಡ ಹೂಲಗೇರಿ, ಅಲ್ಲಿಸಾಬ ನದಾಫ್, ವೀರಬಸಪ್ಪ ಹೂಗಾರ,  ಪಡಿಯಪ್ಪ ಮರಿಯಣ್ಣವರ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry