ಶನಿವಾರ, ಜೂನ್ 12, 2021
24 °C

ಕಾಲುವೆ, ಕೆರೆಗೆ ನೀರು ಸಂತಸದಲ್ಲಿ ರೈತಾಪಿ ವರ್ಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಲುವೆ, ಕೆರೆಗೆ ನೀರು ಸಂತಸದಲ್ಲಿ ರೈತಾಪಿ ವರ್ಗ

ಅಫಜಲಪುರ: ಎರಡು ವರ್ಷಗಳಿಂದ ಬಳೂಂಡಗಿ ಏತ ನೀರಾವರಿಯಿಂದ, ಕೆರೆಗೆ ಮತ್ತು ಕಾಲುವೆಗೆ ನೀರು ಬಿಡುವಂತೆ ರೈತರು ಹೋರಾಟ ಮಾಡುತ್ತಿದ್ದರು. ಇನ್ನೊಂದು ಕಡೆ ನೀರು ಬಿಡುವದನ್ನೆ ಎದುರು ನೋಡುತ್ತಿದ್ದ ಸಾವಿರಾರು ರೈತರಿಗೆ ಕಾಲುವೆಗೆ ನೀರು ಬಿಟ್ಟಿದ್ದರಿಂದ ಸಂತಸವಾಗಿದೆ.ಕಳೆದ ವರ್ಷ ತಾಲ್ಲೂಕಿನಲ್ಲಿ ಮಳೆ ಕಡಿಮೆಯಾಗಿದ್ದರಿಂದ, ಕೆರೆಗೆ ನೀರು ಭರ್ತಿಯಾಗದಿರುವದರಿಂದ, ಡಿಸೆಂಬರ್ ತಿಂಗಳಲ್ಲಿಯೆ ಕೆರೆ ಬತ್ತಿ ಹೋಗಿತ್ತು ಕೆರೆಯನ್ನು ನಂಬಿ ಕೃಷಿ ಮಾಡಿಕೊಂಡಿರುವ ಪಟ್ಟಣ ಸೇರಿದಂತೆ ಸುತ್ತಲಿನ ಹತ್ತು ಹಳ್ಳಿಗಳ ಬೆಳೆಗಳು ಹಾಳಾಗುತ್ತಿದ್ದವು. ಇನ್ನೊಂದು ಕಡೆ ಕೊರೆದಿರುವ ತೆರೆದ, ಕೊಳುವೆ ಬಾವಿ ಸಂಪೂರ್ಣ ಬತ್ತಿ ಹೋಗಿದ್ದವು. ತೋಟದ ಬೆಳೆಗಳು ನೀರಿಲ್ಲದೆ ಒಣಗುತ್ತಿದ್ದವು ಬೇಸಿಗೆ ಆರಂಭವಾಗುತ್ತಿದ್ದಂತೆ ಕೆರೆಗೆ ನೀರು ಬಿಡುವ ರೈತರ ಹೋರಾಟ ತೀವ್ರವಾಗಿತ್ತು ಹೀಗಾಗಿ ಶಾಸಕ ಮಾಲೀಕಯ್ಯ ಗುತ್ತೇದಾರ ಅವರು ಬುಧವಾರ ಬಳೂಂಡಗಿ ಏತ ನೀರಾವರಿಯಿಂದ ಕೆರೆಗೆ ನೀರು ಹರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು.ಕಳೆದ ಹಲವಾರು ವರ್ಷಗಳಿಂದ ರೈತಾಪಿ ಜನ ಕಾಲುವೆಗೆ ನೀರು ಬಿಡುವುದನ್ನೆ ಕಾಯುತ್ತಿದ್ದರು. ಬುಧವಾರದಿಂದ ಬಳೂಂಡಗಿ ಏತ ನೀರಾವರಿಯ ಸಾವಿರ ಹೆಚ್‌ಪಿ ಯ ಎರಡು ವಿದ್ಯುತ್ ಪಂಪ್‌ಸೆಟ್‌ಗಳ ಮೂಲಕ ಕೆರೆಗೆ ನೀರು ಬಿಡಲಾಗುತ್ತಿದೆ. ಈ ಏತ ನೀರಾವರಿಗೆ ಸಾವಿರ ಹೆಚ್‌ಪಿ ಯ ಐದು ಪಂಪ್‌ಗಳನ್ನು ಅಳವಡಿಸಲಾಗಿದೆ. ಸುಮಾರು 35 ಕಿ.ಮೀ ಮುಖ್ಯ ಕಾಲುವೆಯಿದ್ದು ಈ ಕಾಲುವೆಗೆ ನೀರು ಹರಿಯುವುದು ಆರಂಭವಾಗಿದೆ. ಸಧ್ಯಕ್ಕೆ ಕೃಷಿಗೆ ಪ್ರಯೋಜನವಾಗದಿದ್ದರು ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ನೀರಿನ ಅಂತರಜಲಮಟ್ಟ ಹೆಚ್ಚಳಕ್ಕೆ ಕಾರಣವಾಗಲಿದೆ ಎಂದು ಎಂಜಿನಿಯರ್ ಹೇಳುತ್ತಾರೆ.ನೀರು ಬಿಡುವ ವಿಷಯದಲ್ಲಿ ಬುಧವಾರ ಸಾಯಂಕಾಲವೆ ಎಂಜಿನಿಯರ್ ಮತ್ತು ರೈತರಲ್ಲಿ ಗೊಂದಲ ವಾತಾವರಣ ಕಾರಣವಾಗಿತ್ತು. ಬುಧವಾರ ಕೆರೆಗೆ ನೀರು ಹರಿಸಲು ಶಾಸಕರು ಚಾಲನೆ ನೀಡಿದ ನಂತರ ಸಾಯಂಕಾಲ ಕೆರೆಗೆ ನೀರು ಬಿಡುವುದು ಸ್ಥಗಿತ ಮಾಡಿ ಎಂದು ಮುಖ್ಯ ಎಂಜನಿಯರ್‌ರಿಂದ ಮಾಹಿತಿ ಬಂದಾಗ ನೀರು ಹರಿಸುವದನ್ನು ಸ್ಥಗಿತ ಮಾಡಲಾಗಿದೆ. ರೊಚ್ಚಿಗೆದ್ದ ರೈತರು ಇಡೀ ರಾತ್ರಿ ಸಂಬಂಧಪಟ್ಟ ಸಚಿವರೊಂದಿಗೆ ಮಾತನಾಡಿ, ಕೆರೆಗೆ ನೀರು ಬಿಡುವಂತೆ  ಮಾಜಿ ಶಾಸಕ ಎಂ.ವೈ. ಪಾಟೀಲ ಅವರ ಮಧ್ಯಸ್ಥಿಕೆಯಲ್ಲಿ ಪ್ರಕ್ರಿಯೆ ಆರಂಭವಾಯಿತು.ಇನ್ನೊಂದು ಕಡೆ ಇಲ್ಲಿನ ರೈತರು ಕೆರೆಗೆ ನೀರು ಬಿಡುವಂತೆ ಎಂಜಿನಿಯರ್‌ಗಳನ್ನು ತರಾಟೆಗೆ ತೆಗೆದುಕೊಳ್ಳುವುದು ಅವರನ್ನ ದಿಗ್ಭಂದನೆಗೊಳಿಸುವುದು ಮುಂದುವರೆಯಿತು. ಗುರುವಾರ ಮುಂಜಾನೆ ಸಂಬಂಧಪಟ್ಟ ಸಚಿವರಿಂದ ಕೆರೆಗೆ ನೀರು ಬಿಡುವಂತೆ ಮಾಹಿತಿ ಬಂದ ನಂತರ ಎಂಜಿನಿಯರ್‌ಗಳು ನೀರು ಬಿಡಲು ಪ್ರಕ್ರಿಯೆ ಆರಂಭಿಸಿದರು.ಹೀಗಾಗಿ ಒಂದು ಕಡೆ ಕೆರೆಗೆ ನೀರು ಬಿಟ್ಟ ಸಂತಸದಲ್ಲಿ ರೈತರು ಮತ್ತೆ ನೀರು ಬಿಡುವುದು ಸ್ಥಗಿತವಾದಾಗ ಗೊಂದಲಕ್ಕೀಡಾಗಿ ರೈತರು ಇಡೀ ರಾತ್ರಿ ನಿದ್ದೆಯಿಲ್ಲದೆ ಕಾಲ ಕಳೆಯುವ ಪ್ರಸಂಗ ಜರುಗಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.