ಕಾಲು ಜಾರಿ ಕಟ್ಟೆಗೆ ಬಿದ್ದು ಅಜ್ಜಿ-ಮೊಮ್ಮಗು ಸಾವು

7

ಕಾಲು ಜಾರಿ ಕಟ್ಟೆಗೆ ಬಿದ್ದು ಅಜ್ಜಿ-ಮೊಮ್ಮಗು ಸಾವು

Published:
Updated:

ಕುಣಿಗಲ್: ಬಟ್ಟೆ ಒಗೆಯಲು ಕಟ್ಟೆಗೆ ತೆರಳಿದ್ದ ಅಜ್ಜಿ-ಮೊಮ್ಮಗು ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ಮಂಗಳವಾರ ತಾಲ್ಲೂಕಿನ ಗವಿಮಠ ಗ್ರಾಮದಲ್ಲಿ ನಡೆದಿದೆ.ಲಕ್ಷ್ಮಮ್ಮ (45), ಗಗನ್ (5) ಮೃತಪಟ್ಟವರು. ಬೆಂಗಳೂರಿನಿಂದ ಮೊಮ್ಮಕ್ಕಳಾದ ಗಗನ್, ಮಾನ್ಯ ಹಬ್ಬಕೆಂದು ಅಜ್ಜಿ ಮನೆಗೆ ಬಂದಿದ್ದರು ಎನ್ನಲಾಗಿದೆ. ಬೆಳಿಗ್ಗೆ ಅಜ್ಜಿಯೊಂದಿಗೆ ಬಟ್ಟೆ ಒಗೆಯಲು ತೆರಳಿದ್ದು, ಸ್ನಾನ ಮಾಡಲೆಂದು ಗಗನ್ ನೀರಿಗಿಳಿದ ಸಂದರ್ಭದಲ್ಲಿ ಕಾಲು ಜಾರಿ ಬಿದ್ದಿದ್ದಾನೆ. ಅವನನ್ನು ರಕ್ಷಿಸಲು ಹೋದ ಅಜ್ಜಿಯೂ ಸಹ ಕಾಲು ಜಾರಿ ಬಿದ್ದರು. ಇದನ್ನು ಕಂಡು ಗಾಬರಿಗೊಂಡ ಮಾನ್ಯ ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದು, ನೆರವಿಗೆ ಬರುವಷ್ಟರಲ್ಲಿ ಅಜ್ಜಿ-ಮೊಮ್ಮಗ ಮುಳುಗಿ ಹೋಗಿದ್ದರು. ಗ್ರಾಮಸ್ಥರ ಸಹಾಯದಿಂದ ಶವ ಹೊರತೆಗೆಯಲಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry