ಕಾಲು-ಬಾಯಿ ಜ್ವರ ಲಸಿಕೆ ನೀಡಲು ಸಲಹೆ

5

ಕಾಲು-ಬಾಯಿ ಜ್ವರ ಲಸಿಕೆ ನೀಡಲು ಸಲಹೆ

Published:
Updated:

ಧರ್ಮಪುರ: ಬೇಸಿಗೆ ಬಿಸಿಲಿನ ಪರಿಣಾಮವಾಗಿ ಜಾನುವಾರುಗಳಿಗೆ ಕಾಲು-ಬಾಯಿಜ್ವರ ಕಾಣಿಸಿ ಕೊಳ್ಳಬಹುದು. ಆದ್ದರಿಂದ ರೈತರು ಮುಂಜಾಗ್ರತಾ ಕ್ರಮವಾಗಿ ಲಸಿಕೆ ಹಾಕಿಸಬೇಕು ಎಂದು  ಪಶು ವೈದ್ಯಕೀಯ ಸಹಾಯಕ ನಿರ್ದೇಶಕ ಡಾ.ಒ.ಎನ್. ರವಿ ಸಲಹೆ ನೀಡಿದರು. ಸಮೀಪದ ಬೇತೂರು ಗ್ರಾಮದಲ್ಲಿ ನ್ಯಾಷನಲ್ ಸೀಡ್ಸ್ ಕಾರ್ಪೋರೇಷನ್ ಮತ್ತು ಪಶುವೈದ್ಯಕೀಯ ಆಸ್ಪತ್ರೆ ಹಿರಿಯೂರು ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಜಾನುವಾರು ತಪಾಸಣಾ ಶಿಬಿರ ಮತ್ತು ಉಚಿತ ಲಸಿಕೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಗರ್ಭ ಪರೀಕ್ಷೆ, ಗರ್ಭಧಾರಣೆ ಸಮಸ್ಯೆಗಳು ಹಾಗೂ ಜಂತುನಾಶಕ ಔಷಧಿಗಳು ಉಚಿತವಾಗಿ ಸಿಗುತ್ತಿದ್ದು ಹತ್ತಿರದ ಪಶುವೈದ್ಯಕೀಯ ಕೇಂದ್ರಗಳಲ್ಲಿ ಪಡೆಯಬಹುದು ಎಂದು ಮಾಹಿತಿ ನೀಡಿದರು.ನ್ಯಾಷನಲ್ ಸೀಡ್ಸ್ ಕಾರ್ಪೋರೇಷನ್‌ನ ಪ್ರಾದೇಶಿಕ ವ್ಯವಸ್ಥಾಪಕ ಒ.ಪಿ. ಸೋನಿ, ಮಾರುಕಟ್ಟೆ ಅಧಿಕಾರಿ ಅನ್ವರ್‌ಪಾಷಾ, ಕ್ಷೇತ್ರಿಯ ವ್ಯವಸ್ಥಾಪಕ ಎಸ್.ಮೂರುಕಣ್ಣಪ್ಪ, ಡಾ.ಬಿ.ಟಿ. ರವೀಂದ್ರನಾಥ್, ಡಾ.ನಾಗರಾಜ್ ರೈತರಿಗೆ ಮಾಹಿತಿ ನೀಡಿದರು.ಪಶುವೈದ್ಯಕೀಯ ನಿರೀಕ್ಷಕರಾದ ಹನುಮಂತಪ್ಪ, ಪದ್ಮನಾಭ ರೆಡ್ಡಿ, ಯಶವಂತ್, ಸತೀಶ್, ಶಿವಪ್ಪ ಪರಮನಿ, ಲೋಹಿತಾಶ್ವ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry