ಬುಧವಾರ, ಜೂನ್ 23, 2021
28 °C
ಹಿಂಸಾರೂಪ ಪಡೆದ ವಿದ್ಯಾರ್ಥಿಗಳ ಪ್ರತಿಭಟನೆ

ಕಾಲೇಜಿಗೆ ಕಲ್ಲು ತೂರಾಟ:ಲಾಠಿ ಚಾರ್ಜ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಳ್ಳಾಲ: ಸಿಬ್ಬಂದಿ ದುರ್ವರ್ತನೆ ವಿರುದ್ಧ ವಿದ್ಯಾರ್ಥಿಗಳು ಕಾಲೇಜು ಆಡಳಿತ ಮಂಡಳಿ ವಿರುದ್ಧ ಎರಡನೇ ಬಾರಿ ನಡೆಸಿದ ಪ್ರತಿಭಟನೆ ಹಿಂಸಾ ರೂಪ ಪಡೆದಿದ್ದು, ಉದ್ರಿಕ್ತರನ್ನು ಚದು ರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿರುವ ಘಟನೆ  ಕೊಣಾಜೆಯ ನಡುಪದವು ಪಿ.ಎ ಕಾಲೇಜಿನಲ್ಲಿ ಬುಧವಾರ  ಸಂಭವಿಸಿದೆ.ಪ್ರತಿಭಟನೆಗೆ ಮಣಿದ ಕಾಲೇಜು ಆಡಳಿತ ಮಂಡಳಿ  ವಿದ್ಯಾರ್ಥಿ ಕ್ಷೇಮ ಪಾಲನಾ ಅಧಿಕಾರಿ ಅಬ್ದುಲ್ ರೆಹ ಮಾನ್  ಅವರನ್ನು  ಎಲ್ಲಾ ಹುದ್ದೆಗ ಳಿಂದ  ಅಮಾನತುಗೊಳಿಸಿದೆ.ಘಟನೆ ವಿವರ: ಇದೇ 15ರಂದು ಕಾಲೇಜಿನಲ್ಲಿ ಹಾಗೂ ವಸತಿ ನಿಲಯ ಗಳಲ್ಲಿ ಮೂಲಭೂತ ಸೌಕರ್ಯ ಕೊರತೆ, ಕಳಪೆ ಆಹಾರ ಪೂರೈಕೆ ಹಾಗೂ  ಕಾಲೇಜಿನ ವಿದ್ಯಾರ್ಥಿ  ಕ್ಷೇಮ ಪಾಲನಾ ಅಧಿಕಾರಿ  ದುರ್ವರ್ತನೆ ವಿರುದ್ಧ  ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ  ನಡೆಸಿದ್ದರು. ಈ ಸಂದರ್ಭ 19ರ ಗಡುವು ನೀಡಿ ಎಲ್ಲಾ ಬೇಡಿಕೆಗಳನ್ನು ಈಡೇರಿಸುವ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಲಾ ಗಿತ್ತು. ಅದರಂತೆ ವಿದ್ಯಾರ್ಥಿ ಗಳು ಪ್ರತಿಭಟನೆಯನ್ನು ನಿಲ್ಲಿಸಿ ತರಗತಿಗೆ ಹಾಜರಾಗಿದ್ದರು.ಕಾಲೇಜು ಆಡಳಿತ ಮಂಡಳಿ  ಕ್ಷೇಮ ಪಾಲನಾ ಅಧಿಕಾರಿ ಅಬ್ದುಲ್ ರೆಹ ಮಾನ್ ಅವರನ್ನು  ಹುದ್ದೆಯಿಂದ ತೆಗೆದು ಡಿಪ್ಲೊಮಾ ಕಾಲೇಜಿನ ಪ್ರಾಂಶುಪಾಲರಾಗಿ ಮುಂದುವರಿ ಯಲು ತೀರ್ಮಾನಿಸಿತ್ತು. ಆದರೆ  ಪ್ರಾಂಶುಪಾಲ ಹುದ್ದೆಯಿಂದಲೂ ತೆಗೆಯುವಂತೆ ಒತ್ತಾಯಿಸಿದ ವಿದ್ಯಾರ್ಥಿಗಳು ಬುಧವಾರ ಕಾಲೇಜಿನ ಮುಖ್ಯದ್ವಾರದ ರಸ್ತೆಯಿಂದ ಕಾಲೇಜಿ ನವರೆಗೂ ಅಬ್ದುಲ್ ರೆಹಮಾನ್ ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿದ ಭಿತ್ತಿಪತ್ರಗಳನ್ನು ಅಂಟಿಸಿದ್ದರು. ಕಾಲೇಜು ಆವರಣದೊಳಗೆ ಪ್ರತಿಭಟನೆ ನಡೆಸಲು ಆರಂಭಿಸಿದ ವಿದ್ಯಾರ್ಥಿಗಳು ಕಲ್ಲು ತೂರಾಟ ನಡೆಸತೊಡಗಿದಾಗ,  ಕೊಣಾಜೆ ಪೊಲೀಸರು  ಲಘು ಲಾಠಿ ಚಾರ್ಜ್ ನಡೆಸಿ ಉದ್ರಿಕ್ತ ವಿದ್ಯಾರ್ಥಿ ಗಳನ್ನು ಕಾಲೇಜು ಆವರಣ ದೊಳಗಿ ನಿಂದ ಹೊರ ಓಡಿಸಿದರು. ಅಲ್ಲಿಯೂ ಸುಮ್ಮನಾಗದ ವಿದ್ಯಾರ್ಥಿಗಳು ಕಾಲೇಜು ನಾಮಫಲಕಕ್ಕೆ,  ಕಾವಲು ಗಾರ ಕೊಠಡಿಯ ಕಿಟಕಿ ಗಾಜುಗಳಿಗೆ ಕಲ್ಲು ತೂರಾಟ ನಡೆಸಿ ಹಾನಿಗೊಳಿ ಸಿದರು.  ಪೊಲೀಸ್ ಇಲಾಖೆ ವತಿ ಯಿಂದ ವೀಡಿಯೋ ಚಿತ್ರೀಕರಣ ನಡೆಸುತ್ತಿದ್ದ ವೀಡಿಯೋಗ್ರಾಫರ್ ಅವರಿಗೂ ಹಲ್ಲೆ ನಡೆಸಿದರು. ಮತ್ತೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ ಪರಿಣಾಮ ಹಲವು ವಿದ್ಯಾರ್ಥಿಗಳು ಗಾಯಗೊಂಡರು. ಎರಡು ಗಂಟೆಗಳ ಕಾಲ ಆವರಣದ ಹೊರಗಡೆಯೇ ನಿಂತ ಉದ್ರಿಕ್ತ ವಿದ್ಯಾರ್ಥಿಗಳು ಘೋಷಣೆ ಗಳನ್ನು ಕೂಗುತ್ತಲೇ ಇದ್ದರು. ಸ್ಥಳಕ್ಕೆ ಕೆಎಸ್‍ಆರ್‌ಪಿ ತುಕಡಿಯನ್ನು ಕರೆಸಲಾಯಿತು.ಎಸಿಪಿ ಭೇಟಿ: ಘಟನೆ ಗಂಭೀರತೆ ಅರಿತು  ಸ್ಥಳಕ್ಕೆ ಭೇಟಿ ನೀಡಿದ  ಎಸಿಪಿ ಪ್ರವೀಣ್ ನೆಜ್ಜೂರು ಅವರು  ಉದ್ರಿಕ್ತ ವಿದ್ಯಾರ್ಥಿಗಳ ಮನವೊಲಿಸಲು ಯತ್ನಿಸಿದರು.  ಆದರೆ ವಿದ್ಯಾರ್ಥಿಗಳು ಕಾಲೇಜಿನಿಂದ ಅಬ್ದುಲ್ ರೆಹಮಾನ್ ಅವರನ್ನು ವಜಾಗೊಳಿಸುವವರೆಗೆ  ಪ್ರತಿಭಟನೆ ಹಿಂತೆಗೆಯುವುದಿಲ್ಲ ಎಂದು ಪಟ್ಟು ಹಿಡಿದರು.  ಬಳಿಕ ಕಾಲೇಜು ಆಡಳಿತ ಮಂಡಳಿಯೊಂದಿಗೆ ಚರ್ಚೆ ನಡೆಸಿದ ಎಸಿಪಿಯವರು, ಅಬ್ದುಲ್ ರೆಹಮಾನ್ ಅವರನ್ನು ಎಲ್ಲಾ ಹುದ್ದೆಗ ಳಿಂದ ಅಮಾನತುಗೊಳಿಸುವ ನಿರ್ಧಾ ರಕ್ಕೆ ಬಂದರು.  ಅದನ್ನು ವಿದ್ಯಾರ್ಥಿಗಳ ಮುಂದೆ  ಆಡಳಿತಾಧಿ ಕಾರಿ ಆರ್.ಜೆ ಡಿಸೋಜ ಹೇಳುತ್ತಿದ್ದಂತೆ ವಿದ್ಯಾರ್ಥಿ ಗಳು ಪ್ರತಿಭಟನೆಯನ್ನು ಹಿಂತೆಗೆದು ಕೊಂಡರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.