ಕಾಲೇಜಿಗೆ ಮಲಾಲಾ ಹೆಸರಿಡಲು ವಿರೋಧ

7

ಕಾಲೇಜಿಗೆ ಮಲಾಲಾ ಹೆಸರಿಡಲು ವಿರೋಧ

Published:
Updated:

ಇಸ್ಲಾಮಾಬಾದ್(ಪಿಟಿಐ): ಮಲಾಲಾ ವಿದ್ಯಾಭ್ಯಾಸ ಮಾಡುತ್ತಿರುವ ಸ್ವಾತ್ ಕಣಿವೆಯ ಸೈದು ಶರೀಫ್ ಪಟ್ಟಣದಲ್ಲಿರುವ ಬಾಲಕಿಯರ ಸರ್ಕಾರಿ ಪದವಿ  ಕಾಲೇಜಿಗೆ `ಮಲಾಲಾ' ಹೆಸರನ್ನಿಡುವ ಪ್ರಸ್ತಾವವನ್ನು ವಿರೋಧಿಸಿ ಗುರುವಾರ ನೂರಾರು ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದರು.ಮುಸ್ಲಿಂ ಯುವತಿಯರ ಶಿಕ್ಷಣ ಹಕ್ಕಿಗಾಗಿ ಹೋರಾಟ ನಡೆಸಿ ತಾಲಿಬಾನರ ವಿರುದ್ಧ ದನಿ ಎತ್ತಿದ ಮಲಾಲಾ ಹೆಸರನ್ನು ಇಡುವುದರಿಂದ ಶಾಲೆಯ ಮೇಲೆ ತಾಲಿಬಾನ್ ಉಗ್ರರು ಮತ್ತೆ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿನಿಯರು ಅಭಿಪ್ರಾಯಪಟ್ಟಿದ್ದಾರೆ.ಬಾಲಕಿಯರ ಸರ್ಕಾರಿ ಪದವಿ ಕಾಲೇಜು ಎಂಬ ಹೆಸರನ್ನು ಮಲಾಲಾ ಪದವಿ ಕಾಲೇಜು ಎಂದು ಬದಲಾಯಿಸುವ ಸರ್ಕಾರದ ನಿರ್ಧಾರವನ್ನು ವಿರೋಧಿಸಿರುವ ವಿದ್ಯಾರ್ಥಿನಿಯರು, ಮೂರು ದಿನಗಳ ಒಳಗೆ ಕಾಲೇಜಿಗೆ ಹಳೆಯ ಹೆಸರನ್ನಿಡಬೇಕೆಂದು ಖೈಬರ್-ಫಕುತುನ್‌ಕ್ವಾ ಪ್ರಾಂತ್ಯದ ಸರ್ಕಾರಕ್ಕೆ ಗಡುವು ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry