ಕಾಲೇಜಿನಲ್ಲಿ ತಾಂತ್ರಿಕ ಸಮ್ಮೇಳನ

7

ಕಾಲೇಜಿನಲ್ಲಿ ತಾಂತ್ರಿಕ ಸಮ್ಮೇಳನ

Published:
Updated:
ಕಾಲೇಜಿನಲ್ಲಿ ತಾಂತ್ರಿಕ ಸಮ್ಮೇಳನ

ತಂತ್ರಜ್ಞಾನದ ಹಲವು ಆಯಾಮಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸಲು ಮತ್ತು ವಿಸ್ತಾರಗೊಳ್ಳುತ್ತಿರುವ ತಂತ್ರಜ್ಞಾನ ಲೋಕದಲ್ಲಿ ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಒರೆಗೆಹಚ್ಚುವ ಉದ್ದೇಶದಿಂದ ನಗರದ ಎಂವಿಜೆ ಎಂಜಿನಿಯರಿಂಗ್ ಕಾಲೇಜು ಇತ್ತೀಚೆಗಷ್ಟೆ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿತ್ತು.

ಕಾಲೇಜಿನ ಇಸಿಇ ವಿಭಾಗ `ಡಿಸೈನ್‌ಇನೋವೇಶನ್~ ಎಂಬ ರಾಷ್ಟ್ರೀಯ ಮಟ್ಟದ ಸಮ್ಮೇಳನಕ್ಕೆ ಚಾಲನೆ ನೀಡಿತು.

`ಕಂಪ್ಯೂಟ್, ಕಮ್ಯುನಿಕೇಟ್, ಕಂಟ್ರೋಲ್-3ಸಿ~ ಎಂಬ ವಿಷಯದೊಂದಿಗೆ ಕಾಲೇಜು ಕ್ಯಾಂಪಸ್‌ನಲ್ಲಿ ಈ ಸಮ್ಮೇಳನವನ್ನು ನಡೆಸಿಕೊಡಲಾಯಿತು.

ಮುಖ್ಯ ಅತಿಥಿಯಾಗಿ ದಕ್ಷಿಣ ರೈಲ್ವೆ ವಿಭಾಗದ ಟೆಲಿಕಾಂ ಎಂಜಿನಿಯರ್ ಎ. ಬಿ. ಶ್ರೀನಿವಾಸನ್ ಸಮ್ಮೇಳನವನ್ನು ಉದ್ಘಾಟಿಸಿದರು. ಭಾರತೀಯ ವಿಜ್ಞಾನ ಸಂಸ್ಥೆಯ ಎಲೆಕ್ಟ್ರಿಕಲ್ ಕಮ್ಯುನಿಕೇಶನ್ ಎಂಜಿನಿಯರಿಂಗ್‌ನ ಪ್ರೊ. ಕೆ. ಜೆ. ವಿನೊಯ್ ಅವರು ಆಗಮಿಸಿದ್ದರು.

ಸಮ್ಮೇಳನಕ್ಕೆಂದು ಭಾರತದ ವಿವಿಧೆಡೆಯಿಂದ ಸುಮಾರು 128 ಸಂಶೋಧನೆ ಮತ್ತು ಪ್ರಾಜೆಕ್ಟ್ ಪ್ರತಿಗಳು ಬಂದಿದ್ದವು. ಅದರಲ್ಲಿ ಒಟ್ಟು 80 ಪ್ರತಿಗಳು ಆಯ್ಕೆಯಾಗಿದ್ದು, ಅವುಗಳ ನಿರೂಪಣೆ ನಡೆಯಿತು. ದೆಹಲಿ, ಹೈದರಾಬಾದ್, ಮಂಗಳೂರು ಇನ್ನೂ ಹಲವೆಡೆಯಿಂದ ವಿದ್ಯಾರ್ಥಿಗಳು ಇಲ್ಲಿ ಸೇರಿದ್ದರು. 80 ಪ್ರತಿಗಳನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಿ, ನಿರೂಪಣೆ ನಡೆಸಲಾಯಿತು. ಇದರಲ್ಲಿ ಆಯ್ಕೆಗೊಂಡವರಿಗೆ ಬಹುಮಾನ ವಿತರಿಸಲಾಯಿತು. ಸಮ್ಮೇಳನದ ಬಗ್ಗೆ ಮಾತನಾಡಿದ ಎ.ಬಿ.ಶ್ರೀನಿವಾಸನ್, `ವಿದ್ಯಾರ್ಥಿಗಳಿಂದ ಪ್ರದರ್ಶಿತಗೊಂಡ ಈ ಹೊಸ ಆವಿಷ್ಕಾರಗಳನ್ನು ನೋಡಿ ಆಶ್ಚರ್ಯಚಕಿತನಾದೆ. ನನ್ನ ಕಾಲೇಜು ದಿನಗಳೂ ನೆನಪಿಗೆ ಬಂದವು~ ಎಂದು ಅಲ್ಲಿ ಸೇರಿದ್ದ ಎಲ್ಲಾ ವಿದ್ಯಾರ್ಥಿಗಳಿಗೂ ಹಾರೈಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry