ಕಾಲೇಜಿನಲ್ಲಿ ಬಿಸಿಯೂಟ: ಶ್ಲಾಘನೆ

7

ಕಾಲೇಜಿನಲ್ಲಿ ಬಿಸಿಯೂಟ: ಶ್ಲಾಘನೆ

Published:
Updated:
ಕಾಲೇಜಿನಲ್ಲಿ ಬಿಸಿಯೂಟ: ಶ್ಲಾಘನೆ

ದೊಡ್ಡಬಳ್ಳಾಪುರ: ರಾಜ್ಯದಲ್ಲೇ ಪ್ರಥಮ ಬಾರಿಗೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಧ್ಯಾಹ್ನ ಬಿಸಿ ಊಟ ನೀಡುವ ಯೋಜನೆಗೆ ಚಾಲನೆ ನೀಡುತ್ತಿರುವುದು ವಿಶೇಷವಾಗಿದೆ ಎಂದು ಶಾಸಕ ಜೆ.ನರಸಿಂಹಸ್ವಾಮಿ ಹೇಳಿದರು. ಅವರು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಂದಾಯ ಸಚಿವ ಕೆ.ಕರುಣಾಕರರೆಡ್ಡಿ ಅವರ 49ನೇ ಹುಟ್ಟು ಹಬ್ಬದ ಅಂಗವಾಗಿ ಸಂಕಲ್ಪ ಟ್ರಸ್ಟ್ ಎನ್.ಸುನೀಲ್‌ಕುಮಾರ್ ಅವರು ಜಾರಿಗೆ ತಂದಿರುವ ನಿರಂತರ ಬಿಸಿ ಊಟ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಬರುವ ಬಹುತೇಕ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದಿಂದ ಬರುತ್ತಿದ್ದಾರೆ. ಇಲ್ಲಿನ ಎಲ್ಲಾ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಬಿಸಿ ಊಟ ನೀಡಲು ಸಂಕಲ್ಪ ಟ್ರಸ್ಟ್ ವತಿಯಿಂದ 4.5 ಲಕ್ಷ ರೂಗಳನ್ನು ಕಾಲೇಜು ಅಭಿವೃದ್ಧಿ ಸಮಿತಿಗೆ ನೀಡಲಿದ್ದಾರೆ. ಇದರ ಜೊತೆಗೆ ಇನ್ನು ಹಲವಾರು ಜನ ದಾನಿಗಳಿಂದ ಹಣ ಸಂಗ್ರಹಿಸಿ ನಿಶ್ಚಿತ ಠೇವಣಿ ಹಿಡಲಾಗುವುದು. ಈ ಹಣದಿಂದ ನಿರಂತರವಾಗಿ ಬಿಸಿ ಊಟದ ಕಾರ್ಯಕ್ರಮ ನಡೆಯುವಂತೆ ಮಾಡಲಾಗುವುದು ಎಂದು ಹೇಳಿದರು.ಸಂಕಲ್ಪ ಟ್ರಸ್ಟ್ ಅಧ್ಯಕ್ಷ ಎನ್.ಸುನೀಲ್‌ಕುಮಾರ್ ಮಾತನಾಡಿ, ಕಂದಾಯ ಸಚಿವರ ಕೆ.ಕರುಣಾಕರರೆಡ್ಡಿ ಅವರ 49ನೇ ಹುಟ್ಟು ಹಬ್ಬದ ಅಂಗವಾಗಿ ಆರಂಭಿಸಲಾಗಿರುವ ಅರ್ಥಪೂರ್ಣವಾದ ಬಿಸಿ ಊಟದ ಕಾರ್ಯಕ್ರಮವನ್ನು ನಿರಂತರವಾಗಿ ಮುಂದುವರೆಸಲು ಅಗತ್ಯ ಹಣಕಾಸಿನ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದರು.  ಸಮಾರಂಭದಲ್ಲಿ ನಗರ ಸಭೆ ಮಾಜಿ ಅಧ್ಯಕ್ಷ ಜೆ.ರಾಜೇಂದ್ರ,ತಾಪಂ ಅಧ್ಯಕ್ಷ ಎಸ್.ಎಸ್.ಅಶ್ವತ್ಥ್‌ನಾರಾಯಣಕುಮಾರ್, ಟಿಎಪಿಎಂ ಸಿಎಸ್ ಅಧ್ಯಕ್ಷ ಎಸ್.ದಯಾನಂದ್, ಬಗರ್‌ಹುಕುಂ ಸಾಗುವಳಿ ಭೂ ಮಂಜೂರಾತಿ ಸಮಿತಿ ತಾಲ್ಲೂಕು ಅಧ್ಯಕ್ಷ ಕೆ.ಎಂ.ಮುನಿರಾಮೇಗೌಡ, ಪ್ರಾಚಾರ್ಯ ಪ್ರೊ.ಎಸ್.ಪಿ.ರಾಜಣ್ಣ, ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಮಂಜುನಾಥ್, ನಗರ ಸಭೆ ಸದಸ್ಯ ಎನ್.ಕೆ.ರಮೇಶ್ ಮುಂತಾದವರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry