ಬುಧವಾರ, ನವೆಂಬರ್ 20, 2019
21 °C

ಕಾಲೇಜುಗಳಲ್ಲಿ ರಾಜಕಾರಣ ಬೇಡ

Published:
Updated:
ಕಾಲೇಜುಗಳಲ್ಲಿ ರಾಜಕಾರಣ ಬೇಡ

ಕೋಲ್ಕತ್ತ(ಪಿಟಿಐ): ಕಾಲೇಜು ಮಟ್ಟದಲ್ಲಿ ರಾಜಕಾರಣವನ್ನು ನಿಷೇಧಿಸಬೇಕೆಂದು ಮೃತ ಎಸ್‌ಫ್‌ಐ ಮುಖಂಡನ ಸಹೋದರಿ ಸುಮಿತ ಸೇನ್ ಗುಪ್ತ ಗುರುವಾರ ಆಗ್ರಹಿಸಿದ್ದಾರೆ.

ರಾಜಕೀಯ ಪಕ್ಷಗಳ ನಾಯಕರು ಅಮಾಯಕ ಕಾಲೇಜು ವಿದ್ಯಾರ್ಥಿಗಳನ್ನು   ರಾಜಕಾರಣಕ್ಕೆ ಎಳೆದು ತರುತ್ತಿದ್ದಾರೆ. ಅವರನ್ನು ಪ್ರತಿಭಟನೆ ಮತ್ತು ಹೋರಾಟಗಳಿಗೆ ಬಳಸಿಕೊಂಡು ಅವರ ಭವಿಷ್ಯವನ್ನು ಹಾಳು ಮಾಡುತ್ತಿದ್ದಾರೆ ಎಂದು ಸುಮಿತ ಸೇನ್ ಗುಪ್ತ ಆರೋಪಿಸಿದ್ದಾರೆ.ಸ್ನಾತಕೋತ್ತರ ಪದವಿಯನ್ನು ಓದುತ್ತಿದ್ದ ನನ್ನ ತಮ್ಮನನ್ನು ಸಿಪಿಐ(ಎಂ) ಪಕ್ಷದ ನಾಯಕರು ರಾಜಕೀಯ ಕಾರಣಗಳಿಗೆ ಬಳಸಿಕೊಂಡಿದ್ದಾರೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.ವಿದ್ಯಾರ್ಥಿಗಳು ಮೊದಲು ವಿದ್ಯಾಬ್ಯಾಸದ ಕಡೆ ಗಮನ ಕೊಡಬೇಕು .ರಾಜಕೀಯ ರ್‍ಯಾಲಿಗಳಲ್ಲಿ ಭಾಗವಹಿಸಬಾರದು ಎಂದು ಅವರು ಕಿವಿಮಾತು ಹೇಳಿದರು.

ಪ್ರತಿಕ್ರಿಯಿಸಿ (+)