ಕಾಲೇಜು ಉದ್ಯಾನ ನಿರ್ಮಾಣಕ್ಕೆ ಚಾಲನೆ

7

ಕಾಲೇಜು ಉದ್ಯಾನ ನಿರ್ಮಾಣಕ್ಕೆ ಚಾಲನೆ

Published:
Updated:

ಹಿರಿಯೂರು: ಬಯಲುಸೀಮೆ ಪ್ರದೇಶವನ್ನು ಶಾಶ್ವತ ಬರಗಾಲ ಎಂಬ ಹಣೆಪಟ್ಟಿಯಿಂದ ಮುಕ್ತಗೊಳಿಸಲು ಅವಕಾಶವಿದ್ದ ಎಲ್ಲ ಕಡೆಗಳಲ್ಲಿ ಸಸಿ ನೆಡುವ ಮೂಲಕ ಹಸಿರು ಮೂಡಿಸಬೇಕು ಎಂದು ರಾಜ್ಯ ಸರ್ಕಾರದ ಗೃಹ ಇಲಾಖೆ ಆಪ್ತ ಕಾರ್ಯದರ್ಶಿ ಕೆ. ಅಮರನಾರಾಯಣ ಕರೆ ನೀಡಿದರು.ನಗರದ ವಾಣಿ ಸಕ್ಕರೆ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಮಂಗಳವಾರ ಕಾಲೇಜು ಉದ್ಯಾನ ನಿರ್ಮಾಣಕ್ಕೆ ಸಸಿ ನೆಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.ಕಾಲೇಜಿನ ಪ್ರಾಂಶುಪಾಲ ಡಾ.ಸಿ. ಶಿವಲಿಂಗಪ್ಪ ಮಾತನಾಡಿ, ಅಮರನಾರಾಯಣ ಅವರು ಚಿತ್ರದುರ್ಗದ ಜಿಲ್ಲಾಧಿಕಾರಿ ಆಗಿದ್ದ `ಜಲನಾರಾಯಣ' ಎಂದು ಹೆಸರು ಪಡೆದಿದ್ದರು. ಅಪಾರ ಪರಿಸರ ಕಾಳಜಿ ಹೊಂದಿರುವ ಅವರು ಸರ್ಕಾರದಿಂದ ಶಾಲಾ-ಕಾಲೇಜುಗಳಲ್ಲಿ ಉದ್ಯಾನ ನಿರ್ಮಾಣಕ್ಕೆ ಆರ್ಥಿಕ ನೆರವು ಕೊಡಿಸಬೇಕು ಎಂದು ಮನವಿ ಮಾಡಿದರು.ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಿರ್ದೇಶಕಿ ಡಿ.ಎಸ್. ಶಮಂತಾ, ವೈ. ತಿಪ್ಪೇಸ್ವಾಮಿ,ಡಿ. ಧರಣೇಂದ್ರಯ್ಯ,ಪಿ.ಎಸ್. ಚಂದ್ರಶೇಖರಯ್ಯ,ಆರ್. ತಿಪ್ಪೇಸ್ವಾಮಿ,ಆರ್. ರಂಗಮ್ಮ, ಸಿ. ಪದ್ಮಾವತಿ, ವೈ.ಕೆ. ಮಂಜುನಾಥ್, ನಾಗರಾಜು, ರಾಮಪ್ಪ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry