ಕಾಲೇಜು ಎರಡು ಕಲೆ ನೂರು

7
ಪಿಕ್ಚರ್ ಪ್ಯಾಲೆಸ್

ಕಾಲೇಜು ಎರಡು ಕಲೆ ನೂರು

Published:
Updated:
ಕಾಲೇಜು ಎರಡು ಕಲೆ ನೂರು

ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ನಡೆದ ಅಂತರ ಕಾಲೇಜು ಮಟ್ಟದ `ಸಂಭ್ರಮ ಫ್ಯಾಷನ್ ಶೋ 2013'ರಲ್ಲಿ ವಿದ್ಯಾರ್ಥಿಗಳು ಮಾಡ್ ಹಾಗೂ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದರೆ, ಅರಮನೆ ರಸ್ತೆಯಲ್ಲಿರುವ ಸರ್ಕಾರಿ ಆರ್.ಸಿ. ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ನಡೆದ ಜಾನಪದ ಉತ್ಸವದಲ್ಲಿ  ವಿದ್ಯಾರ್ಥಿಗಳು ದೇಸಿ ಉಡುಪಿನಲ್ಲಿ ಕಂಗೊಳಿಸಿದರು.ಮಹಾರಾಣಿ ಕಾಲೇಜಿನ ವಿದ್ಯಾರ್ಥಿನಿಯರು ಕಣ್ಣುಕುಕ್ಕುವ ವಸ್ತ್ರ ಧರಿಸಿ ರ‌್ಯಾಂಪ್‌ವಾಕ್ ಮಾಡಿ, ಬಾಗಿ ಬಳುಕಿ ನಿಂತು ಪೋಸುಕೊಟ್ಟು ಎಲ್ಲರಿಂದ ಮೆಚ್ಚುಗೆಯ ಚಪ್ಪಾಳೆ ಗಿಟ್ಟಿಸಿದರು. ಹಾಗೆಯೇ ಮೈನವಿರೇಳಿಸುವ ನೃತ್ಯ ಮಾಡಿ ಶಹಬ್ಬಾಸ್‌ಗಿರಿ ಪಡೆದುಕೊಂಡರು. ಇನ್ನೂ ಆರ್.ಸಿ. ಕಾಲೇಜಿನ ಕೆಲ ವಿದ್ಯಾರ್ಥಿನಿಯರು ಇಳಕಲ್ ಸೀರೆ ಉಟ್ಟು ಮುದ್ದು ಮುದ್ದಾಗಿ ಕಾಣಿಸಿಕೊಂಡರೆ, ಮತ್ತೆ ಕೆಲವರು ವೀರಗಾಸೆ, ಸೋಮನ ಕುಣಿತ, ಪಟ್ಟದ ಕುಣಿತದಲ್ಲಿ ಭಾಗವಹಿಸಿ ತಮ್ಮ ಕಲಾ ಪ್ರತಿಭೆಯನ್ನು ಪ್ರದರ್ಶಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry