ಕಾಲೇಜು ಕಟ್ಟಡಗಳಿಗೆ ಭೂಮಿಪೂಜೆ

7

ಕಾಲೇಜು ಕಟ್ಟಡಗಳಿಗೆ ಭೂಮಿಪೂಜೆ

Published:
Updated:

ಕೆ.ಆರ್.ನಗರ: `ಪಟ್ಟಣದಲ್ಲಿ ರೂ 5ಕೋಟಿ ಮೊತ್ತದಲ್ಲಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ ಸುಸಜ್ಜಿತ ಕಟ್ಟಡ ನಿರ್ಮಿಸಲಾಗುತ್ತದೆ' ಎಂದು ಶಾಸಕ ಸಾ.ರಾ. ಮಹೇಶ್ ಶುಕ್ರವಾರ ಹೇಳಿದರು.ಪಟ್ಟಣದ ಕೃಷ್ಣರಾಜೇಂದ್ರ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಕಾಲೇಜು ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು.ಕಾಲೇಜಿಗೆ ಕಟ್ಟಡದ ಅಗತ್ಯತೆಯ ಬಗ್ಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ನಮ್ಮ ಮನವಿಗೆ ಸ್ಪಂದಿಸಿದ ಅಂದಿನ ಸರ್ಕಾರ ಕಟ್ಟಡಕ್ಕೆ ಮಂಜೂರಾತಿ ನೀಡಿದೆ. ಅದರಂತೆ 1.10 ಎಕೆರೆ ವಿಸ್ತೀರ್ಣದಲ್ಲಿ ಕಾಲೇಜು ಕಟ್ಟಡ ನಿರ್ಮಾಣ ಮಾಡಲಾಗುತ್ತದೆ. ಇದಕ್ಕಾಗಿ ಮೊದಲ ಹಂತದ ಅನುದಾನ ರೂ 2 ಕೋಟಿ ಮಂಜೂರಾಗಿದೆ. ಶೀಘ್ರ ಕಾಮಗಾರಿ ಪೂರ್ಣ ಗೊಳಿಸುವಂತೆ ಗುತ್ತಿಗೆ ಪಡೆದ ಅರುಣಾ ಕನ್‌ಸ್ಟ್ರಕ್ಷನ್ ಕಂಪನಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.ಜಿಲ್ಲಾ ಪಂಚಾಯಿತಿ ಪ್ರಭಾರ ಅಧ್ಯಕ್ಷ ಸಿ.ಜೆ. ದ್ವಾರಕೀಶ್, ಪ್ರಾಂಶುಪಾಲ ಕೆ.ಆರ್. ದೀಕ್ಷಿತ್, ಕೆ.ಎಲ್. ರಮೇಶ್, ಮುಖಂಡರಾದ ಚಂದ್ರಶೇಖರ್, ಹೊಸಹಳ್ಳಿ ವೆಂಕಟೇಶ್, ಎ.ಟಿ. ಸೋಮಶೇಖರ್, ಪುರಸಭೆ ಮಾಜಿ ಅಧ್ಯಕ್ಷೆ ಗೀತಾ ಮಹೇಶ್, ಕೆ.ಎಸ್. ರೇವಣ್ಣ ಇದ್ದರು.ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ

ಹುಣಸೂರು:
  ತಾಲ್ಲೂಕಿನ ರತ್ನಾಪುರಿ ಗ್ರಾಮದಲ್ಲಿ ಕೇಂದ್ರ ಸರ್ಕಾರದ ವಸತಿ ಶಾಲೆ ಸೇರಿದಂತೆ ಸಂಗೀತ ವಿಶ್ವ ವಿದ್ಯಾನಿಲಯವೂ ಆರಂಭಗೊಳ್ಳಲಿದೆ ಎಂದು ಶಾಸಕ ಎಚ್.ಪಿ. ಮಂಜುನಾಥ್ ಹೇಳಿದರು. ತಾಲ್ಲೂಕಿನ ರತ್ನಾಪುರಿ ಗ್ರಾಮದಲ್ಲಿ ಕಸ್ತೂರಿ ಬಾ ಬಾಲಿಕ ವಸತಿ ಶಾಲೆಯ ಕಟ್ಟಡ ಕಾಮಗಾರಿಗೆ ಗುದ್ದಲಿ ಪೂಜೆ ಸಲ್ಲಿಸಿ ಮಾತನಾಡಿ, ಕ್ಷೇತ್ರವು ಅತಿ ಹೆಚ್ಚು  ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಹೊಂದಿದೆ. ರೂ 1.14 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಕಸ್ತೂರಿ ಬಾ ಬಾಲಿಕ ವಸತಿ ಶಾಲೆಯಲ್ಲಿ 100 ವಿದ್ಯಾರ್ಥಿಗಳಿಗೆ ವ್ಯವಸ್ಥೆ ಕಲ್ಪಸಿಲಾಗುತ್ತಿದ್ದು, ಎರಡು ಮತ್ತು ಮೂರನೇ ಹಂತದ ಕಟ್ಟಡ ನಿರ್ಮಾಣವಾದ ಬಳಿಕ 500ಕ್ಕೂ ಹೆಚ್ಚು ಆರ್ಥಿಕವಾಗಿ ಹಿಂದುಳಿದ ಹೆಣ್ಣು ಮಕ್ಕಳಿಗೆ  ಶಿಕ್ಷಣ ನೀಡಲಾಗುವುದು ಎಂದರು.ರತ್ನಾಪುರಿ ಗ್ರಾಮದಲ್ಲಿ ಈಗಾಗಲೇ  ಪದವಿ ಪೂರ್ವ ಕಾಲೇಜು ತೆರೆಯಲಾಗಿದೆ. ಆದರೆ, ಕಾಲೇಜು ನಡೆಸಲು  ಸೂಕ್ತ ಕಟ್ಟಡ ಸೌಲಭ್ಯವಿಲ್ಲ. ವಿಜ್ಞಾನ ವಿಭಾಗವೂ ತೆರೆದು ಉಪನ್ಯಾಸಕರನ್ನು  ನೇಮಿಸಲಾಗಿದೆ. ಕಟ್ಟಡದ ಕೊರತೆಯನ್ನು ಪ್ರಸಕ್ತ ಆರ್ಥಿಕ ಸಾಲಿನ ಕಡೆಯಲ್ಲಿ ನೀಗಿಸುವ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.ಕಾಲೇಜು ವಿಭಾಗದ ಪ್ರಾಂಶುಪಾಲ ಗುಣಶೇಖರ್ ಮತ್ತು  ಉಪ ಪ್ರಾಂಶುಪಾಲ ಮೋಹನ್‌ರಾಜ್, ಹರಿಹರ ಆನಂದಸ್ವಾಮಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಡಾ.ಪುಷ್ಪಾ ಅಮರನಾಥ್, ರಮೇಶ್, ತಾಲ್ಲೂಕು ಪಂಚಾಯಿತಿ ಸದಸ್ಯೆ ಪರಮೇಶ್ವರಿ, ಕ್ಷೇತ್ರ ಶಿಕ್ಷಣಾಧಿಕಾರಿ ರಾಜಶೇಖರ್, ಉದ್ದೂರು ಕಾವಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ವೆಂಕಟರಮಣ, ಆಸ್ಪತ್ರೆ ಕಾವಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಯ್ಯ, ಕುನ್ನೇಗೌಡ ಇದ್ದರು.ಒಕ್ಕಲೆಬ್ಬಿಸಿದ ಕುಟುಂಬಗಳಿಗೆ ನಿವೇಶನ

ಹುಣಸೂರು:
ಚಿಕ್ಕಹುಣಸೂರು ಸರ್ಕಾರಿ ಪ್ರೌಢಶಾಲೆ ನಿರ್ಮಿಸಲು ಗುರುತಿಸಿದ್ದ ಸರ್ಕಾರಿ ನಿವೇಶನದಲ್ಲಿ ಬೀಡು ಬಿಟ್ಟ ಗ್ರಾಮಸ್ಥರಿಗೆ ಆಶ್ರಯ ಸಮಿತಿ ವತಿಯಿಂದ ನಿವೇಶನ ನೀಡಲಾಗುವುದು ಎಂದು ಶಾಸಕ ಎಚ್.ಪಿ. ಮಂಜುನಾಥ್ ಭರವಸೆ ನೀಡಿದರು.ತಾಲ್ಲೂಕಿನ ಚಿಕ್ಕಹುಣಸೂರು ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲಾ ಕಟ್ಟಡಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಸರ್ಕಾರಿ ನಿವೇಶನದಲ್ಲಿ ಹತ್ತಾರು ವರ್ಷಗಳಿಂದ ನೆಲಸಿ ಜೀವನ ನಿರ್ವಹಣೆ ಮಾಡುತ್ತಿದ್ದ ಗ್ರಾಮಸ್ಥರನ್ನು ಒಕ್ಕಲೆಬ್ಬಿಸಲೇ ಬೇಕಾದ ಸಂದರ್ಭ ಎದುರಾಯಿತು. ಒಕ್ಕಲೆಬ್ಬಿಸಿದ ಕುಟುಂಬಗಳಿಗೆ ಬೇರೆಡೆ ನಿವೇಶನ ನೀಡುವುದಾಗಿ ಈಗಾಗಲೇ ಭರವಸೆ ನೀಡಿದ್ದೇನೆ. ಅದರಂತೆ ತಮ್ಮ ಮಾತಿಗೆ ತಪ್ಪದೆ ನಿವೇಶನ ನೀಡಲಾಗುವುದು ಎಂದರು.1ಲಕ್ಷ ದೇಣಿಗೆ: ಚಿಕ್ಕಹುಣಸೂರು ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಮೂಲಭೂತ ಸವಲತ್ತುಗಳ ಕೊರತೆ ಎದುರಾಗಿದ್ದು, ಶಾಲಾಭಿವೃದ್ಧಿ ಸಮಿತಿಗೆ ರೂ 1 ಲಕ್ಷ ವೈಯಕ್ತಿಕವಾಗಿ ನೀಡಿದ್ದೆ. ಆ ಹಣವನ್ನು ಬಳಸಿಕೊಂಡು ಮಕ್ಕಳಿಗೆ ಅವಶ್ಯಕ ಸವಲತ್ತು ನೀಡಲಾಗಿದೆ ಎಂದರು.ಪುರಸಭೆ ಸದಸ್ಯೆ ಸುನೀತಾ ಜಯರಾಂ, ಶ್ರೀನಿವಾಸ್, ರವಿಕುಮಾರ್, ಫಾಗಿಮುನ್ನಿಸ್ಸಾ, ಗೋವಿಂದೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ರಾಜಶೇಖರ್, ಮುಖ್ಯಶಿಕ್ಷಕಿ ಗುಲ್ನಾಜ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry