ಕಾಲ್ತುಳಿತ: ಮೂರು ಸಾವು

7

ಕಾಲ್ತುಳಿತ: ಮೂರು ಸಾವು

Published:
Updated:

ಭೋಪಾಲ್ (ಪಿಟಿಐ): ದೇವರ ದರ್ಶನದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಬಾಲಕಿ ಸೇರಿದಂತೆ ಮೂವರು ಮಹಿಳೆಯರು ಮೃತಪಟ್ಟು, 35 ಭಕ್ತರು ಗಾಯಗೊಂಡಿರುವ ಘಟನೆ ಶನಿವಾರ ಮಧ್ಯಪ್ರದೇಶದಲ್ಲಿ ನಡೆದಿದೆ.



ಸೆಹೊರ್ ಜಿಲ್ಲೆಯ ಬೆಟ್ಟದ ತುದಿಯಲ್ಲಿರುವ ಸಲ್ಕನ್‌ಪುರ್ ದೇವಿ ದೇವಾಲಯದಲ್ಲಿ ಮುಂಜಾನೆ ಘಟನೆ ನಡೆದಿದ್ದು, ಮೃತಪಟ್ಟವರನ್ನು ಭುರಿಯಾ ಬಾಯಿ (35),ಯಶೋದಾ (35) ಹಾಗೂ ರಾಣಿ (15) ಎಂದು ಗುರುತಿಸಲಾಗಿದೆ.



ಗಾಯಗೊಂಡವರನ್ನು ಸೆಹೊರ್, ಬೋಪಾಲ್ ಹಾಗೂ ಒಶಾಂಗಾಬಾದ್ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

`ನವರಾತ್ರಿ ಹಬ್ಬದ ಪ್ರಯುಕ್ತ ಕಿಕ್ಕಿರಿದು ತುಂಬಿದ್ದ ಭಕ್ತರು ದೇವಿಯ ದರ್ಶನ ಮುಗಿಸಿಕೊಂಡು ಮೆಟ್ಟಿಲು ಇಳಿದು ಬರುವಾಗ ಬಾಲಕಿ ಮತ್ತು ಮಹಿಳೆಯರು ಕಾಲು ಜಾರಿ ಬಿದ್ದಿದ್ದಾರೆ. ನಂತರ, ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿದೆ~ ಎಂದು ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry