ಶುಕ್ರವಾರ, ಅಕ್ಟೋಬರ್ 18, 2019
27 °C

ಕಾಲ್ತುಳಿತ: ಮೂವರು ಬಲಿ

Published:
Updated:

ಇಸ್ಲಾಮಾಬಾದ್(ಐಎಎನ್‌ಎಸ್): ಲಾಹೋರ್‌ನಲ್ಲಿ ಸೋಮವಾರ ರಾತ್ರಿ ನಡೆದ ಖ್ಯಾತ ಗಾಯಕ ಅತಿಫ್ ಅಸ್ಲಾಮ್ ಅವರ ಗಾಯನಗೋಷ್ಠಿಯ ಸಂದರ್ಭದಲ್ಲಿ ಸಂಭವಿಸಿದ ನೂಕುನುಗ್ಗಲು ಮತ್ತು ಕಾಲ್ತುಳಿತದಲ್ಲಿ ಮೂವರು ಬಾಲಕಿಯರು ಸತ್ತಿದ್ದು, ಐವರು ಗಾಯಗೊಂಡಿದ್ದಾರೆ.ಈ ಗಾಯನಗೋಷ್ಠಿಯನ್ನು ಖಾಸಗಿ ಕಾಲೇಜು ಆಯೋಜಿಸಿದ್ದು, ಸುಮಾರು 4,000 ಮಂದಿ ಸೇರಬಹುದಾದ ಸಭಾಂಗಣದಲ್ಲಿ 7,000 ಜನರು ಸೇರಿದ್ದು ಈ ಘಟನೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.  ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಶಹಬಾಜ್ ಶರೀಫ್ ಘಟನೆ ಕುರಿತು ಹೆಚ್ಚಿನ ತನಿಖೆಗೆ ಆದೇಶಿಸಿದ್ದಾರೆ.

 

Post Comments (+)