ಕಾಲ್ಪನಿಕ ವೇತನ: ಸುಪ್ರೀಂ ಆದೇಶ ಜಾರಿಗೆ ಒತ್ತಾಯ

7

ಕಾಲ್ಪನಿಕ ವೇತನ: ಸುಪ್ರೀಂ ಆದೇಶ ಜಾರಿಗೆ ಒತ್ತಾಯ

Published:
Updated:

ಗದಗ: ಅನುದಾನಿತ ಶಿಕ್ಷಣ ಸಂಸ್ಥೆ ಸಿಬ್ಬಂದಿಗೆ ಸಂಬಂಧಿಸಿದಂತೆ ನೇಮಕಾತಿ ದಿನಾಂಕದಿಂದಲೇ ಕಾಲ್ಪನಿಕ ವೇತನ,  ಪದೋನ್ನತಿ, ಪಿಂಚಣಿ ಇತ್ಯಾದಿ ಸೌಲಭ್ಯ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ ಹಿನ್ನಲೆ­ಯಲ್ಲಿ ಕೋರ್ಟ್‌ ಮೊರೆ ಹೋಗದೆ ಇರುವ ಎಲ್ಲ ಸಿಬ್ಬಂದಿಗೂ ಸೌಲಭ್ಯ ವಿಸ್ತರಣೆ  ಆದೇಶ ಹೊರಡಿಸುವಂತೆ  ಒತ್ತಾಯಿಸಿ ವಿಧಾನ ಪರಿಷತ್‌ ಸದಸ್ಯರಾದ ಮಹಾಂತೇಶ ಕೌಜಲಗಿ, ಅರುಣ ಶಹಾಪೂರ ಹಾಗೂ ರಾಜ್ಯ ಪದವಿ ಪೂರ್ವ ಮಹಾವಿದ್ಯಾಲಯ­ಗಳ ನೌಕರರ ಸಂಘದ ಗೌರವಾಧ್ಯಕ್ಷ ಪ್ರೊ.ಎಸ್.ವಿ.ಸಂಕನೂರ ಅವರ ನೇತೃತ್ವದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಹಾಗೂ ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಸಚಿವ ಎಸ್.ಆರ್.ಪಾಟೀಲ ಅವರಿಗೆ ಮನವಿ ಸಲ್ಲಿಸಲಾಯಿತು.ಸರ್ಕಾರದ -2006 ರ ಏ.10ರ ಆದೇಶದನ್ವಯ ಕಳೆದ 7ವರ್ಷಗಳಿಂದ ಅನುದಾನಿತ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜುಗಳ ಎಲ್ಲ ಸಿಬ್ಬಂದಿಯವರ 10, 15, 20 ವರ್ಷದ ಪದೋನ್ನತಿ ಸೌಲಭ್ಯ ಮತ್ತು ಸ್ಥಗಿತ ವೇತನಗಳ ಸೌಲಭ್ಯಗಳನ್ನು ಇಲಾಖೆ ಮಂಜೂರು ಮಾಡುವು ದನ್ನು ನಿಲ್ಲಿಸಿದ್ದರಿಂದ ಹೆಚ್ಚಿನ ಸಂಖ್ಯೆಯ ಉಪನ್ಯಾಸಕರು ಹಾಗೂ ಬೋಧ ಕೇತರ ವರ್ಗದವರು ಮಾನಸಿಕ ಹಿಂಸೆಗೆ ಒಳಗಾಗಿರುವದನ್ನು ಸಂಘದ ಗೌರವಾಧ್ಯಕ್ಷ ಎಸ್.ವ್ಹಿ.ಸಂಕನೂರ ಅವರು ಸಚಿವರ ಗಮನಕ್ಕೆ ತಂದರು. ಅಲ್ಲದೆ ಪಿಂಚಣಿ ನಿಗದಿಪಡಿಸುವಾಗ ಆದ ಅನ್ಯಾಯದ ಬಗ್ಗೆ ಮಾಹಿತಿ ನೀಡಿ, ನಿವೃತ್ತಿ ಆದವರಿಗೂ ನ್ಯಾಯ ಒದಗಿ ಸಲು ಮನವಿ ಮಾಡಿದರು.ಸಮಸ್ಯೆಗೆ ಸಕಾರಾತ್ಮಕವಾಗಿ ಸ್ಪಂದಿಸಿ ಮಾತನಾಡಿದ ಸಚಿವರು, ಕೂಡಲೇ ಅಧಿಕಾರಿಗಳ ಸಭೆ ಕರೆದು ಸಿಬ್ಬಂದಿಗೆ ನ್ಯಾಯ ಒದಗಿಸುವ ಭರವಸೆ ನೀಡಿದರು. ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಬಿ.ಎಡ್. ಕಡ್ಡಾಯ ಸಮಸ್ಯೆ ಕುರಿತು ಸಚಿವರೊಂದಿಗೆ ಚರ್ಚಿಸಿದಾಗ ರಜೆಯ ಮೇಲೆ ಅಧ್ಯಯನ ಮಾಡಲು ಹೋಗುವ ಸಿಬ್ಬಂದಿಗೆ ತಕ್ಷಣ ಅನುಮತಿ ನೀಡಲು ಕ್ರಮ ಜರುಗಿಸುವುದಾಗಿ ತಿಳಿಸಿದರು. ಈ ಸಿಬ್ಬಂದಿಗೆ ಅರ್ಧದಷ್ಟು ವೇತನವನ್ನು ನೀಡಿ ಅಧ್ಯಯನಕ್ಕೆ ಕಳುಹಿಸುವ ಬಗ್ಗೆ ಸರಕಾರ ಚಿಂತನೆ ನಡೆಸಿದೆ ಎಂದು ತಿಳಿಸಿದರು.ನಿಯೋಗದಲ್ಲಿ  ರಾಜ್ಯ ಪದವಿ ಪೂರ್ವ ಮಹಾವಿದ್ಯಾಲಯಗಳ ನೌಕರರ ಸಂಘದ ಅಧ್ಯಕ್ಷ ಎ.ಎಸ್. ಪಾಟೀಲ, ಬಾಗಲಕೋಟ ಜಿಲ್ಲಾ ಘಟಕ ಅಧ್ಯಕ್ಷ ಆರ್.ಬಿ. ಸಂಕದಾಳ, ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯ ರಾದ ಎಸ್.ಎಚ್.ವಾಸನ್, ಜಿ.ಎಂ. ಹಕಾರಿ, ಜಿಲ್ಲಾ ಘಟಕ ಕಾರ್ಯಾಧ್ಯಕ್ಷ  ಎಮ್.ಸಿ. ಕಟ್ಟಿಮನಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry