ಕಾಲ್‌ಸೆಂಟರ್‌ ಮೇಲೆ ದಾಳಿ ಆರೋಪಿಗಾಗಿ ಶೋಧ

7

ಕಾಲ್‌ಸೆಂಟರ್‌ ಮೇಲೆ ದಾಳಿ ಆರೋಪಿಗಾಗಿ ಶೋಧ

Published:
Updated:

ಮಂಗಳೂರು: ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೂಳೂರಿನ ಓರ್ಬಿಸ್ ಬ್ಯುಸಿ ನೆಸ್ ಮ್ಯಾನೇಜ್‌ಮೆಂಟ್ ಹೆಸರಿನ ಕಾಲ್ ಸೆಂಟರ್‌ಗೆ ಶುಕ್ರವಾರ ರಾತ್ರಿ ನಾಲ್ವರು ದುಷ್ಕರ್ಮಿಗಳು ನುಗ್ಗಿ ದಾಂದಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆ ಸಿಕೊಂಡಿರುವ ಆರೋಪಿಯನ್ನು ಪತ್ತೆ ಹಚ್ಚುವಂತೆ ಪೊಲೀಸ್‌ ಉಪ ಆಯುಕ್ತ ಜಗದೀಶ್‌ ಅವರು ಕಾವೂರ್‌ ಪೊಲೀಸ್‌ ಠಾಣಾಧಿಕಾರಿಗೆ ಸೂಚಿಸಿದ್ದಾರೆ.ಭಾನುವಾರ ಈ ಕಾಲ್‌ಸೆಂಟರ್‌ನ ಆಫೀಸರ್‌  ಕಾವೂರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದಾಂದಲೆ ನಡೆಸಿದವರ ಪೈಕಿ ಮೂವರನ್ನು ಬಂಧಿಸಿ ಬಿಡು ಗಡೆ ಮಾಡಲಾಗಿದೆ. ಇನ್ನೊಬ್ಬ ಆರೋಪಿ ಶಿವ ಎಂಬಾತನಿಗಾಗಿ ಇದೀಗ ತೀವ್ರ ಶೋಧ ನಡೆದಿದೆ.‘ಕಾಲ್‌ಸೆಂಟರ್‌ನಲ್ಲಿ ವೃತ್ತಿನಿರತ ಮಹಿಳೆಯರಿಗೆ ನಿಂದಿಸಿದ್ದರೂ ಪೊಲೀಸರು ಅವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಂಡಿಲ್ಲ ಎಂಬುದಾಗಿ ಡಿಸಿಪಿ ಜಗದೀಶ್‌ ಗಮನಕ್ಕೆ ತಂದಿದ್ದೆವು. ಆ ಹಿನ್ನೆಲೆಯಲ್ಲಿ ತಲೆ ಮರೆಸಿಕೊಂಡಿರುವ ಆರೋಪಿ ಪತ್ತೆಗೆ ಡಿಸಿಪಿ ಸೂಚಿಸಿದ್ದಾರೆ ಎಂದು ಕಾಲ್‌ಸೆಂಟರ್‌ನ ಸುಜಿತ್‌ ಕುಮಾರ್‌  ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry