ಬುಧವಾರ, ಜೂನ್ 16, 2021
21 °C

ಕಾಳುಮೆಣಸು ಇಳುವರಿ ಕುಸಿತ: ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಪೋಕ್ಲು:  ಜಿಲ್ಲೆಯಲ್ಲಿ ಕಾಫಿ ಕೊಯ್ಲು ಮುಕ್ತಾಯದ ಹಂತ ತಲುಪಿದ್ದು, ಇದೀಗ ಬೆಳೆಗಾರರ ಚಿತ್ತ ಕಾಳುಮೆಣಸಿನತ್ತ ನೆಟ್ಟಿದೆ.

ಆದರೆ, ಕಾಫಿ ಫಸಲು ಕುಸಿತದ ಬೆನ್ನಲ್ಲೇ ಕಾಳು ಮೆಣಸಿನ ಉತ್ಪಾದನೆಯೂ ಗಣನೀಯವಾಗಿ ಕುಸಿದಿರುವುದು ಬೆಳೆಗಾರರ ಚಿಂತೆಗೆ ಕಾರಣವಾಗಿದೆ. ಕಪ್ಪುಬಂಗಾರಕ್ಕೆ ಸದ್ಯ ದಾಖಲೆಯ ಬೆಲೆ ಬಂದಿದ್ದರೂ ಬೆಳೆಗಾರರ ತೋಟದಲ್ಲಿ ಫಸಲು ಕುಸಿತ ಕಂಡಿದೆ.ಕಾಳು ಮೆಣಸಿನ ಫಸಲು ಕುಸಿತದಿಂದಾಗಿ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ.ಗೆ ₨ 520ರಿಂದ ₨ 550ರವರೆಗೆ ಧಾರಣೆ ಇದ್ದು, ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ನಾಪೋಕ್ಲು ವ್ಯಾಪ್ತಿಯ ಬಹುತೇಕ ಕಾಫಿ ತೋಟಗಳಲ್ಲಿ ಕಾಳು ಮೆಣಸು ಕೈಕೊಟ್ಟಿದೆ.ಕಾಫಿ ತೋಟಗಳಲ್ಲಿ ಮರಗಳಿಗೆ ಹಬ್ಬಿಸಿದ ಕಾಳುಮೆಣಸಿನ ಬಹುತೇಕ ಬಳ್ಳಿಗಳು ಕಂದುಬಣ್ಣಕ್ಕೆ ತಿರುಗಿವೆ. ಬಳ್ಳಿಗಳಲ್ಲಿದ್ದ ಎಲೆ ಹಾಗೂ ಕಾಳುಗಳು ನೆಲಕ್ಕೆ ಉದುರುತ್ತಿವೆ. ವರ್ಷವಿಡೀ ಕೊಟ್ಟಿಗೆ ಗೊಬ್ಬರ, ರಾಸಾಯನಿಕ ಗೊಬ್ಬರ ಹಾಗೂ ವಿವಿಧ ಕೀಟನಾಶಕ ಸಿಂಪಡಿಸಿ ಬೆಳೆಸಿದ್ದ ಬೆಳೆ ನೆಲದ ಪಾಲಾಗಿದೆ.ಕಾಳುಮೆಣಸಿನ ಬಳ್ಳಿಗಳ ನಿರ್ವಹಣೆಗೆ ಹೆಚ್ಚಿನ ಖರ್ಚು ತಗಲುವುದಿಲ್ಲ. ಮರಗಳಿಗೆ ಬಳ್ಳಿ ಹಬ್ಬಿಸಿ ವರ್ಷಕ್ಕೆ ಎರಡರಿಂದ ಮೂರು ಬಾರಿ ಗೊಬ್ಬರ ಹಾಕಿದರೆ ಸಾಕು. ಸಾಮಾನ್ಯವಾಗಿ ಕಾಫಿ ಧಾರಣೆ ಕುಸಿದ ಸಂದರ್ಭದಲ್ಲಿ ಕಾಳು ಮೆಣಸು ಬೆಳೆಗಾರರ ಕೈ ಹಿಡಿಯುತ್ತಿತ್ತು. ಈ ವರ್ಷ ಬಳ್ಳಿಗಳ ಬುಡಗಳು ಒಣಗಿವೆ. ರೋಗ ನಿಯಂತ್ರಣ ಮಾಡಿ ಬಳ್ಳಿಗಳನ್ನು ಉಳಿಸಿಕೊಳ್ಳುವುದು ರೈತರಿಗೆ ದೊಡ್ಡ ಸವಾಲಾಗಿದೆ.ದೇಶದಲ್ಲಿ ಕೇರಳ ಅತ್ಯಧಿಕ ಕಾಳುಮೆಣಸು ಬೆಳೆಯುವ ರಾಜ್ಯವಾಗಿದ್ದು, ಅಲ್ಲಿ ಸುಮಾರು 26,000 ಮೆಟ್ರಿಕ್ ಟನ್ ಪ್ರತಿವರ್ಷ ಉತ್ಪಾದಿಸುತ್ತದೆ. ಕರ್ನಾಟಕದಲ್ಲಿ 13,000 ಟನ್ ಕಾಳು ಮೆಣಸು ಉತ್ಪಾದನೆಯಾಗುತ್ತಿದೆ. ಕೊಡಗು ಜಿಲ್ಲೆಯಲ್ಲಿ ಸುಮಾರು 14,000 ಹೆಕ್ಟೇರು ಪ್ರದೇಶದಲ್ಲಿ ಸರಾಸರಿ 5,500 ಟನ್ ಮೆಣಸು ಬೆಳೆಯಲಾಗುತ್ತದೆ. ಈ ಬಾರಿ ಕಾಳು ಮೆಣಸಿನ ಉತ್ಪಾದನೆಯಲ್ಲಿ ಬಾರಿ ಕುಸಿತ ಉಂಟಾಗುವ ಸಾಧ್ಯತೆ ಇದೆ. ಪ್ರಮುಖ ಬೆಳೆಯೊಂದು ಕೈಕೊಟ್ಟಿರುವುದು  ಬೆಳೆಗಾರರಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.