ಮಂಗಳವಾರ, ಮಾರ್ಚ್ 9, 2021
31 °C

ಕಾಳ್ಗಿಚ್ಚು: ವಾಹನ ಸಂಚಾರ ಸ್ಥಗಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಳ್ಗಿಚ್ಚು: ವಾಹನ ಸಂಚಾರ ಸ್ಥಗಿತ

ಗೋಣಿಕೊಪ್ಪಲು: ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಮತ್ತಿಗೋಡು ಅರಣ್ಯದಲ್ಲಿ ಗುರುವಾರ ಕಾಳ್ಗಿಚ್ಚು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗೊಣಿಕೊಪ್ಪಲು – ಹುಣಸೂರು ನಡುವೆ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ಸುಮಾರು 5 ಗಂಟೆಯ ಕಾಲ ವಾಹನ ಸಂಚಾರವನ್ನು ನಿಷೇಧಿಸಲಾಗಿತ್ತು.ಆನೆಚೌಕೂರು ಸಮೀಪದ ಹುಣಸೂರು– ಗೋಣಿಕೊಪ್ಪಲು ಮುಖ್ಯರಸ್ತೆಯ ಎರಡು ಬದಿಗಳಲ್ಲಿ ಹಬ್ಬಿದ ಕಾಳ್ಗಿಚ್ಚಿಗೆ ಅಂಜಿ ಅನೇಕರು ವಾಹನ ನಿಲುಗಡೆ ಮಾಡಿದರು. ರಸ್ತೆಯ ಎರಡೂ ಬದಿಗಳಲ್ಲಿ ಒಣಗಿದ್ದ ಬಿದಿರು ಸಿಡಿಯುತ್ತಿದ್ದ ಪರಿಣಾಮ ಆನೆಚೌಕೂರಿಗಿಂತ ಸುಮಾರು 3 ಕಿ.ಮೀ. ಹಿಂದೆಯೇ ವಾಹನಗಳು ನಿಂತಿದ್ದವು.ವಿದ್ಯುತ್ ಸ್ಥಗಿತ

ಕೆ.ಆರ್. ನಗರ, ಹುಣಸೂರು ಮಾರ್ಗವಾಗಿ ದಕ್ಷಿಣ ಕೊಡಗಿಗೆ ಹಾದು ಹೋಗಿರುವ ವಿದ್ಯುತ್ ಮಾರ್ಗ ಕಾಳ್ಗಿಚ್ಚಿನ ಸಮೀಪವೇ ಇರುವ ಕಾರಣಕ್ಕೆ ಈ ಮಾರ್ಗದ ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸಲಾಗಿದೆ. ಕಾಳ್ಗಿಚ್ಚು ತಹಬಂದಿಗೆ ಬಾರದಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ‘ಸೆಸ್ಕ್’ ಅಧಿಕಾರಿಗಳು ತಿಳಿಸಿದರು.ತಿತಿಮತಿ ಎಸಿಎಫ್ ಕಾರ್ಯಪ್ಪ, ಆರ್ಎಫ್ಒ ಗೋಪಾಲ, ನಾಗರಹೊಳೆ ಹುಲಿ ಯೋಜನೆಯ ನಿರ್ದೇಶಕ ಗೋಕುಲ್‌ ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ಆರಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.