ಗುರುವಾರ , ಜೂನ್ 17, 2021
29 °C

ಕಾವಿಧಾರಿಗಳಿಂದ ಸಮಾಜಕ್ಕೆ ತಪ್ಪು ಸಂದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಂಗಾವತಿ: ಸಮಾಜ ಅಥವಾ ಒಂದು ರಂಗದಲ್ಲಿ ಉನ್ನತ ಸ್ಥಾನಮಾನದಲ್ಲಿರುವ ವ್ಯಕ್ತಿ ಸ್ವಾಮೀಜಿಗಳ ಆಶೀರ್ವಾದ ಕೋರಿ ಬಂದಾಗ ಆ ವ್ಯಕ್ತಿಯ ಯೋಗ್ಯತೆಗೆ ಅನುಗುಣವಾಗಿ ಕಾವಿಧಾರಿಗಳು ಸೂಕ್ತ ಸಲಹೆ ಸೂಚನೆ ನೀಡಬೇಕು ಎಂದು ಸಂಸದ ಎಸ್. ಶಿವರಾಮಗೌಡ ಹೇಳಿದರು.ನಗರದ ಚನ್ನಬಸವಸ್ವಾಮಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ವೀರಶೈವ ಜಂಗಮ ಸಮಾಜ ಆಯೋಜಿಸಿದ್ದ ಜಗದ್ಗುರು ರೇಣುಕಾಚಾರ್ಯರ ಜಯಂತ್ಯುತ್ಸವ ಮತ್ತು ಜನಜಾಗೃತಿ ಧರ್ಮ ಸಭೆಯಲ್ಲಿ ಮಾತನಾಡಿದರು.  

 

ವ್ಯಕ್ತಿಯ ತಪ್ಪುಗಳನ್ನು ಕಾವಿಧಾರಿ ನೇರ ನಿರ್ದಿಷ್ಟವಾಗಿ ಹೇಳಬೇಕು. ಧರ್ಮದಂಡದಿಂದ ದಂಡಿಸಬೇಕು. ಅದು ಬಿಟ್ಟು ಕಾವಿಗಳು ಅಧಿಕಾರ, ಹಣ ಉಳ್ಳ ವ್ಯಕ್ತಿಯ ತಪ್ಪು ಬೆಂಬಲಿಸುವುದು, ಅವನನ್ನು ಪ್ರೇರೇಪಿಸುವುದು ತರವಲ್ಲ. ಅದರಿಂದ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದರು.ಆದಿ ಜಗದ್ಗುರು ಪಂಚಾಚಾರ್ಯ ಸ್ಥಾಪಿಸಿದ ವೀರಶೈವ ಮತ ಇಂದು ಒಡೆದು ಹೋಳಾಗುತ್ತಿದೆ. ಮೊದಲು ವೀರಶೈವರು ಬಳಿಕ ಇತರೆ ಉಪ ಜಾತಿ ಎಂಬ ಭಾವನೆಯನ್ನು ಸ್ವಾಮೀಜಿಗಳು ಜನರಲ್ಲಿ ಮೂಡಿಸಬೇಕೆಂದು ಕರೆ ನೀಡಿದರು.ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಸಂಸದ ಎಚ್.ಜಿ. ರಾಮುಲು, ಸನಾತನ ಧರ್ಮ ಮತ್ತು ಧರ್ಮಗುರುಗಳಲ್ಲಿ ವೀರಶೈವ ಧರ್ಮಕ್ಕೆ ಪ್ರತ್ಯೇಕ ಸ್ಥಾನಮಾನವಿದೆ. ರೇಣುಕಾಚಾರ್ಯರು ಜನ್ಮ ತಳೆದಿಲ್ಲ. ಸ್ವಯಂ ಉದ್ಭವವಾಗಿದ್ದಾರೆ ಎಂದರು.ಶಾಸಕ ಶಿವರಾಜ ತಂಗಡಗಿ, ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಮಾತನಾಡಿದರು. ಚಳಿಗೇರಿಯ ವಿರುಪಾಕ್ಷಲಿಂಗ ಸ್ವಾಮಿ, ನಾಗಭೂಷಣ ಸ್ವಾಮಿ, ಕೊಟ್ಟೂರುಸ್ವಾಮಿ, ವಾಮದೇವ ಮಹಾಂತ ಸ್ವಾಮಿ, ಮಲ್ಲಿಕಾರ್ಜುನ ಸ್ವಾಮಿ, ಗವಿಸಿದ್ದಯ್ಯ ತಾತ ಇದ್ದರು.ಜಿ. ವೀರಪ್ಪ, ಶಶಿಧರ ಸ್ವಾಮಿ, ಬಸವರಾಜ ಮಳೇಮಠ, ಕವಿತಾ ಗುರುಮೂರ್ತಿ, ತಿಪ್ಪೇರುದ್ರಸ್ವಾಮಿ, ಆರ್.ಎಂ. ಗಂಜಿಗಟ್ಟಿ, ಡಿ.ಜಿ. ಮಠದ, ಕಾಶಿಬಾಯಿ, ಅರ್ಚನಾ ಹಿರೇಮಠ, ಸಿದ್ದರಾಮಯ್ಯ ಸ್ವಾಮಿ, ಮಂಜುನಾಥ ಎಚ್.ಎಂ. ಇತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.