ಕಾವೇರಿದ ಹೋರಾಟ ಬೆಂಬಲಿಸಿ ಜೆಡಿಎಸ್‌ನ ಓರ್ವ ಸಂಸದ, ನಾಲ್ವರು ಶಾಸಕರ ರಾಜೀನಾಮೆ

7

ಕಾವೇರಿದ ಹೋರಾಟ ಬೆಂಬಲಿಸಿ ಜೆಡಿಎಸ್‌ನ ಓರ್ವ ಸಂಸದ, ನಾಲ್ವರು ಶಾಸಕರ ರಾಜೀನಾಮೆ

Published:
Updated:

ಬೆಂಗಳೂರು (ಪಿಟಿಐ): ಕೃಷ್ಣರಾಜಸಾಗರ (ಕೆಆರ್‌ಎಸ್) ಜಲಾಶಯದಿಂದ ತಮಿಳುನಾಡಿಗೆ ನೀರು ಬಿಡುತ್ತಿರುವುದನ್ನು ವಿರೋಧಿಸಿ ನಡೆಸುತ್ತಿರುವ ಹೋರಾಟಗಳು ನಿರಂತರವಾಗಿ ಎರಡನೇಯ ದಿನಕ್ಕೆ ಕಾಲಿಟ್ಟಿದ್ದು, ಸೋಮವಾರ ಸರ್ಕಾರದ ಕ್ರಮವನ್ನು ಖಂಡಿಸಿ ಜೆಡಿಎಸ್‌ನ ಓರ್ವ ಸಂಸದ ಹಾಗೂ ನಾಲ್ವರು ಶಾಸಕರು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಿಗೆ ರಾಜೀನಾಮೆ ಸಲ್ಲಿಸಿದ್ದಾರೆ.ಸುಪ್ರೀಂ ಕೋರ್ಟ್ ಆದೇಶದನ್ವಯ ತಮಿಳುನಾಡಿಗೆ ನೀರು ಹರಿಸುತ್ತಿರುವ ಬಿಜೆಪಿ ಸರ್ಕಾರದ ಕ್ರಮವನ್ನು ಖಂಡಿಸಿ, ಕಾವೇರಿ ಹೋರಾಟವನ್ನು ಬೆಂಬಲಿಸಿರುವ ಜೆಡಿಎಸ್‌ನ ಮಂಡ್ಯ ಕ್ಷೇತ್ರದ ಲೋಕಸಭಾ ಸದಸ್ಯ ಎನ್.ಚೆಲುವರಾಯ ಸ್ವಾಮಿ ಹಾಗೂ ಮಂಡ್ಯ ಜಿಲ್ಲೆಗೆ ಸೇರಿರುವ ಶಾಸಕರಾದ ಕಲ್ಪನಾ ಸಿದ್ಧರಾಜು, ಸಿ.ಎಸ್.ಪುಟ್ಟರಾಜು, ಎಮ್.ಶ್ರೀನಿವಾಸ ಮತ್ತು ಎ.ಬಿ.ರಮೇಶ್ ಬಂಡಿ ಸಿದ್ದೇಗೌಡ ಅವರು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾದ ಎಚ್.ಡಿ.ಕುಮಾರಸ್ವಾಮಿ ಅವರಿಗೆ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅವರು `ಪಕ್ಷದ ಸಂಸದರು ಹಾಗೂ ಶಾಸಕರು ಸಾಮೂಹಿಕ ರಾಜೀನಾಮೆ ನೀಡುವ ಹಾಗೂ ಮುಂದಿನ ಹೋರಾಟದ ರೂಪರೇಷೆ ಸಿದ್ಧಪಡಿಸುವ ನಿಟ್ಟಿನಲ್ಲಿ ಚರ್ಚೆ ನಡೆಸುವ ಸಲುವಾಗಿ ಮಂಗಳವಾರ ಪಕ್ಷದ ಸಂಸದರ ಹಾಗೂ ಶಾಸಕರ ಸಭೆ ಕರೆಯಲಾಗಿದೆ~ ಎಂದು ಹೇಳಿದರು.ಈ ನಡುವೆ ಪ್ರತಿಭಟನೆಯ ತೀವ್ರಗೊಂಡಿರುವ ಮಂಡ್ಯ ನಗರದಲ್ಲಿ ಜಿಲ್ಲಾಡಳಿತ ಮುಂಜಾಗ್ರತೆ ಕ್ರಮವಾಗಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕ್ಷೀಪ್ರ ಕಾರ್ಯಾಚರಣೆ ಪಡೆ  ನಿಯೋಜಿಸಿದ್ದು,ಗೆಜ್ಜಲಗೇರಿಯಲ್ಲಿ ಸೋಮವಾರ ಶಿರಡಿ ಎಕ್ಸ್‌ಪ್ರೆಸ್ ರೈಲು ತಡೆಯಲು ಮುಂದಾದ 100 ಅಧಿಕ ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

 

ಮೈಸೂರು, ಚಾಮರಾಜನಗರ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಕಾವೇರಿರುವ ಕಾವೇರಿ ಹೋರಾಟ ನಿರಂತರವಾಗಿ ಮುಂದುವರಿದ್ದಿದ್ದು, ಇದರಿಂದಾಗಿ ಬೆಂಗಳೂರು -ಮೈಸೂರು ರಸ್ತೆಯ ಸಂಚಾರ ವ್ಯವಸ್ಥೆಯಲ್ಲಿ ಮೂರು ದಿನಗಳಿಂದ ತೊಂದರೆ ಉಂಟಾಗುತ್ತಿದೆ ಎಂದು ಪೊಲೀಸ ಅಧಿಕಾರಿಗಳು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry