ಕಾವೇರಿ: ದುರುದ್ದೇಶದ ತಗಾದೆ

7

ಕಾವೇರಿ: ದುರುದ್ದೇಶದ ತಗಾದೆ

Published:
Updated:

ಕೃಷ್ಣರಾಜಸಾಗರ ಅಚ್ಚುಕಟ್ಟು ಪ್ರದೇಶದ ರೈತರು ಕಾವೇರಿ ನದಿ ನೀರಿನ ತಮ್ಮ ಪಾಲನ್ನು ಬಳಸಿಕೊಳ್ಳುವ ವಿಷಯದಲ್ಲಿ ತಮಿಳುನಾಡು ಸರ್ಕಾರ ಪದೇ ಪದೇ ತಕರಾರು ತೆಗೆಯುತ್ತಿದೆ.ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಿ ರಾಜ್ಯ ಸರ್ಕಾರ ಮತ್ತು ರೈತರನ್ನು ಆತಂಕಕ್ಕೆ ಈಡುಮಾಡುತ್ತಿದೆ. ಈ ಬೆಳವಣಿಗೆ ಒಕ್ಕೂಟ ರಾಜ್ಯ ವ್ಯವಸ್ಥೆಗೆ ಮಾರಕ. ನೀರು ಹಂಚಿಕೆ ವಿಷಯದಲ್ಲಿ ನ್ಯಾಯಮಂಡಳಿಯ ತೀರ್ಪನ್ನು ಪಾಲಿಸುವ ವಿಷಯದಲ್ಲಿ ಗೊಂದಲ ಇರಬಾರದು.ಪದೇ ಪದೇ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವುದು, ಕೇಂದ್ರ ಸರ್ಕಾರದ ಬಳಿಗೆ  ಸರ್ವ ಪಕ್ಷಗಳ ನಿಯೋಗವನ್ನು ಒಯ್ದು ರಾಜಕೀಯ ಒತ್ತಡ ತರುವ ತಮಿಳುನಾಡು ಸರ್ಕಾರದ ಪ್ರಯತ್ನ ದುರುದ್ದೇಶದಿಂದ ಕೂಡಿದೆ.

 

     

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry