ಕಾವೇರಿ ನಾಲ್ಕನೇ ಘಟ್ಟ: ನೀರು ಪೂರೈಕೆಗೆ ಚಾಲನೆ

7

ಕಾವೇರಿ ನಾಲ್ಕನೇ ಘಟ್ಟ: ನೀರು ಪೂರೈಕೆಗೆ ಚಾಲನೆ

Published:
Updated:

ಬೆಂಗಳೂರು: ಕಾವೇರಿ ನಾಲ್ಕನೇ ಘಟ್ಟ ಎರಡನೇ ಹಂತದ ಪ್ರಾಯೋಗಿಕ ನೀರು ಪೂರೈಕೆಗೆ ಬುಧವಾರ ಜಲಮಂಡಳಿ ಚಾಲನೆ ನೀಡಿದೆ. ಇದರಿಂದ ಮುಂದಿನ ವಾರದಿಂದ ನಗರಕ್ಕೆ ಹೆಚ್ಚುವರಿ ನೀರು ಪೂರೈಕೆಯಾಗಲಿದೆ.ತಾತಗುಣಿಯಿಂದ ಜಂಬುಸವಾರಿ ದಿಣ್ಣೆಗೆ ಪ್ರಾಯೋಗಿಕವಾಗಿ ಹೊಸ ಪೈಪ್‌ಲೈನ್‌ಗಳಲ್ಲಿ ನೀರು ಪೂರೈಸಲಾಗುತ್ತಿದ್ದು, ನಗರದ ಪಶ್ಚಿಮ ಮತ್ತು ಪೂರ್ವ ವಿಭಾಗಗಳ ಸಂಗ್ರಹಾಗಾರಗಳಿಗೆ ನೀರು ಹರಿಸಲಾಗುತ್ತಿದೆ.`ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವುದನ್ನು ವಿರೋಧಿಸಿ ಮಂಡ್ಯ ಜಿಲ್ಲೆಯ ರೈತರು ಪ್ರತಿಭಟನೆ ನಡೆಸುತ್ತಿರುವುದರಿಂದ ನಗರದ ನೀರು ಪೂರೈಕೆಗೆ ತೊಂದರೆಯಾಗುವುದಿಲ್ಲ. ಬೆಂಗಳೂರಿನ ಜನರು ಪ್ರತಿಭಟನೆಗೆ ಬೆಂಬಲ ನೀಡುತ್ತಿಲ್ಲ ಎಂದು ಆಕ್ರೋಶಗೊಂಡ ರೈತರು ಮಂಗಳವಾರ ತೊರೆಕಾಡನಹಳ್ಳಿಯ ಪಂಪಿಂಗ್ ಹೌಸ್‌ಗೆ ಮುತ್ತಿಗೆ ಹಾಕಿ ಪಂಪ್‌ಗಳನ್ನು ಸುಮಾರು 30 ನಿಮಿಷಗಳ ಕಾಲ ಸ್ಥಗಿತಗೊಳಿಸಿದ್ದರು. ಆದರೆ, ಇದರಿಂದ ಹೆಚ್ಚಿನ ತೊಂದರೆಯಾಗಿಲ್ಲ~ ಎಂದು ಜಲಮಂಡಳಿ ಅಧಿಕಾರಿಗಳು ಹೇಳಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry