ಕಾವೇರಿ: ಬ್ರಿಟಿಷರ ಕಾಲದ ಒಪ್ಪಂದ ರದ್ದಾಗಲಿ

7

ಕಾವೇರಿ: ಬ್ರಿಟಿಷರ ಕಾಲದ ಒಪ್ಪಂದ ರದ್ದಾಗಲಿ

Published:
Updated:

ಧಾರವಾಡ: `ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡುವ ಸಂಬಂಧ ಬ್ರಿಟಿಷರು ಹಾಗೂ ಮೈಸೂರು ಮಹಾರಾಜರ ಮಧ್ಯೆ ಏರ್ಪಟ್ಟ ಹಳೆಯ ಒಪ್ಪಂದ ರದ್ದಾಗಬೇಕು. ವಾಸ್ತವ ಸ್ಥಿತಿಯ ಆಧಾರದ ಮೇಲೆ ನೂತನ ಒಪ್ಪಂದ ಏರ್ಪಡಬೇಕು~ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪಾಟೀಲ ಪುಟ್ಟಪ್ಪ ಮನವಿ ಮಾಡಿದರು.ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಹಳೆಯ ಒಪ್ಪಂದದ ಅನ್ವಯವೇ ನೀರು ಬಿಡಬೇಕು ಎಂದು ತಮಿಳುನಾಡು ಸರ್ಕಾರ ಒತ್ತಾಯಿಸುತ್ತಾ ಬಂದಿದೆ. ಆದರೆ ಸ್ವಾತಂತ್ರ್ಯಾನಂತರ ಕರ್ನಾಟಕ ಸಾಕಷ್ಟು ಬೆಳವಣಿಗೆ ಹೊಂದಿದೆ. ನಮ್ಮ ರಾಜ್ಯಕ್ಕೆ ಕಾವೇರಿ ನೀರು ಹೆಚ್ಚಿನ ಪ್ರಮಾಣದಲ್ಲಿ ಬೇಕಾಗುತ್ತದೆ~ ಎಂದು ಹೇಳಿರು.

`ನೀರು ಹಂಚಿಕೆ ಕುರಿತು ಪ್ರಾಧಿಕಾರದ ನಿರ್ಣಯ ಖಂಡಿಸಿ ವಿವಿಧ ಸಂಘಟನೆಗಳು ಇದೇ 6ರಂದು ನೀಡಿರುವ ಕರ್ನಾಟಕ ಬಂದ್‌ಗೆ ಕರ್ನಾಟಕ ವಿದ್ಯಾವರ್ಧಕ ಸಂಘವು ಸಂಪೂರ್ಣ ಬೆಂಬಲ ನೀಡಲಿದೆ~ ಎಂದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry