ಕಾವೇರಿ: ಮುತುವರ್ಜಿ ಕೊರತೆ

7

ಕಾವೇರಿ: ಮುತುವರ್ಜಿ ಕೊರತೆ

Published:
Updated:

ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುವ ಸರ್ವೋಚ್ಚ ನ್ಯಾಯಾಲಯದ ತೀರ್ಪಿಗೆ ಸಂಬಂಧಿಸಿದಂತೆ ಗಮನ ಸೆಳೆಯಬೇಕಾದ ಒಂದು ವಿಚಾರವೇನೆಂದರೆ ಪ್ರಸ್ತುತ ಸರ್ಕಾರದಂತೆ ಕರ್ನಾಟಕದ ಇದುವರೆಗಿನ ಯಾವುದೇ ಸರ್ಕಾರವು ನ್ಯಾಯಾಲಯಕ್ಕೆ ನೀಡುವ ವಿವರಣಾತ್ಮಕ ಅಂಕಿ ಅಂಶಗಳ ವಿಚಾರದಲ್ಲಿ ತಮಿಳುನಾಡು ಸರ್ಕಾರ ತೋರಿಸುತ್ತಾ ಬಂದಿರುವ ಮುತುವರ್ಜಿ ತೋರಿಸುತ್ತಿಲ್ಲ.ತಮಿಳುನಾಡು ನಿಖರವೆಂಬಂತೆ ಕಂಡುಬರುವ ಅಂಕಿಅಂಶಗಳನ್ನು ಪ್ರಸ್ತುತಪಡಿಸಿದರೆ ಕರ್ನಾಟಕವು `ಕೇವಲ ಮಳೆಯ ಕೊರತೆಯಿದೆ, ನಮಗೆ ನೀರಿಲ್ಲ' ಎಂದಿದೆಯೇ ಹೊರತು ನಿಖರ ಅಂಕಿಅಂಶವನ್ನು ನೀಡುತ್ತಾ ಬಂದಂತೆ ಕಾಣುತ್ತಿಲ್ಲ. ಇದರಲ್ಲಿ ಕೇವಲ ಸರ್ಕಾರ ಮಾತ್ರವಲ್ಲ ಅಧಿಕಾರಿ ವರ್ಗದ ನಿರ್ಲಕ್ಷ್ಯವೂ ತೋರುತ್ತಿದೆ. ರಾಜಕಾರಣಿ ಹಾಗೂ ಅಧಿಕಾರಿಗಳನ್ನು ಇದರ ಬಗ್ಗೆ ರೈತರು ಹಾಗೂ ಜನಸಾಮಾನ್ಯರು ಈಗಲಾದರೂ ಪ್ರಶ್ನಿಸಬೇಕಿದೆ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry