ಬುಧವಾರ, ಮೇ 19, 2021
24 °C

ಕಾವೇರಿ ವನಿತಾ ಸೇವಾಶ್ರಮಕ್ಕೆ ರೂ 30 ಸಾವಿರ ದೇಣಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೆಲಮಂಗಲ: `ಸಮಾಜದಿಂದ ಪಡೆದಿದ್ದನ್ನು ಸಮಾಜಕ್ಕೆ ಕೊಡಬೇಕು. ಬಡವರ ಹಾಗೂ ನಿರ್ಗತಿಕರ ಸೇವೆ ಮಾಡುವ ಮೂಲಕ ಭಗವಂತನ ಋಣ ತೀರಿಸಬೇಕು~ ಎಂದು ಹಿಮಾಲಯ ಡ್ರಗ್ ಕಂಪನಿಯ ಅಧಿಕಾರಿ ಭುವನೇಶ್ವರಿ ಅವರು ತಿಳಿಸಿದರು.ತಾಲ್ಲೂಕು ರೋಟರಿ ಕ್ಲಬ್ ಮತ್ತು ಸಮೀಪದ ಮಾಕಳಿಯ ಹಿಮಾಲಯ ಡ್ರಗ್ ಕಂಪನಿ, ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಹೆಸರಘಟ್ಟದ ಕಾವೇರಿ ವನಿತಾ ಸೇವಾಶ್ರಮಕ್ಕೆ 30 ಸಾವಿರ ರೂಪಾಯಿಗಳ ಚೆಕ್ ವಿತರಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ರೋಟರಿ ಕ್ಲಬ್‌ನ ವತಿಯಿಂದ ಸೇವಾಶ್ರಮದ ಮಕ್ಕಳಿಗೆ ಹೊದಿಕೆ, ಸ್ವೆಟರ್, ದಿಂಬುಗಳನ್ನು ವಿತರಿಸಲಾಯಿತು.

ಸೇವಾಶ್ರಮದ ಅಧ್ಯಕ್ಷೆ ಎಂ.ಶಾಂತಮ್ಮ, ಕಾರ್ಯದರ್ಶಿ ಕೆ.ಸರೋಜಮ್ಮ, ನಿರ್ದೇಶಕಿ ಮಂಜುಳಾ ರಂಗಪ್ಪ, ರೋಟರಿ ಕ್ಲಬ್ ಮತ್ತು ಹಿಮಾಲಯ ಡ್ರಗ್ ಕಂಪೆನಿಗೆ ಕೃತಜ್ಞತೆ ಸಲ್ಲಿಸಿದರು.ರೋಟರಿ ಕ್ಲಬ್‌ನ ರಾಜು, ರಂಗಪ್ಪ, ನಾಗರಾಜ್, ಪುಟ್ಟಸ್ವಾಮಿ, ಗಂಗೇಗೌಡ, ಹಿಮಾಲಯ ಕಂಪನಿಯ ಡಾ.ಪ್ರಿಯಾ, ಭವಾನಿ, ವಿಮಲಾ, ಜೆಸ್ಲಿನ್ ಡಿಸೋಜಾ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.