ಕಾವೇರಿ: ವಿಶೇಷ ಮೇಲ್ಮನವಿ

7

ಕಾವೇರಿ: ವಿಶೇಷ ಮೇಲ್ಮನವಿ

Published:
Updated:

ನವದೆಹಲಿ: ಸೆಪ್ಟೆಂಬರ್ 20ರಿಂದ ಅಕ್ಟೋಬರ್ 15ರ ವರೆಗೆ ನಿತ್ಯ 9,000 ಕ್ಯೂಸೆಕ್ ನೀರು ಹರಿಸಬೇಕೆಂಬ ನಿರ್ದೇಶನದ ಮರುಪರಿಶೀಲನೆಗೆ ನಿರಾಕರಿಸಿದ ಕಾವೇರಿ ನದಿ ಪ್ರಾಧಿಕಾರದ (ಸಿಆರ್‌ಎ) ತೀರ್ಮಾನದ ವಿರುದ್ಧ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಶನಿವಾರ ವಿಶೇಷ ಮೇಲ್ಮನವಿ ಸಲ್ಲಿಸಿದೆ.ಪ್ರಧಾನಿ ಅಧ್ಯಕ್ಷರಾಗಿರುವ ಈ  ಪ್ರಾಧಿಕಾರ ಸೆಪ್ಟೆಂಬರ್ 19ರಂದು ತಮಿಳುನಾಡಿಗೆ ನೀರು ಪೂರೈಸುವ ಸಂಬಂಧ ನಿರ್ದೇಶನ ನೀಡಿತ್ತು. ಇದನ್ನು ಪುನರ್ ಪರಿಶೀಲಿಸಬೇಕೆಂದು ಕೋರಿ ಕರ್ನಾಟಕ ಸೆಪ್ಟೆಂಬರ್ 20ರಂದು ಮೇಲ್ಮನವಿ ಸಲ್ಲಿಸಿತ್ತು. ಅಕ್ಟೋಬರ್ 8ರಂದು ಕಾವೇರಿ ಪ್ರಾಧಿಕಾರ ಕರ್ನಾಟಕದ ಅರ್ಜಿಯನ್ನು ತಿರಸ್ಕರಿಸಿದೆ. ಈ ಸಂಬಂಧ ಪ್ರಾಧಿಕಾರದ ಕಾರ್ಯದರ್ಶಿ ಡಿ.ವಿ. ಸಿಂಗ್ ಕರ್ನಾಟಕದ ಮುಖ್ಯ ಕಾರ್ಯದರ್ಶಿ ರಂಗನಾಥ ಅವರಿಗೆ  ಪತ್ರ ಬರೆದಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry