ಕಾವೇರಿ: ವೈಜ್ಞಾನಿಕ ಸೂತ್ರಕ್ಕೆ ರಾಜ್ಯ ಆಗ್ರಹ

7

ಕಾವೇರಿ: ವೈಜ್ಞಾನಿಕ ಸೂತ್ರಕ್ಕೆ ರಾಜ್ಯ ಆಗ್ರಹ

Published:
Updated:

ನವದೆಹಲಿ: ಮಳೆ ಅಭಾವವಾದಾಗ ಕಾವೇರಿ ನೀರು ಹಂಚಿಕೊಳ್ಳಲು ವೈಜ್ಞಾನಿಕ ಸೂತ್ರವೊಂದನ್ನು ರೂಪಿಸುವಂತೆ ಕರ್ನಾಟಕ ಬುಧವಾರ ಕೇಂದ್ರ ಸರ್ಕಾರ ಹಾಗೂ ಕಾವೇರಿ ಕೊಳ್ಳದ ರಾಜ್ಯಗಳಿಗೆ ಆಗ್ರಹ ಮಾಡಿದೆ.ವಸ್ತುಸ್ಥಿತಿಯನ್ನು ವೈಜ್ಞಾನಿಕ ಆಧಾರದಲ್ಲಿ ಅಧ್ಯಯನ ಮಾಡಬೇಕು ಹಾಗೂ ಸಂಕಷ್ಟ ಸ್ಥಿತಿಯನ್ನು ಹಿರಿಯ ನೀರಾವರಿ ಹಾಗೂ ಜಲತಜ್ಞರು ನಿರ್ಧರಿಸಬೇಕು ಎಂದು ಕರ್ನಾಟಕ ಹೇಳಿಕೆಯಲ್ಲಿ ತಿಳಿಸಿದೆ.ಕಾವೇರಿ ನೀರಿನ ಹಂಚಿಕೆ ವಿಚಾರದಲ್ಲಿ ನದಿ ಕೊಳ್ಳದ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿ ನಡುವೆ ಹಲವು ವರ್ಷಗಳಿಂದ ವಿವಾದ ಮುಂದುವರಿದಿದ್ದರೂ ಕೇಂದ್ರ ಜಲ ಸಂಪನ್ಮೂಲ ಸಚಿವಾಲಯ ಸಂಕಷ್ಟ ಸ್ಥಿತಿಯಲ್ಲಿ ನೀರು ಹಂಚಿಕೊಳ್ಳುವ ಸೂತ್ರವನ್ನು ಇನ್ನೂ ಅಂತಿಮಗೊಳಿಸಿಲ್ಲ.ಮಳೆ ವಿವರ, ಹವಾಮಾನ ಮುನ್ಸೂಚನೆ, ನದಿಯಲ್ಲಿ ಹರಿಯುವ ನೀರು, ಕೃಷಿಗೆ ಬೇಕಾದ ನೀರು ಎಲ್ಲವನ್ನೂ ಗಣನೆಗೆ ತೆಗೆದುಕೊಂಡು ಸಂಕಷ್ಟ ಸ್ಥಿತಿಯನ್ನು ನಿರ್ಧರಿಸಬೇಕು ಎಂದೂ ರಾಜ್ಯ ಹೇಳಿದೆ.    

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry