ಶನಿವಾರ, ಮೇ 15, 2021
25 °C

ಕಾವೇರಿ ಸಮಿತಿ ಸೂಚನೆಗೆ ತಕರಾರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕಾವೇರಿ ನ್ಯಾಯಮಂಡಳಿಯ ಶಿಫಾರಸನ್ನು ಪಾಲಿಸುವಂತೆ ಕಾವೇರಿ ಉಸ್ತುವಾರಿ ಸಮಿತಿಯ ನೀಡಿದ್ದ ನಿರ್ದೇಶನಕ್ಕೆ ಕರ್ನಾಟಕ ಮಂಗಳವಾರ ಆಕ್ಷೇಪ ಸಲ್ಲಿಸಿದೆ.ನ್ಯಾಯಮಂಡಳಿಯ ಐತೀರ್ಪನ್ನು ಪ್ರಶ್ನಿಸಿ ಹಲವಾರು ದಾವೆಗಳು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇರುವುದರಿಂದ ಶಿಫಾರಸನ್ನು ಪಾಲಿಸುವಂತೆ ಉಸ್ತುವಾರಿ ಸಮಿತಿಯ ನೀಡಿರುವ ನಿರ್ದೇಶನವು ನ್ಯಾಯ ಸಮ್ಮತವಲ್ಲ ಎಂದು ಕರ್ನಾಟಕ ಹೇಳಿದೆ.ಜೂನ್ 1ರಂದು ನಡೆದ ಕಾವೇರಿ ಉಸ್ತುವಾರಿ ಸಮಿತಿಯ ಸಭೆಯಲ್ಲಿ ಈ ನಿರ್ದೇಶನ ನೀಡಲಾಗಿತ್ತು. ಇದಕ್ಕೆ ಲಿಖಿತ ಪ್ರತಿಕ್ರಿಯೆ ದಾಖಲಿಸಲು ಕರ್ನಾಟಕ ಕಾಲಾವಕಾಶ ಕೋರಿತು.ಕೇಂದ್ರ ಜಲಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿ ಉಸ್ತುವಾರಿ ಸಮಿತಿಯ ಅಧ್ಯಕ್ಷರು. ಹಾಗೆಯೇ ಕಾವೇರಿ ಕೊಳ್ಳದ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿಯ ಮುಖ್ಯ ಕಾರ್ಯದರ್ಶಿಗಳು ಇದರ ಸದಸ್ಯರು.ಆದರೆ, ಜಲಸಂಪನ್ಮೂಲ ಸಚಿವಾಲಯವು ಹೊರಡಿಸಿರುವ ಆದೇಶವು ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧವಾಗಿರುವುದರ ಜೊತೆಗೆ ಇನ್ನಿಬ್ಬರು ಅಧಿಕಾರಿಗಳನ್ನು ಉಸ್ತುವಾರಿ ಸಮಿತಿಗೆ ಸೇರಿಸಿಕೊಂಡಿದೆ ಎಂದು ಆಕ್ಷೇಪಣೆಯಲ್ಲಿ ಉಲ್ಲೇಖಿಸಲಾಗಿದೆ. ಈ ಮಧ್ಯೆ, ಕಾವೇರಿ ಉಸ್ತುವಾರಿ ಸಮಿತಿಯ ಎರಡನೇ ಸಭೆಯು ಬುಧವಾರ (ಜೂನ್ 12) ನಡೆಯಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.