ಶನಿವಾರ, ಏಪ್ರಿಲ್ 17, 2021
32 °C

ಕಾವೇರುತ್ತಿರುವ ಭಾರತ-ಐರ್ಲೆಂಡ್ ಪಂದ್ಯ; ಕ್ರಿಕೆಟ್ ಪ್ರೇಮಿಗಳ ಭಾರಿ ಆಸಕ್ತಿ....

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸೋಲ್ಡ್ ಔಟ್! ಇದು ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಭಾರತ-ಐರ್ಲೆಂಡ್ ನಡುವಿನ ಪಂದ್ಯಕ್ಕೆ ಟಿಕೆಟ್ ಖರೀದಿಸಲು ಪರದಾಡುತ್ತಿರುವ ಅಭಿಮಾನಿಗಳಿಗೆ ಸಿಗುತ್ತಿರುವ ಉತ್ತರ.‘ಭಾನುವಾರ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ‘ಬಿ’ ಗುಂಪಿನ ಈ ಪಂದ್ಯದ ಟಿಕೆಟ್‌ಗಳು ಪೂರ್ಣ ಮಾರಾಟವಾಗಿವೆ’ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಕಾರ್ಯದರ್ಶಿ ಜಾವಗಲ್ ಶ್ರೀನಾಥ್ ಗುರುವಾರ ಅಧಿಕೃತವಾಗಿ ತಿಳಿಸಿದ್ದಾರೆ.

ಬುಧವಾರ ರಾತ್ರಿ ಇಂಗ್ಲೆಂಡ್ ವಿರುದ್ಧ ಐರ್ಲೆಂಡ್ ತಂಡ ಗೆದ್ದ ಪಂದ್ಯದ ರೋಚಕ ಹೋರಾಟವನ್ನು ಟಿವಿಯಲ್ಲಿ ವೀಕ್ಷಿಸಿದ ಹೆಚ್ಚಿನ ಅಭಿಮಾನಿಗಳು ಭಾರತ-ಐರ್ಲೆಂಡ್ ಪಂದ್ಯದ ಟಿಕೆಟ್‌ಗಾಗಿ ಮುಗಿಬಿದ್ದಿದ್ದಾರೆ. ಆದರೆ ಟಿಕೆಟ್ ಮಾರಾಟವನ್ನು ಫೆಬ್ರುವರಿ 28ಕ್ಕೆ ನಿಲ್ಲಿಸಲಾಗಿದೆ. ಕಾರಣ ಅಷ್ಟರಲ್ಲಿ ಎಲ್ಲಾ ಟಿಕೆಟ್‌ಗಳು ಮಾರಾಟವಾಗಿವೆಯಂತೆ. ಶ್ರೀನಾಥ್ ಹೇಳುವ ಪ್ರಕಾರ ಫೆ.18ಕ್ಕೆ ಮಾರಾಟ ಶುರು ಮಾಡಿದ್ದರಂತೆ. ವಿಪರ್ಯಾಸವೆಂದರೆ ಹೆಚ್ಚಿನ ಪ್ರೇಕ್ಷಕರಿಗೆ ಎಲ್ಲಿ ಟಿಕೆಟ್ ಮಾರಾಟವಾಗುತ್ತಿದೆ ಎಂಬುದರ ಅರಿವೇ ಇಲ್ಲ. ಅದನ್ನು ಕೆಎಸ್‌ಸಿಎ ಕೂಡ ಸ್ಪಷ್ಟವಾಗಿ ತಿಳಿಸಿರಲಿಲ್ಲ.

ಟಿಕೆಟ್‌ಗಳನ್ನು ಯಾವ ರೀತಿ ಮಾರಾಟ ಮಾಡಲಾಗಿದೆ ಎಂಬುದನ್ನು ಮಾಜಿ ವೇಗಿ ಶ್ರೀನಾಥ್ ಚಾರ್ಟ್ ಮೂಲಕ ತೋರಿಸಿದರು. ‘ಸಾರ್ವಜನಿಕರಿಗೆ ಬಾಕ್ಸ್-ಆಫೀಸ್ ಮೂಲಕ ಶೇಕಡಾ 31ರಷ್ಟು ಟಿಕೆಟ್ ಮಾರಾಟ ಮಾಡಲಾಗಿದೆ. ಶೇ.21ರಷ್ಟು ಟಿಕೆಟ್‌ಗಳು ಆನ್‌ಲೈನ್ (ಚ್ಢಟಟ್ಞಜ.್ಚಟಞ) ಮೂಲಕ ಖಾಲಿಯಾಗಿವೆ.

 

ಕ್ಲಬ್‌ಗಳಿಗೆ ಶೇ.10ರಷ್ಟು ಟಿಕೆಟ್ ನೀಡಲಾಗಿದೆ. ಶೇ.14ರಷ್ಟು ಟಿಕೆಟ್‌ಗಳು ಕಾರ್ಪೊರೇಟ್ ಪಾಲಾಗಿವೆ. ಶೇ.4ರಷ್ಟು ಟಿಕೆಟ್‌ಗಳನ್ನು (ಕಾಂಪ್ಲಿಮೆಂಟರಿ) ಐಸಿಸಿಗೆ ನೀಡಲಾಗಿದೆ. ಶೇ,13ರಷ್ಟು ಟಿಕೆಟ್‌ಗಳನ್ನು ಕೆಎಸ್‌ಸಿಎ ಹಾಗೂ ಬಿಸಿಸಿಐಗೆ ಹಂಚಲಾಗಿದೆ ಮತ್ತು ಶೇ.1ರಷ್ಟು ಟಿಕೆಟ್ ಇತರ ರಾಜ್ಯಗಳ ಕ್ರಿಕೆಟ್ ಸಂಸ್ಥೆಗಳ ಪಾಲಾಗಿವೆ’ ಎಂದು ವಿವರಿಸಿದರು. 

‘ಇಂಗ್ಲೆಂಡ್ ಹಾಗೂ ಭಾರತ ನಡುವೆ ಕಳೆದ ಭಾನುವಾರ ನಡೆದ ಪಂದ್ಯಕ್ಕೆ 37516 ಮಂದಿ ಆಗಮಿಸಿದ್ದರು. ಆದರೆ ಗ್ಯಾಲರಿಯಲ್ಲಿನ ಕುರ್ಚಿಗಳನ್ನು ತೆಗೆದು ಮುಂಬರುವ ಪಂದ್ಯಕ್ಕೆ ಆ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. 39221 ಮಂದಿಗೆ ವ್ಯವಸ್ಥೆ ಮಾಡಲಾಗಿದೆ’ ಎಂದು ಅವರು ತಿಳಿಸಿದರು.‘ಈ ಪಂದ್ಯಕ್ಕೆ ಆಗಮಿಸುವ ಪ್ರೇಕ್ಷಕರಿಗೆ ಉತ್ತಮ ವ್ಯವಸ್ಥೆ ಕಲ್ಪಿಸಲಾಗಿದೆ. ಕಳೆದ ಪಂದ್ಯದಲ್ಲಿ ಎಚ್ ಸ್ಟ್ಯಾಂಡ್‌ನಲ್ಲಿ ಆಹಾರ ಹಾಗೂ ನೀರಿನ ಸಮಸ್ಯೆ ಉದ್ಭವವಾಗಿತ್ತು. ಈ ಬಾರಿ ಆ ರೀತಿ ಆಗದಂತೆ ನೋಡಿಕೊಳ್ಳುತ್ತೇವೆ. ಆದರೆ ಪಂದ್ಯದ ದಿನ ಅಭಿಮಾನಿಗಳು ಆದಷ್ಟು ಬೇಗನೇ ಕ್ರೀಡಾಂಗಣಕ್ಕೆ ಬರಬೇಕು’ ಎಂದು ಶ್ರೀನಾಥ್ ಕೋರಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.