ಶುಕ್ರವಾರ, ಮೇ 14, 2021
31 °C

ಕಾವ್ಯಕ್ಕೆ ಯಾವುದೇ ಚೌಕಟ್ಟು ಬೇಕಿಲ್ಲ : ಡುಂಡಿರಾಜ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸನಗರ: ಸಾಹಿತ್ಯ ಬರೆಯುವ ಕವಿ ಎಂದಿಗೂ ಸರ್ವ ಸ್ವತಂತ್ರ. ಅವನಿಗೆ ಯಾವುದೇ ಕಟ್ಟು ಪಡು ಇರಬಾರದು. ಹಾಗೆಯೇ ಕಾವ್ಯಕ್ಕೂ ಯಾವುದೇ ಚೌಕಟ್ಟು ಬೇಕಾಗಿಲ್ಲ ಎಂದು ಹಾಸ್ಯಕವಿ ಡುಂಡಿರಾಜ್ ಅಭಿಪ್ರಾಯಪಟ್ಟರು. ಪಟ್ಟಣದ ವಿದ್ಯಾಸಂಘ ರಂಗಮಂದಿರದ ಶರಾವತಿ ವೇದಿಕೆಯಲ್ಲಿ ನಡೆದ ಹೊಸ ನಗರ ತಾಲೂಕು ಎರಡನೇ ಸಾಹಿತ್ಯ ಸಮ್ಮೇಳನದಲ್ಲಿ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.ಕಾವ್ಯವನ್ನು ಕವಿ ಕಷ್ಟಪಟ್ಟು ಬರೆಯುತ್ತಾನೆ. ಕೇವಲ ವಿದ್ವದ್ಮಣಿಗಳಿಗೆ ಮಾತ್ರ ಸೀಮಿತವಾಗುವ ಕಬ್ಬಿಣದ ಕಡಲೆ ಆಗಬಾರದು.  ಓದುಗನಿಗೆ ಸಾಹಿತ್ಯ ಸುಲಭದಲ್ಲಿ ಅರ್ಥವಾಗಬೇಕು. ಆಗ ಮಾತ್ರ ಕವಿಗೂ ಯಶಸ್ಸು ದೊರಕಬಲ್ಲದು ಎಂದರು.ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ರಾಜಕಾರಣಿ ಮಾಜಿ ಶಾಸಕ ಬಿ.ಸ್ವಾಮಿರಾವ್, ಅನಾಥ ಆಶ್ರಮದ ಸಂಚಾಲಕ ಪ್ರಭಾಕರ ಬೆಳ್ಳಿಸರ, ಶರಣ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಹೊಸಕೋಟೆ ಹಾಲಪ್ಪ ಗೌಡ, ಗ್ರಂಥಪಾಲಕ ಅಶೋಕ ಗುಳೇದ್, ಸಮಾಜ ಸೇವಕಿಯರಾದ ಪದ್ಮಮ್ಮ, ನಾಗರತ್ನಾ ನಾಗರಾಜ್ ಇವರನ್ನು ಹಾಗೂ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ಸಮ್ಮೇಳನದ ಸರ್ವಾಧ್ಯಕ್ಷ ಡಾ.ಎಸ್.ಪಿ.ಪದ್ಮಪ್ರಸಾದ್, ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಮಂಜುನಾಥ್, ಪ್ರೊ.ಮಾರ್ಷಲ್ ಶರಾಂ, ಕಸಾಪ ಅಧ್ಯಕ್ಷ ಕೆಸವಿನಮನೆ ರತ್ನಾಕರ್ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.