ಸೋಮವಾರ, ಮೇ 17, 2021
27 °C

ಕಾವ್ಯದಲ್ಲಿ ಪ್ರಯೋಗಶೀಲತೆ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: `ಕಾವ್ಯ ಸಂಚಲನವಿಲ್ಲದಂತೆ ಆಗಿದೆ. ಅದ ಕ್ಕಾಗಿ ಕಾವ್ಯ ಲೋಕಕ್ಕೆ ಪ್ರಯೋಗಶೀಲ ಮನಸ್ಸುಗಳು ಬರಬೇಕಿದೆ~ ಎಂದು ಹಿರಿಯ ಕವಿ ಎಲ್.ಎಸ್. ಶಾಸ್ತ್ರಿ ಅಭಿಪ್ರಾಯಪಟ್ಟರು.ಜನಮನ ವಿಕಾಸ ವೇದಿಕೆ ಹಾಗೂ ನಗರ ಕೇಂದ್ರ ಗ್ರಂಥಾಲಯಗಳ ಆಶ್ರಯದಲ್ಲಿ ಇತ್ತೀಚೆಗೆ ಏರ್ಪಡಿಸ ಲಾಗಿದ್ದ `ಮೇಘ ಮೇದಿನಿ~ ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.`ಕಾವ್ಯ ಕಟ್ಟುವುದು ಒಂದು ಕಲೆ. ನಮಗೆ ಕಾವ್ಯ ರಚ ನೆಯ ಶಕ್ತಿ ಇದೆಯೋ, ಇಲ್ಲವೋ ಎನ್ನುವುದು ಅರಿತು ಕಾವ್ಯ ಬರೆಯಬೇಕು ಎಂದು ಯುವ ಕವಿಗಳಿಗೆ~ ಅವರು ಸಲಹೆ ನೀಡಿದರು.ಅತಿಥಿಯಾಗಿ ಆಗಮಿಸಿದ್ದ ಪ್ರೊ.ಎಂ.ಎಸ್. ಇಂಚಲ ಮಾತನಾಡಿ, ಭಾವಗೀತೆಗಳಲ್ಲಿ ಸ್ವಚ್ಛತೆ ಹಾಗೂ ಸಂಕ್ಷಿ ಪ್ತತೆಗಳು ಮುಖ್ಯವಾಗಿರಬೇಕು ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಬಸವರಾಜ ಜಗಜಂಪಿ ಮಾತನಾಡಿ, ಅಧ್ಯಯನ ದಿಂದ ಮಾತ್ರ ಉತ್ತಮ ಕಾವ್ಯ ರಚನೆ ಸಾಧ್ಯ. ಕೆಲ ಹೊಸ ಕವಿಗಳಲ್ಲಿಯೂ ಕಾವ್ಯದ ಮಿಂಚು ಕಾಣಿಸುತ್ತಿ ರುವುದು ಒಳ್ಳೆಯ ಲಕ್ಷಣ ಎಂದರು.ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಅಧಿಕಾರಿ ಶಶಿಧರ ಭೈರನಟ್ಟಿ ಹಾಜರಿದ್ದರು. ಆಶಾ ಯಮಕನಮರಡಿ, ಸುನಂದಾ ಮುಳೆ ಪ್ರಾರ್ಥಿಸಿದರು. ವೇದಿಕೆ ಅಧ್ಯಕ್ಷ ಬಿ. ನಿಂಗರಾಜ ಸ್ವಾಗತಿಸಿದರು. ರವಿ ಶಾಸ್ತ್ರಿ ನಿರೂಪಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.