ಭಾನುವಾರ, ಜನವರಿ 26, 2020
22 °C

ಕಾವ್ಯದಿಂದ ಸಂಸ್ಕಾರ: ಸಾಹಿತಿ ವಿ.ಜೆ.ನಾಯಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ಕಾವ್ಯ ವ್ಯಾಖ್ಯಕ್ಕೆ ಇರು ವಂತಹುದಲ್ಲ. ಕಾವ್ಯದ ಮಾತು ಮೌನ. ಭಾಷೆಯಲ್ಲಿ ಮುಚ್ಚಿಕೊಂಡಿ ರುವಂತಹ ಮಾತು ಎಂದು ಹಿರಿಯ ಸಾಹಿತಿ ವಿ.ಜೆ. ನಾಯಕ ಅಭಿಪ್ರಾಯ ಪಟ್ಟರು.ಹೊಸ ವರ್ಷದಾರಂಭದ ಹಿನ್ನೆಲೆ ಯಲ್ಲಿ  `ಚಿಂತನ~ ಉತ್ತರ ಕನ್ನಡ ಇಲ್ಲಿಯ ಯುದ್ಧನೌಕೆ ಸಂಗ್ರಹಾಲ ಯದ ಬಳಿ ಭಾನುವಾರ ಹಮ್ಮಿಕೊಂಡ ಕವಿ, ಕಾವ್ಯ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಾವ್ಯ ಕವಿ ಮತ್ತು ಕಾವ್ಯ ಕೇಳುಗರ ಮನಸ್ಸನ್ನು ಸಂಸ್ಕಾರಗೊಳಿಸುತ್ತದೆ ಎಂದರು.ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಹಿರಿಯ ಸಾಹಿತಿ ವಿಷ್ಣು ನಾಯ್ಕ ಮಾತ ನಾಡಿ, ಸೃಷ್ಟಿ ಪ್ರತಿದಿನವೂ ಹೊಚ್ಚ ಹೊಸದಾಗಿ ಅವತರಿಸುತ್ತದೆ. ಹೊಸ ತನ ಕಂಡುಕೊಳ್ಳುತ್ತ ಬದುಕಿನ ಮಗ್ಗ ಲುಗಳ ಬಗ್ಗೆ ಚಿಂತಿಸೋಣ. ಅಣ್ಣಾ ಹಜಾರೆಯಂತವರು ಭ್ರಷ್ಟಾ ಚಾರ ತೊಲಗಿಸಲು ಉಪವಾಸ ಸತ್ಯಾಗ್ರಹ ನಡೆದಲು ದಿಟ್ಟ ನಿರ್ಧಾರ ಕೈಗೊಂಡಿ ರುವುದರ ಹಿಂದೆ ಯುವ ಜನಾಂಗದ ಬೆಂಬಲವಿದೆ. ಅವರನ್ನು ಬೆಂಬಲಿ ಸೋಣ ಎಂದರು.ಮಾಜಿ ಸಚಿವರಾದ ಪ್ರಭಾಕರ ರಾಣೆ ಮಾತನಾಡಿ, ಈ ಗೋಷ್ಠಿಯ ಮೂಲಕ ಹೊಸ ವಿಚಾರಗಳು ವ್ಯಕ್ತ ವಾಗಿ ಅದು ಎಲ್ಲರಿಗೆ ಮುಟ್ಟುವಂತಾ ಗಲಿ, ನಾವು ಪ್ರಾಮಾಣಿಕತೆ ಬೆಳೆಸಿ ಕೊಳ್ಳುತ್ತ ಜೀವನವನ್ನು ಸಹ್ಯವಾಗಿಸೋಣ ಎಂದರು.ಚಿಂತನದ ಸಂಚಾಲಕ ಪ್ರೊ. ವಿಠ್ಠಲ ಭಂಡಾರಿ ಪ್ರಾಸ್ತಾವಿಕ ಮಾತನಾಡಿ, ಹಲವು ಒಳಿತು-ಕೆಡಕುಗಳೊಂದಿಗೆ ಹಳೇ ವರ್ಷದ ಪಯಣ ಮುಗಿದಿದೆ. ವರ್ಷಕ್ಕೊಮ್ಮೆ  ನಾವು ಭವಿಷ್ಯದ ಬಗ್ಗೆ ಚಿಂತಿಸೋಣ ಎಂದರು.ಕವಿ ಮೋಹನ ಹಬ್ಬು, ಫಾಲ್ಗುಣ ಗೌಡ ಅಚವೆ, ಶ್ರೀಧರ ನಾಯಕ, ಜೆ. ಪ್ರೇಮಾನಂದ, ಎನ್.ವಿ. ನಾಯಕ ಭಾವಿಕೇರಿ, ನಾಗರಾಜ ಹರಪನಹಳ್ಳಿ, ಜಿ.ಡಿ. ಪಾಲೇಕರ, ನಾಗೇಶ  ಅಣ್ವೇ ಕರ್, ಜಗನ್ನಾಥ ಮೊಗೇರ್, ದೇವಿ ದಾಸ ನಾಯ್ಕ, ಕೃಷ್ಣಾ ಬಾಂದೇಕರ, ರೇಣುಕಾ ರಮಾನಂದ ಗಾಂವಕರ್, ಶ್ರೀಪಾದ ಭಟ್ಟ, ಮಾಧವಿ ಭಂಡಾರಿ, ದಿವ್ಯಾ ಕಾರವಾರ ಕವನ ವಾಚಿಸಿದರು.ಕಿರಣ ಭಟ್ಟ ಸ್ವಾಗತಿಸಿದರು. ಯಮುನಾ ಗಾಂವ್ಕಾರ ಕಾರ್ಯಕ್ರಮ ನಿರೂಪಿಸಿದರು. ಮಂಥನ ವೇದಿಕೆಯ ರಮೇಶ ಭಂಡಾರಿ ವಂದಿಸಿದರು.

ಪ್ರತಿಕ್ರಿಯಿಸಿ (+)