ಮಂಗಳವಾರ, ನವೆಂಬರ್ 19, 2019
29 °C

ಕಾವ್ಯಾನಂದ ಪುರಸ್ಕಾರಕ್ಕೆ ಕೃತಿ ಆಹ್ವಾನ

Published:
Updated:

ಬೆಂಗಳೂರು: ಕನ್ನಡ ಸಾಹಿತ್ಯ ಸಂವರ್ಧಕ ಟ್ರಸ್ಟ್‌ನ 2012ನೇ ಸಾಲಿನ ಕಾವ್ಯಾನಂದ ಪುರಸ್ಕಾರಕ್ಕೆ ಕೃತಿಗಳನ್ನು ಆಹ್ವಾನಿಸಲಾಗಿದೆ. `ವಚನ ಸಾಹಿತ್ಯ ವಿಮರ್ಶೆ - ವೈಚಾರಿಕ ದೃಷ್ಟಿ' ವಿಷಯದ ಕುರಿತು 2012ರಲ್ಲಿ ಪ್ರಕಟವಾದ ಕೃತಿಗಳನ್ನು ಕಳುಹಿಸಬಹುದು.ಪ್ರಶಸ್ತಿಯು ರೂ. 25,000  ನಗದು ಮತ್ತು ಸ್ಮರಣಿಕೆ  ಒಳಗೊಂಡಿದೆ. ಆಸಕ್ತರು ಕೃತಿಯ ನಾಲ್ಕು ಪ್ರತಿಗಳನ್ನು `ಕನ್ನಡ ಸಾಹಿತ್ಯ ಸಂವರ್ಧಕ ಟ್ರಸ್ಟ್, ಶ್ರೀಗಿರಿ, 4/5 ಎ, ಅಲಿ ಅಸ್ಕರ್ ರಸ್ತೆ, ಬೆಂಗಳೂರು - 560 052' ವಿಳಾಸಕ್ಕೆ ಜುಲೈ 31ರೊಳಗೆ ಕಳುಹಿಸಬೇಕು ಎಂದು ಟ್ರಸ್ಟ್‌ನ ಅಧ್ಯಕ್ಷೆ ವಿಜಯಾ ನಂದೀಶ್ವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಮಾಹಿತಿಗೆ 080-2226 4361 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

ಪ್ರತಿಕ್ರಿಯಿಸಿ (+)