ಶುಕ್ರವಾರ, ನವೆಂಬರ್ 22, 2019
22 °C

ಕಾವ್ಯಾಸಕ್ತರ ತಣಿಸಿದ ಬಹುಭಾಷಾ ಕವಿಗೋಷ್ಠಿ

Published:
Updated:

ಬೆಂಗಳೂರು: ನಯನ ಸಭಾಂಗಣದಲ್ಲಿ ಶನಿವಾರ ಕನ್ನಡ ಕವಿತೆಗಳ ಜತೆಗೆ ತಮಿಳು, ಮಲಯಾಳಂ, ತೆಲುಗು, ಹಿಂದಿ, ಉರ್ದು ಹಾಗೂ ತುಳು ಕವಿತೆಗಳು ಸಾಹಿತ್ಯ ಪ್ರೇಮಿಗಳನ್ನು ಮುದಗೊಳಿಸಿದವು.ಬುದ್ಧ, ಬಸವ, ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ದಲ್ಲಿ ಬಹುಭಾಷಾ ಕವಿತೆಗಳನ್ನು ಒಂದೇ ವೇದಿಕೆಯಿಂದ ಕೇಳುವ ಅಪರೂಪದ ಅವಕಾಶ ಸಭಿಕರಿಗೆ ಒದಗಿತ್ತು.ಕನ್ನಡ ಕವಿಗಳಾದ ಪ್ರೊ.ಎಲ್.ಎನ್.ಮುಕುಂದರಾಜ್, ಡಾ.ಕಾ.ವೆಂ. ಶ್ರೀನಿವಾಸಮೂರ್ತಿ, ಡಾ.ಕೂಡ್ಲೂರು ವೆಂಕಟಪ್ಪ, ಹಿಂದಿ ಕವಿ ಡಾ.ಪ್ರಭಾಶಂಕರ ಪ್ರೇಮಿ, ತಮಿಳು ಕವಯರ್ತಿ ಡಾ.ತಮಿಳ್ ಸೆಲ್ವಿ, ಮಲಯಾಳಂ ಕವಿ ತೇರಳಿ ಎನ್. ಶೇಖರ್, ತುಳು ಕವಿ ಉದಯ ಧರ್ಮಸ್ಥಳ, ತೆಲುಗು ಕವಿಗಳಾದ ಪ್ರೊ.ಜಿ. ನಾಗರಾಜರಾವ್ ಮತ್ತು ರೋಹಿಣಿ ಸತ್ಯ ಕವನಗಳನ್ನು ವಾಚಿಸಿದರು.ಕವಿಗೋಷ್ಠಿಯ ನಂತರ ಮಾತನಾಡಿದ ಕವಿ ಜರಗನಹಳ್ಳಿ ಶಿವಶಂಕರ್, `ಯುವ ಜನರು ಸೂಕ್ಷ್ಮ ಸಂವೇದನೆಯಿಂದ ಕಾವ್ಯ ರಚನೆ ಮಾಡುತ್ತಿದ್ದಾರೆ. ಬ್ಲಾಗ್‌ಗಳಲ್ಲಿ ಬರೆಯುವ ಯುವ ಕವಿಗಳು ತಮ್ಮ ರಚನೆಗಳ ಮೂಲಕ ಹೊಸ ಸಾಧ್ಯತೆ ಗಳನ್ನು ತೋರುತ್ತಿದ್ದಾರೆ' ಎಂದರು.ಸಾಮಾಜಿಕ ಕಾರ್ಯಕರ್ತ ಅಲಿ ಬಾಬಾ ಅವರಿಗೆ `ಲೋಹಿಯಾ ಸಾಮಾ ಜಿಕ ಪ್ರಶಸ್ತಿ' ಮತ್ತು ಗಾಯಕಿ ಆಶಾ ಬದ್ರಿ ನಾಥ್ ಅವರಿಗೆ `ಮಾತಾ ಶಾರದಾದೇವಿ ಪ್ರಶಸ್ತಿ' ಪ್ರದಾನ ಮಾಡಲಾಯಿತು. 2011-12ನೇ ಸಾಲಿನ ಹೆಬ್ಬಗೋಡಿ ಗೋಪಾಲ್ ದತ್ತಿ ಪುಸ್ತಕ ಬಹುಮಾನ ವಿಜೇತರಿಗೆ ಪ್ರಶಸ್ತಿ ವಿತರಿಸಲಾಯಿತು.ಟ್ರಸ್ಟ್ ಅಧ್ಯಕ್ಷ ಎಸ್.ರಾಮಲಿಂಗೇಶ್ವರ ಅವರ `ತಾಯಿನಾಡು' ಮತ್ತು ಅವರ ಅಭಿನಂದನಾ ಗ್ರಂಥ `ಸೃಜನಶೀಲ' ಪುಸ್ತಕಗಳನ್ನು ಪತ್ರಕರ್ತ ಪಿ.ತ್ಯಾಗರಾಜ್ ಬಿಡುಗಡೆಗೊಳಿಸಿದರು.ಕರ್ನಾಟಕ ನಾಟಕ ಅಕಾಡೆಮಿ ರಿಜಿಸ್ಟ್ರಾರ್ ಟಿ.ಜಿ.ನರಸಿಂಹಮೂರ್ತಿ, ಕರ್ನಾಟಕ ಉರ್ದು ಅಕಾಡೆಮಿ ರಿಜಿಸ್ಟ್ರಾರ್ ಎಸ್.ಮಿರ್ಜಾ ಅಜ್ಮತ್ ಉಲ್ಲಾ ಮತ್ತಿತರರು ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)