ಶುಕ್ರವಾರ, ಮೇ 20, 2022
26 °C

ಕಾವ್ಯ ಓದುವ ಕಮ್ಮಟಕ್ಕೆ ಆಹ್ವಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಭೀಮನಕೋಣೆಯ ಕವಿ-ಕಾವ್ಯ ಟ್ರಸ್ಟ್, ಕೇಂದ್ರ ಸಾಹಿತ್ಯ ಅಕಾಡೆಮಿ ಸಂಯುಕ್ತವಾಗಿ ಏಪ್ರಿಲ್ 23 ಮತ್ತು 24ರಂದು ಸಾಗರ ತಾಲ್ಲೂಕಿನ ಭೀಮನಕೋಣೆಯಲ್ಲಿ ಎರಡು ದಿನಗಳ ಕಾವ್ಯ ಕಮ್ಮಟ ಹಮ್ಮಿಕೊಂಡಿವೆ. ಕಮ್ಮಟಕ್ಕೆ ಆಸಕ್ತ ಯುವ ಲೇಖಕರನ್ನು ಆಹ್ವಾನಿಸಲಾಗಿದೆ. ರಂಗನಿರ್ದೇಶಕ ಪ್ರಸನ್ನ, ಕವಯತ್ರಿ ಎಚ್.ಎಲ್. ಪುಷ್ಪಾ ಕಮ್ಮಟದ ಸಂಚಾಲಕರಾಗಿರುತ್ತಾರೆ.ರಾಜ್ಯ ಹಾಗೂ ಹೊರರಾಜ್ಯದ ಕವಿಗಳು-ಕಲಾವಿದರು ಕಮ್ಮಟಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸುವರು. ಕನಿಷ್ಠ ಒಂದು ಕೃತಿ ಪ್ರಕಟಿಸಿರುವ ಯುವ ಲೇಖಕರು ಪಾಲ್ಗೊಳ್ಳಬಹುದು. ಆಯ್ಕೆಯಾದ ಲೇಖಕರಿಗೆ ಊಟ, ವಸತಿ ಮತ್ತು ಪ್ರಯಾಣ ಭತ್ಯೆ ನೀಡಲಾಗುವುದು. ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ. ಆಸಕ್ತರು, ಮಾಹಿತಿಗೆ ಎಚ್.ಎಲ್. ಪುಷ್ಪಾ ಮೊ: 94800 51222/ ಎನ್.ಎಂ. ಕುಲಕರ್ಣಿ ಮೊ: 97319 29731 ಸಂಪರ್ಕಿಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.