ಕಾವ್ಯ ಕಮ್ಮಟ ಅ. 18ರಿಂದ

7

ಕಾವ್ಯ ಕಮ್ಮಟ ಅ. 18ರಿಂದ

Published:
Updated:

ಹಾವೇರಿ: ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಸಹಯೋಗದಲ್ಲಿ ಅ.18 ರಿಂದ ಮೂರು ದಿನಗಳ ಕಾಲ ಕಾಗಿನೆಲೆಯಲ್ಲಿ ನಡೆಯುವ ‘ಅರಿವಿನ ಯಾನ ಕಾವ್ಯ ಕಮ್ಮಟ’ವನ್ನು ಕರ್ನಾ­ಟಕ ಜಾನಪದ ವಿಶ್ವವಿದ್ಯಾಲ­ಯದ ಕುಲಪತಿ ಡಾ. ಅಂಬಳಿಕೆ ಹಿರಿಯಣ್ಣ ಉದ್ಘಾಟಿಸಲಿದ್ದಾರೆ ಎಂದು ಸಮಾಜ­ವಿಜ್ಞಾನ ಅಧ್ಯಯನ ಮತ್ತು ಸಂಶೋ­ಧನಾ ಸಂಸ್ಥೆಯ ಕೇಂದ್ರ ಸಂಯೊಜಕ ಬಿ.ಪೀರ್‌ಬಾಷಾ ಹೇಳಿದರು.ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.18 ರಂದು ಪ್ರತಿಭಟನೆಯ ಅಸ್ತ್ರವಾಗಿ ಕಾವ್ಯ ಎಂಬ ವಿಷಯದಲ್ಲಿ ಪಂಪನ ಕುರಿತು ಡಾ. ಎನ್.ಎಸ್. ತಾರಾನಾಥ, ಜನ್ನನ ಕುರಿತು ಡಾ. ಜಿ. ರಾಜಶೇಖರ, ಅಕ್ಕ­ಮ­ಹಾದೇವಿ ಕುರಿತು ಡಾ. ಸಿರಾಜ್ ಅಹ್ಮದ, ಬಸವಣ್ಣನ ಕುರಿತು ಡಾ. ಅಮರೇಶ ನುಗಡೋಣಿ, ಕನಕದಾಸರ ಕುರಿತು ಡಾ. ಶಿವರಾಮಶೆಟ್ಟಿ, ಕುವೆಂಪು ಕುರಿತು ಡಾ. ಚಂದ್ರಶೇಖರ ನಂಗಲಿ ಮಾತ­ನಾಡಲಿದ್ದಾರೆ ಎಂದರು.ನನ್ನಕಾವ್ಯ ನನ್ನ ನೋಟದಲ್ಲಿ ಎಚ್.ಎಲ್. ಪುಷ್ಟಾ, ಗೋವಿಂದಯ್ಯ, ಬಿ. ಪೀರ್‌ಭಾಷ ಮಾತನಾಡುವರು. ನಂತರ ಮೈಲಾರಲಿಂಗರ ಕುರಿತು ಜಾನಪದ ಮಹಾಕಾವ್ಯ ನಡೆಯಲಿದೆ. ಡಾ. ಅರುಣ ಜೋಳದಕೊಡ್ಲಿಗಿ ಕಾವ್ಯ ಪ್ರವೇಶ ಮಾಡಿದರೆ, ಮೈಲಾರ ಗೊರ­ವರು ಕಾವ್ಯ ದರ್ಶನ ಮಾಡಿಸ­ಲಿದ್ದಾರೆ ಎಂದು ತಿಳಿಸಿದರು.ಅ. ೧೯ರಂದು ಕಾವ್ಯಾನುಸಂಧಾ­ನದಲ್ಲಿ ಹರಿಹರ ಕವಿ ಕುರಿತು ಡಾ. ಜಯಪ್ರಕಾಶ ಶೆಟ್ಟಿ, ರಾಘವಾಂಕರ ಕುರಿತು ಡಾ. ಕಾ.ವೆಂ. ಶ್ರೀನಿವಾಸ, ಹಾಗೂ ಕುಮಾರವ್ಯಾಸರ ಕುರಿತು ಡಾ. ಕೃಷ್ಣಮೂರ್ತಿ ಹನೂರು,  ಕಾವ್ಯದ ಲಯ, ವಿನ್ಯಾಸ, ಅರ್ಥ­ವ್ಯಾಪ್ತಿ (ಒಂದು ಕವಿತೆಯ ಸುತ್ತ) ಯಲ್ಲಿ ಪಂಜೆಮಂಗೇಶರಾಯರ ಕವಿತೆಯ ಕುರಿತು ಡಾ. ಕಿಕ್ಕೇರಿ ನಾರಾಯಣ, ಬೇಂದ್ರೆ ಕವಿತೆ ಕುರಿತು ಕೇಶವ ಶರ್ಮ, ಅಡಿಗರ ಕವಿತೆ ಕುರಿತು ಪಟ್ಟಾಭಿರಾಮ ಸೋಮಯಾಜಿ ಉಪನ್ಯಾಸ ನೀಡಲಿ­ದ್ದಾರೆ ಎಂದು ಹೇಳಿದರು.ಕಾವ್ಯಾನುಸಂಧಾನದಲ್ಲಿ ಅಲ್ಲ­ಮಪ್ರ­ಭುಗಳ ಕುರಿತು ಡಾ. ನಟರಾಜ್ ಬೂದಾಳ್, ಶಿಶುನಾಳ ಶರೀಫರ ಕುರಿತು ಎಂ.ಬಿ. ವಕ್ಕುಂದ, ಮಧುರ ಚೆನ್ನರ ಕುರಿತು ಡಾ. ಪ್ರಲ್ಹಾದ ಅಗಸನಕಟ್ಟೆ, ನನ್ನ ಕಾವ್ಯ ನನ್ನ ನೋಟದಲ್ಲಿ ಶಂಕರ ಕಟಗಿ, ಆರೀಫ್ ರಾಜ, ಅನಸೂಯ ಕಾಂಬಳೆ ಮಾತನಾಡುವರು. ನಂತರ ತತ್ವಪದ ಲೋಕದ ಕುರಿತು ತತ್ವಪದ ಗಾಯನ ಸ್ಥಳೀಯ ಕಲಾವಿದರಿಂದ ನಡೆಯಲಿದೆ ಎಂದರು.ಅ. ೨೦ರಂದು ನಾದದ ಹಾದಿಯಲ್ಲಿ ಲಕ್ಷ್ಮೀಶ ಕವಿ ಕುರಿತು ಲಕ್ಷ್ಮೀಶ ತೋಳ್ಪಾಡಿ, ಬೇಂದ್ರೆ ಕುರಿತು ಡಾ. ರಾಜೇಂದ್ರ ಚೆನ್ನಿ, ಹೊಸ ದಾರಿಯ ಹುಡುಕಾಟದಲ್ಲಿ ಕವಿ ಸಿದ್ದಲಿಂಗಯ್ಯ ಕುರಿತು ಡಾ. ರಹಮತ್ ತರೀಕೆರೆ, ಎಚ್.ಎಸ್. ಶಿವಪ್ರಕಾಶ ಕುರಿತು ಡಾ. ಬಂಜಗೆರೆ ಜಯಪ್ರಕಾಶ, ಕಾವ್ಯ, ಸಂಘರ್ಷದ ಮಾರ್ಗದಲ್ಲಿ ದಲಿತ ಕಾವ್ಯದ ಕುರಿತು ಡಾ. ಮೊಗಳ್ಳಿ ಗಣೇಶ, ಮಹಿಳಾ ಕಾವ್ಯದ ಕುರಿತು ಡಾ. ವಿನಯಾ ವಕ್ಕುಂದ ಮಾತನಾ­ಡುವರು.ಸಾಂಸ್ಕೃತಿಕ ಬಿಕ್ಕಟ್ಟುಗಳು, ಬರಹ­ಗಾರರ ಹೊಣೆಗಾರಿಕೆ ಕುರಿತು ಡಾ. ಎಚ್.ಎಸ್. ಅನುಪಮಾ ವಿಷಯ ಮಂಡಿಸುವರು. ಡಾ. ಜಗದೀಶ ಕೊಪ್ಪ, ಬಿ.ಟಿ. ಜಾಹ್ನವಿ, ಡಾ. ಮಹಾಂತೇಶ ನವಲಕಲ್, ಡಾ. ಎಸ್.ಬಿ. ಜೋಗೂರ, ಡಾ. ನಿಂಗಪ್ಪ ಮುದೇನೂರ ಚರ್ಚಿಸುವರು. ನಂತರ ಸಮಾರೋಪ ನಡೆಯಲಿದ್ದು, ಡಾ. ರಹಮತ್ ತರೀಕೆರೆ, ಸಾಹಿತಿ ಸತೀಶ ಕುಲಕರ್ಣಿ ಪಾಲ್ಗೊಳ್ಳುವರು ಎಂದು ಬಿ. ಪೀರ್‌ಭಾಷ ತಿಳಿಸಿದರು.ಅ. 20ರಂದು ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿನ ಹಂಪಿ ವಿವಿ ಪ್ರಾಧ್ಯಾಪಕ ಡಾ. ರಹ­ಮತ್‌ ತರೀಕೆರೆ, ಜಿಲ್ಲಾ ನ್ಯಾಯಾ­ಧೀಶ ಎಚ್‌.ಪಿ.ಸಂದೇಶ ಹಾಗೂ ಸಾಹಿತಿ ಸತೀಶ ಕುಲಕರ್ಣಿ ಭಾಗವಹಿ­ಸಲಿದ್ದಾರೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಕಾವ್ಯಭೂಮಿ ಸಂಯೋಜಕ ಎಂ.ಡಿ.ಒಕ್ಕುಂದ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಬಿ.­ಮಾಸ­ಣಗಿ ಹಾಗೂ ವಿರೂಪಾಕ್ಷಪ್ಪ ಪಡಿ­ಗೋದಿ ಹಾಜರಿದ್ದರು.ಹೆಸರು ನೋಂದಾಯಿಸಿ

ಯುವ ಮನಸುಗಳಲ್ಲಿ ಕಾವ್ಯ ಪರಂಪರೆ ಬೆಳೆಸಲು ಕಾವ್ಯ ಕಮ್ಮಟ ನಡೆಯಲಿದೆ ಎಂದರು. ಕಮ್ಮಟದಲ್ಲಿ 40 ಶಿಬಿರಾ­ರ್ಥಿಗಳಿಗೆ ತರಬೇತಿ ನೀಡಲಾ­ಗುವುದು ಆದ್ದರಿಂದ ಆಸಕ್ತರು ಕಮ್ಮಟದ ಜಿಲ್ಲಾ ಸಂಯೋಜಕ ಬಿ.ಶ್ರೀನಿವಾಸ (ಮೊ: 9916332273) ಅವರಲ್ಲಿ ಹೆಸರು ನೋಂದಾಯಿಸಬೇಕು ಎಂದು ಪೀರ್ ಬಾಷಾ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry